AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಟ್ಟಿ ಚಿನ್ನದ ಗಣಿ ಉದ್ಯೋಗ ನೇಮಕಾತಿಯಲ್ಲಿ ಅಕ್ರಮ: ಬರೆದದ್ದು ಒಂದು ಪರೀಕ್ಷೆ, ಪ್ರಕಟಿಸಿದ್ದು ಎರಡೆರಡು ಫಲಿತಾಂಶ

ಭಾರತದಲ್ಲಿ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ರೂ.650 ಕೋಟಿಗೂ ಹೆಚ್ಚು ವಹಿವಾಟು ಹೊಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಖಾಲಿ ಇರುವ ಇ-3 ಹುದ್ದೆಗಳಿಗೆ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಹಟ್ಟಿ ಚಿನ್ನದ ಗಣಿ ಉದ್ಯೋಗ ನೇಮಕಾತಿಯಲ್ಲಿ ಅಕ್ರಮ: ಬರೆದದ್ದು ಒಂದು ಪರೀಕ್ಷೆ, ಪ್ರಕಟಿಸಿದ್ದು ಎರಡೆರಡು ಫಲಿತಾಂಶ
ಹಟ್ಟಿ ಚಿನ್ನದ ಗಣಿ
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು|

Updated on: Dec 28, 2023 | 8:42 AM

Share

ರಾಯಚೂರು, ಡಿ.28: ಜಿಲ್ಲೆಯ ಹಟ್ಟಿ ಚಿನ್ನದ ಗಣಿ (Hutti Gold Mines) ಉದ್ಯೋಗ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರು (Raichur)  ಜಿಲ್ಲೆ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಚಿನ್ನದ ಗಣಿ ಕಂಪನಿಯ ಮ್ಯಾನೇಜ್ ಮೆಂಟ್ ಟ್ರೈನಿಯ 37 ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಬೆಳಕಿಗೆ ಬಂದರೂ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ತುಟಿಬಿಚ್ಚಿಲ್ಲ. K.E.A ಯನ್ನ ಕೈಬಿಟ್ಟು ಖಾಸಗಿ‌ ಏಜೆನ್ಸಿ ಮೂಲಕ ಪರೀಕ್ಷೆ ನಡೆಸಿ ದಾಖಲಾತಿಗಳು ಸರಿ ಇಲ್ಲ ಎಂಬ ನಾನಾ ಕಾರಣಗಳನ್ನು ಕೊಟ್ಟು ಅರ್ಜಿ ಹಾಕಿದ್ದ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಿ ತಮಗೆ ಬೇಕಾದವರನ್ನು ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಟ್ಟು ನೇಮಕಾತಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಅಭ್ಯರ್ಥಿಗಳು ಒಂದು ಪರೀಕ್ಷೆ ಬರೆದಿದ್ದು ಎರಡೆರಡು ಫಲಿತಾಂಶ ಪ್ರಕಟವಾಗಿದೆ.

ಮ್ಯಾನೇಜ್ ಮೆಂಟ್ ಟ್ರೈನಿ (ಇ-3) ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಖಾಲಿಯಾಗಿದ್ದ 37 ಹುದ್ದೆಗಳಿಗೆ ಒಟ್ಟು 844 ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 570 ಜನ ಅಭ್ಯರ್ಥಿಗಳನ್ನು ಗಣಿ ಕಂಪನಿ ರಿಜೆಕ್ಟ್ ಮಾಡಿತ್ತು. ಉಳಿದ ಅಭ್ಯರ್ಥಿಗಳ ದಾಖಲಾತಿಗಳು ಸರಿಯಿಲ್ಲ ಅಂತ ರಿಜೆಕ್ಟ್ ಮಾಡಿ ತಮಗೆ ಬೇಕಾದ ಕೇವಲ 93 ಜನ ಅಭ್ಯರ್ಥಿಗಳನ್ನ ಪರೀಕ್ಷೆ ಬರೆಯಲು ಆಯ್ಕೆ ಮಾಡಲಾಗಿತ್ತು. ಟ್ರೈನಿಯ ಹುದ್ದೆಗೆ ಪರೀಕ್ಷೆ ಬರೆದ 93 ಜನ ಅಭ್ಯರ್ಥಿಗಳು ಫೇಲ್ ಆಗಿದ್ದು ಪರೀಕ್ಷೆ ಫೇಲ್ ಆದ ಅಭ್ಯರ್ಥಿಗಳಲ್ಲಿಯೇ 1 ಇಷ್ಟೂ 3 (1:3)ಎಂದು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆ ಮಾಡಿ ಅವರನ್ನ ಅರ್ಹ ಅಭ್ಯರ್ಥಿಗಳು ಎಂದು ಘೋಷಿಸಲಾಗಿದೆ. ಪರೀಕ್ಷೆ ನಡೆಸಲು K.E.A (ಕರ್ನಾಟಕ ಎಕ್ಸಾಮಿನೇಶನ್ ಅಥಾರಿಟಿ)ಯನ್ನ ಕೈಬಿಟ್ಟು ಖಾಸಗಿ‌ ಏಜೆನ್ಸಿ ಮೂಲಕ ಪರೀಕ್ಷೆ ನಡೆಸಲಾಗಿದೆ. ಇನ್ನು ಪರೀಕ್ಷೆ ನಡೆಸಲು 70 ಲಕ್ಷ ರೂ ಖರ್ಚು ಮಾಡಲಾಗಿದೆ. ಇನ್ನು ಕೊನೆ ಹಂತದ ಅಭ್ಯರ್ಥಿಗಳು ಒಂದು ಪರೀಕ್ಷೆ ಬರೆದಿದ್ದು ಅವರಿಗೆ ಎರೆಡೆರೆಡು ಫಲಿತಾಂಶ ಪ್ರಕಟಿಸಲಾಗಿದೆ. ಈ ಮೂಲಕ‌ ಆಕ್ರಮ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಅಧಿಕಾರಿಗಳು ಶಾಮೀಲು ಆರೋಪ

ಭಾರತದಲ್ಲಿ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು ರೂ.650 ಕೋಟಿಗೂ ಹೆಚ್ಚು ವಹಿವಾಟು ಹೊಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಖಾಲಿ ಇರುವ ಇ-3 ಹುದ್ದೆಗಳಿಗೆ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ