ರಾಜಸ್ಥಾನ: ತಾಮ್ರದ ಗಣಿ ಪರಿಶೀಲನೆಗೆ ಹೋಗಿ 1,800 ಅಡಿ ಆಳದಲ್ಲಿ ಸಿಕ್ಕಿಬಿದ್ದ 14 ಅಧಿಕಾರಿಗಳು

ತಾಮ್ರದ ಕಣಿ ಪರಿಶೀಲನೆಗೆ ಹೋದ ಅಧಿಕಾರಿಗಳು 1,800 ಅಡಿ ಆಳದಲ್ಲಿ ಸಿಲಿಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಲಿಫ್ಟ್​ನ ಹಗ್ಗ ತುಂಡಾದ ಪರಿಣಾಮ 14 ಅಧಿಕಾರಿಗಳು ಸುಮಾರು 12 ಗಂಟೆಗಳ ಕಾಲ ಸಿಲುಕಿದ್ದರು.

ರಾಜಸ್ಥಾನ: ತಾಮ್ರದ ಗಣಿ ಪರಿಶೀಲನೆಗೆ ಹೋಗಿ 1,800 ಅಡಿ ಆಳದಲ್ಲಿ ಸಿಕ್ಕಿಬಿದ್ದ 14 ಅಧಿಕಾರಿಗಳು
ಲಿಫ್ಟ್​
Follow us
ನಯನಾ ರಾಜೀವ್
|

Updated on:May 15, 2024 | 8:11 AM

ರಾಜಸ್ಥಾನದ ಜುಂಜುನುದಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಮಂಗಳವಾರ ರಾತ್ರಿ ಭಾರಿ ಅಪಘಾತ ಸಂಭವಿಸಿದೆ. ಲಿಫ್ಟ್​ ಚೈನ್ ತುಂಡಾಗಿ ಗಣಿ ತಪಾಸಣೆಗೆಂದು ಹೋದ ಅಧಿಕಾರಿಗಳು ಗಣಿಯ ಆಳದಲ್ಲಿ ಬರೋಬ್ಬರಿ 12 ತಾಸುಗಳನ್ನು ಜೀವ ಬಿಗಿ ಹಿಡಿದುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಮಾಹಿತಿ ಪ್ರಕಾರ 1875 ಅಡಿ ಆಳದಲ್ಲಿ ಲಿಫ್ಟ್ ಚೈನ್ ತುಂಡಾಗಿದೆ. ಬರೋಬ್ಬರಿ 12 ಗಂಟೆಗಳ ಬಳಿಕ ಅಧಿಕಾರಿಗಳನ್ನು ರಕ್ಷಿಸಲಾಯಿತು.

ಗಣಿಯಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಗಳಿಗೆ ಔಷಧಿಗಳು ಮತ್ತು ಆಹಾರದ ಪ್ಯಾಕೆಟ್‌ಗಳನ್ನು ಆಡಳಿತವು ಕಳುಹಿಸಿತ್ತು. ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವನ್ನು ಸಹ ಅಲ್ಲಿ ನಿಯೋಜಿಸಲಾಗಿತ್ತು. ಮಾಹಿತಿ ಪ್ರಕಾರ, ಮೇ 13 ರಿಂದ ಈ ಗಣಿಯಲ್ಲಿ ತಪಾಸಣೆ ಕಾರ್ಯ ನಡೆಯುತ್ತಿತ್ತು. ಈ ಅನುಕ್ರಮದಲ್ಲಿ ಮೇ 14ರ ಸಂಜೆ ಮುಖ್ಯ ವಿಜಿಲೆನ್ಸ್ ಸೇರಿದಂತೆ ಹಲವು ಅಧಿಕಾರಿಗಳು ಗಣಿಗಾರಿಕೆಗೆ ತೆರಳಿ ಪರಿಶೀಲನೆ ನಡೆಸಿದ್ದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಖೇತ್ರಿ ಶಾಸಕ ಧರಂಪಾಲ್ ಗುರ್ಜರ್ ಕೂಡ ಸ್ಥಳಕ್ಕೆ ಧಾವಿಸಿದರು.ಚುನಾವಣಾ ಪ್ರಚಾರಕ್ಕಾಗಿ ಹರ್ಯಾಣಕ್ಕೆ ತೆರಳಿದ್ದೆ ಆದರೆ ಗಣಿ ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆಗಮಿಸಿರುವುದಾಗಿ ಅವರು ಎಎನ್‌ಐಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಟ್ಟಿ ಚಿನ್ನದ ಗಣಿ ಉದ್ಯೋಗ ನೇಮಕಾತಿಯಲ್ಲಿ ಅಕ್ರಮ: ಬರೆದದ್ದು ಒಂದು ಪರೀಕ್ಷೆ, ಪ್ರಕಟಿಸಿದ್ದು ಎರಡೆರಡು ಫಲಿತಾಂಶ

ಅಧಿಕಾರಿಗಳೊಂದಿಗೆ ಪತ್ರಕರ್ತ ವಿಕಾಸ್ ಶರ್ಮಾ ಕೂಡ ಒಳಗೆ ಸಿಕ್ಕಿಬಿದ್ದಿದ್ದರು. ಮುಖ್ಯ ವಿಜಿಲೆನ್ಸ್ ಅಧಿಕಾರಿ ಉಪೇಂದ್ರ ಪಾಂಡೆ, ಗಣಿ ಉಪ ಪ್ರಧಾನ ವ್ಯವಸ್ಥಾಪಕ ಎಕೆ ಶರ್ಮಾ, ವಿನೋದ್ ಸಿಂಗ್ ಶೇಖಾವತ್, ಎಕೆ ಬೈರಾ, ಅರ್ನವ್ ಭಂಡಾರಿ, ಯಶೋರಾಜ್ ಮೀನಾ, ವನೇಂದ್ರ ಭಂಡಾರಿ, ನಿರಂಜನ್ ಸಾಹು, ಕರಣ್ ಸಿಂಗ್ ಗೆಹ್ಲೋಟ್, ಪ್ರೀತಮ್ ಸಿಂಗ್, ಹರ್ಸಿರಾಮ್ ಮತ್ತು ಭಗೀರಥ ಅವರು ಒಳಗೆ ಇದ್ದರು.

ಗಣಿಯಿಂದ ಸುರಕ್ಷಿತವಾಗಿ ಹೊರತೆಗೆದ ಬಳಿಕ ಎಲ್ಲಾ ಅಧಿಕಾರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು 1,800 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು.ಲಿಫ್ಟ್​ನ ಹಗ್ಗ ತುಂಡಾಗಿ ಈ ಘಟನೆ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:02 am, Wed, 15 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ