Mumbai Mira Road murder: ಮನೋಜ್ ಮತ್ತು ಸರಸ್ವತಿಯದ್ದು ಲಿವ್- ಇನ್ ರಿಲೇಷನ್​​ಶಿಪ್​​​ ಅಲ್ಲ, ಅವರು ಗಂಡ ಹೆಂಡತಿ?

ಮನೋಜ್ ಮತ್ತು ಸರಸ್ವತಿ ಅವರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ನೆರೆಹೊರೆಯವರು ಕೊಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ನೆರೆಹೊರೆಯವರ ಪ್ರಕಾಪ ಮನೋಜ್ ಮತ್ತು ಸರಸ್ವತಿ ಯಾರೊಂದಿಗೂ ಬೆರೆಯದ ಲೈವ್-ಇನ್ ದಂಪತಿಗಳು

Mumbai Mira Road murder: ಮನೋಜ್ ಮತ್ತು ಸರಸ್ವತಿಯದ್ದು ಲಿವ್- ಇನ್ ರಿಲೇಷನ್​​ಶಿಪ್​​​ ಅಲ್ಲ, ಅವರು ಗಂಡ ಹೆಂಡತಿ?
ಮನೋಜ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 09, 2023 | 7:15 PM

ಮುಂಬೈ ಮೀರಾ ರೋಡ್ ಹತ್ಯೆ ಪ್ರಕರಣದಲ್ಲಿ (Mumbai Mira Road murder)  32 ವರ್ಷದ ಸರಸ್ವತಿ ವೈದ್ಯಮತ್ತು ಮನೋಜ್ ಲಿವ್-ಇನ್ ರಿಲೇಷನ್​​ಶಿಪ್​​ (Live-in partner) ಇದ್ದದ್ದು ಅಲ್ಲ. ಅವರು ಆದರೆ ಪತಿ-ಪತ್ನಿಯಾಗಿದ್ದರು ಎಂದು ಸರಸ್ವತಿ ಅವರ ಸಹೋದರಿಯರು ಶುಕ್ರವಾರ ಪೊಲೀಸರಿಗೆ ತಿಳಿಸಿದ್ದಾರೆ. ಅವರ ವಯಸ್ಸಿನ ಅಂತರದಿಂದಾಗಿ ಮದುವೆಯನ್ನು ಬಹುಶಃ ರಹಸ್ಯವಾಗಿಡಲಾಗಿದೆ. ಮನೋಜ್ ಸಾನೆ ಅವರಿಗೆ 56 ವರ್ಷ, ಸರಸ್ವತಿ ಅವರಿಗೆ 32 ವರ್ಷ. ಇವರಿಬ್ಬರ ಮದುವೆ ಯಾವಾಗ ಆಗಿದ್ದು ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ ಎಂದು ಡಿಸಿಪಿ ಜಯಂತ್ ಬಜ್ಬಲೆ ತಿಳಿಸಿದ್ದಾರೆ. ವಯಸ್ಸಿನ ವ್ಯತ್ಯಾಸದ ಕಾರಣ ಅವರು ಮದುವೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸಲಿಲ್ಲ ಎಂದು ಡಿಸಿಪಿ ಹೇಳಿದರು. ಸರಸ್ವತಿಯ ಮೃತದೇಹದ ಅವಶೇಷಗಳ ಡಿಎನ್‌ಎಯನ್ನು ಮೂವರು ಸಹೋದರಿಯರೊ ಡಿಎನ್ಎ ಜತೆ ಹೊಂದಿಸಿ ನೋಡಲಾಗುವುದು ಎಂದಿದ್ದಾರೆ.

32 ವರ್ಷದ ಸರಸ್ವತಿ ವೈದ್ಯ ಅವರನ್ನು 56 ವರ್ಷದ ಮನೋಜ್ ಸಾನೆ ಕೊಲೆ ಮಾಡಿರುವ ಈ ಪ್ರಕರಣ ಈ ರೀತಿಯ ಹೊಸ ವಿವರಗಳು ಹೊರಹೊಮ್ಮುವುದರೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.

ಮನೋಜ್ ಮತ್ತು ಸರಸ್ವತಿ ಅವರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ನೆರೆಹೊರೆಯವರು ಕೊಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ನೆರೆಹೊರೆಯವರ ಪ್ರಕಾಪ ಮನೋಜ್ ಮತ್ತು ಸರಸ್ವತಿ ಯಾರೊಂದಿಗೂ ಬೆರೆಯದ ಲೈವ್-ಇನ್ ದಂಪತಿಗಳು. ಸರಸ್ವತಿ ಬೆಳೆದ ಅನಾಥಾಶ್ರಮದ ಕೆಲಸಗಾರರೊಬ್ಬರು ಸರಸ್ವತಿ ಅವರು ತಮ್ಮ ಚಿಕ್ಕಪ್ಪನೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಪೊಲೀಸರು ಮನೋಜ್ ಸಾನೆಯನ್ನು ಬಂಧಿಸಿದ ನಂತರ, ಸರಸ್ವತಿ ತನ್ನ ಮಗಳಂತೆ ಇದ್ದಳು ಆಕೆ ನನ್ನೊಂದಿಗೆ ಯಾವುದೇ ದೈಹಿಕ ಸಂಬಂಧ ಹೊಂದಿಲ್ಲ ಎಂದು ಸಾನೆ ಪೊಲೀಸರಿಗೆ ತಿಳಿಸಿದ್ದಾನೆ. ಮನೋಜ್ ಮತ್ತು ಸರಸ್ವತಿ ಪತಿ-ಪತ್ನಿ ಎಂದು ದು ಸರಸ್ವತಿಯ ಸಹೋದರಿಯರು ಹೇಳಿದ್ದು, ಮೂವರು ಸಹೋದರಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಇದನ್ನೂ ಓದಿ: Lovers Murder: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ

ಕೊಲೆಯೋ ಆತ್ಮಹತ್ಯೆಯೋ?

ಶವವನ್ನು ವಿಲೇವಾರಿ ಮಾಡಲು ನಾನು ಹಾಗೆ ಮಾಡಿದ್ದೆ ಎಂದು ಹೇಳಿದ ಮನೋಜ್,ಸರಸ್ವತಿ ವೈದ್ಯಳನ್ನು ಕೊಂದಿರುವುದಾಗಿ ಇನ್ನೂ ಒಪ್ಪಿಕೊಂಡಿಲ್ಲ. ಆತ ಮರ ಕಡಿಯುವ ಯಂತ್ರವನ್ನು ಖರೀದಿಸಿ ಅದರ ಮೂಲಕ ಸರಸ್ವತಿಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆ ಮಾಂಸವನ್ನು ಬೇಯಿಸಿ ನಾಯಿಗೆ ತಿನ್ನಿಸಿದ್ದಾನೆ ಎಂದು ಹೇಳಲಾಗಿದೆ. ಆತ ಹಿಂದೆಂದೂ ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನೋಡಿಲ್ಲ ಎಂದು ನೆರೆಹೊರೆಯವರು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?