Manipur Violence: ಮಣಿಪುರ ಹಿಂಸಾಚಾರ ತನಿಖೆಗೆ ಸಿಬಿಐ ವಿಶೇಷ ತಂಡ ರಚನೆ

|

Updated on: Jun 09, 2023 | 6:28 PM

ಮಣಿಪುರ ಹಿಂಸಾಚಾರದ ತನಿಖೆಗಾಗಿ ಸಿಬಿಐ ವಿಶೇಷ ತನಿಖಾ ತಂಡವನ್ನು ರಚಿಸಿದೆ

Manipur Violence: ಮಣಿಪುರ ಹಿಂಸಾಚಾರ ತನಿಖೆಗೆ ಸಿಬಿಐ ವಿಶೇಷ ತಂಡ ರಚನೆ
ಮಣಿಪುರ ಹಿಂಸಾಚಾರ
Follow us on

ಇಂಫಾಲ್: ಮಣಿಪುರ ಹಿಂಸಾಚಾರದ ತನಿಖೆಗಾಗಿ ಸಿಬಿಐ ವಿಶೇಷ ತನಿಖಾ ತಂಡವನ್ನು ರಚಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಆರು ಪ್ರಾಥಮಿಕ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿದೆ ಮತ್ತು ಮಣಿಪುರದಲ್ಲಿ ಮೇ 3 ರಂದು ಪ್ರಾರಂಭವಾದ ಇತ್ತೀಚಿನ ಹಿಂಸಾಚಾರದ ಹಿಂದೆ ಪಿತೂರಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಹಿಂಸಾಚಾರ, ಪ್ರಾಥಮಿಕವಾಗಿ ಕುಕಿ ಮತ್ತು ಮೈತೀ ನಡುವೆ ಸಮುದಾಯಗಳ ನಡುವೆ ಮೀಸಲಾತಿ ವಿಚಾರವಾಗಿ ನಡೆದಿದೆ ಎಂದು ಹೇಳಲಾಗಿತ್ತು. 100ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ ಮತ್ತು 35,000 ಕ್ಕೂ ಹೆಚ್ಚು ಜನರ ವಲಸೆ ಬಿಟ್ಟಿದ್ದಾರೆ.

ಮಣಿಪುರ ಸರ್ಕಾರವು ಸಿಬಿಐನ ತನಿಖೆಗಾಗಿ ಆಯ್ಕೆ ಮಾಡಿದ ಆರು ಪ್ರಕರಣಗಳಲ್ಲಿ ಜನಾಂಗೀಯ ಹಿಂಸಾಚಾರವು ಪೂರ್ವ ಯೋಜಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆಯನ್ನು ನಡೆಸಲಾಗುತ್ತಿದೆ. ಹಿಂಸಾಚಾರ ಭುಗಿಲೆದ್ದ ನಂತರ ರಾಜ್ಯದಲ್ಲಿ ದಾಖಲಾದ 3,700 ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾ ಶಾಸಕರೊಂದಿಗಿನ ಸಭೆಯಲ್ಲಿ, ಕುಕಿ ಮತ್ತು ಮೈಟೆಯಿ ಸಮುದಾಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಕರೆ ನೀಡಿದ್ದಾರೆ. ಆಡಳಿತಕ್ಕೆ ಸಹಾಯವಾಗುವಂತೆ ಮತ್ತು ಜನರ ಅಗತ್ಯಕ್ಕೆ ಸಹಕಾರಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Manipur Violence Explainer: ದ್ವೇಷದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಮಣಿಪುರ, ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್, ಮಣಿಪುರದಲ್ಲಿ ಪರಿಸ್ಥಿತಿ ಶಾಂತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ, ಕಳೆದ 48 ಗಂಟೆಗಳಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ವರದಿಯಾಗಿಲ್ಲ. ಮಣಿಪುರದಲ್ಲಿ ನಿರಾಶ್ರಿತ ಜನರಿಗೆ ಸಹಾಯ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ (MHA) 101.75 ಕೋಟಿ ರೂ. ಪರಿಹಾರ ಪ್ಯಾಕೇಜ್ ಅನ್ನು ನೀಡಿದೆ ಎಂದು ಹೇಳಿದೆ.

ಇದೀಗ  ಮತ್ತೆ ಮಣಿಪುರ ಹಿಂಸಾಚಾರದಲ್ಲಿ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ, 2 ಮಂದಿ ಗಾಯಗೊಂಡಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:54 pm, Fri, 9 June 23