CBSE 12th Board Exams 2021: ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದಿಲ್ಲ; ಜೂನ್ 1ರಂದು ಅಂತಿಮ ತೀರ್ಮಾನ ಪ್ರಕಟಗೊಳ್ಳುವ ಸಂಭವ

| Updated By: Digi Tech Desk

Updated on: May 23, 2021 | 5:15 PM

ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ 2021: ಅಲ್ಲದೇ, ಕಿರು ಅವಧಿಯ ಪರೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖ 19 ವಿಷಯಗಳಿಗೆ 90 ನಿಮಿಶಗಳ ಕಿರು ಅವಧಿಯ ಪರೀಕ್ಷೆ ನಡೆಸಿ, ಮಿಕ್ಕ ವಿಷಯಗಳಿಗೆ ವಿದ್ಯಾರ್ಥಿಗಳ ಈವರೆಗಿನ ಆಧಾರದ ಮೇಲೆ ಅಂಕಗಳನ್ನು ನೀಡುವ ಕುರಿತೂ ಚರ್ಚಿಸಲಾಯಿತು.

CBSE 12th Board Exams 2021: ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದಿಲ್ಲ; ಜೂನ್ 1ರಂದು  ಅಂತಿಮ ತೀರ್ಮಾನ  ಪ್ರಕಟಗೊಳ್ಳುವ ಸಂಭವ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಕೊವಿಡ್ ಪಿಡುಗಿನ ನಡುವೆ ಸಿಬಿಎಸ್​ಇ 12 ತರಗತಿ ಪರೀಕ್ಷೆ ನಡೆಸುವ ಕುರಿತು ಇಂದು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಹೊಮ್ಮಲಿಲ್ಲ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​ ಜೂನ್ 1ರಂದು ಪರೀಕ್ಷೆ ನಡೆಸುವ ಪದ್ಧತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಲಿದ್ದಾರೆ ಎಂದು ಹೇಳಲಾಗಿದೆ.ಸಭೆಯಲ್ಲಿ ಚರ್ಚೆಯಾದ ಅಬಿಪ್ರಾಯಗಳ ಸಾರಾಂಶವನ್ನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ತಲುಪಿಸಲಾಗಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಂತಿಮ ನಿರ್ಣಯ ಹೊರಬೀಳಲಿದೆ ಎಂದು ಸಹ ಹೇಳಲಾಗಿದೆ.

ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್​ ಮತ್ತು ಎಲ್ಲಾ ರಾಜ್ಯ ಸರ್ಕಾರಗಳ ಶಿಕ್ಷಣ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ಆಫ್​ಲೈನ್ ಪರೀಕ್ಷೆಗಳನ್ನು ನಡೆಸುವ ಕುರಿತು ಎರಡು ಅಭಿಪ್ರಾಯಗಳು ವ್ಯಕ್ತವಾದವು. ಕೊವಿಡ್ ಒಂದು ಹಂತಕ್ಕೆ ಹತೋಟಿಗೆ ಬಂದ ನಂತರ ಜುಲೈನಲ್ಲಿ ಸಿಬಿಎಸ್​​ಇ 12ನೇ ತರಗತಿ ಪರೀಕ್ಷೆ ಸಾಧ್ಯತೆಯ ಕುರಿತು ಹೆಚ್ಚಿನವರ ಒಲವು ವ್ಯಕ್ತವಾಯಿತು. ಅಲ್ಲದೇ, ಪರೀಕ್ಷೆಗಳನ್ನು ನಡೆಸಲು 3 ತಿಂಗಳ ಕಾಲಾವಧಿ ಬಳಸಿಕೊಳ್ಳಬೇಕು. ಮೊದಲ ತಿಂಗಳಲ್ಲಿ ಪರೀಕ್ಷಾ ಪೂರ್ವ ಸಿದ್ಧತೆಗೆ, ಇನ್ನುಳಿದ ಎರಡು ತಿಂಗಳನ್ನು ಪರೀಕ್ಷೆ ನಡೆಸಲು ಮತ್ತು ಫಲಿತಾಂಶ ಘೋಷಣೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಅಲ್ಲದೇ, ಕಿರು ಅವಧಿಯ ಪರೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖ 19 ವಿಷಯಗಳಿಗೆ 90 ನಿಮಿಶಗಳ ಕಿರು ಅವಧಿಯ ಪರೀಕ್ಷೆ ನಡೆಸಿ, ಮಿಕ್ಕ ವಿಷಯಗಳಿಗೆ ವಿದ್ಯಾರ್ಥಿಗಳ ಈವರೆಗಿನ ಆಧಾರದ ಮೇಲೆ ಅಂಕಗಳನ್ನು ನೀಡುವ ಕುರಿತೂ ಚರ್ಚಿಸಲಾಯಿತು.

ಇದನ್ನೂ ಓದಿ: Karnataka PUC Exam 2021: ದ್ವಿತೀಯ ಪಿಯು ಪರೀಕ್ಷೆ ಅನಿವಾರ್ಯ,ಕೊವಿಡ್ ನಂತರ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಸಿದ್ಧವಿದೆ: ಸಚಿವ ಸುರೇಶ್ ಕುಮಾರ್

Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ
(CBSE board Exams 2021 not cancelled likely held in July Says Ramesh Pokhriyal)

Published On - 5:12 pm, Sun, 23 May 21