AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ಕಠಿಣ ಕ್ರಮ; 5 ಲಕ್ಷದವರೆಗೆ ದಂಡ

ಫಿಸಿಕ್ಸ್‌ ವಲ್ಹಾ ಲಿಮಿಟೆಡ್ ಡಿಜಿಟಲ್ ಇಂಟರ್‌ಫೇಸ್‌ಗಳಲ್ಲಿ ಯಾವುದೇ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಯೋಜಿಸಬಾರದು ಮತ್ತು ಈಗಾಗಲೇ ಆಗಿರುವ ಲೋಪಕ್ಕೆ 5 ಲಕ್ಷ ರೂ. ದಂಡ ಪಾವತಿಸಲು ನಿರ್ದೇಶಿಸಲಾಗಿದೆ. ಮ್ಯಾಕ್‌ಅಫೀ ಸಾಫ್ಟ್‌ವೇರ್ ಲಿಮಿಟೆಡ್ ತನ್ನ ಪ್ಲಾಟ್‌ಫಾರ್ಮ್, ವೆಬ್‌ಸೈಟ್, ಅಪ್ಲಿಕೇಶನ್ ಅಥವಾ ಯಾವುದೇ ಇತರ ಡಿಜಿಟಲ್ ಇಂಟರ್‌ಫೇಸ್‌ನಲ್ಲಿ ಯಾವುದೇ ಡಾರ್ಕ್ ಪ್ಯಾಟರ್ನ್‌ಗಳನ್ನು ಬಳಸಬಾರದು ಮತ್ತು ಈವರೆಗಿನ ತಪ್ಪಿಗೆ 1,00,000 ರೂ. ದಂಡ ಪಾವತಿಸುವಂತೆ CCPA ನಿರ್ದೇಶಿಸಿದೆ.

ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ಕಠಿಣ ಕ್ರಮ; 5 ಲಕ್ಷದವರೆಗೆ ದಂಡ
E Commece SiteImage Credit source: Getty Image
ಸುಷ್ಮಾ ಚಕ್ರೆ
|

Updated on: Jun 03, 2026 | 9:21 PM

Share

ನವದೆಹಲಿ, ಜೂನ್ 3: ಗ್ರಾಹಕರನ್ನು ವಂಚಿಸುವ ಇ-ಕಾಮರ್ಸ್ ವೆಬ್‌ಸೈಟ್‌ಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಭಾರಿ ಸಮರ ಸಾರಿವೆ. ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ ಮೋಸ ಮಾಡುವ ‘ಡಾರ್ಕ್ ಪ್ಯಾಟರ್ನ್ಸ್‌’ ಹಾವಳಿಗೆ ಬ್ರೇಕ್ ಹಾಕಲು CCPA (Central Consumer Protection Authority) ಈಗ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಭಾರಿ ದಂಡ ವಿಧಿಸಿದೆ. ಡಿಜಿಟಲ್, ಇ ಕಾಮರ್ಸ್ ವೇದಿಕೆಗಳಲ್ಲಿ ಕರಾಳ ಮಾದರಿ (ಡಾರ್ಕ್ ಪ್ಯಾಟರ್ನ್) ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಳ್ಳುತ್ತಿದ್ದು, 2 ಪ್ರಮುಖ ಕಂಪನಿಗಳಿಗೆ 5 ಲಕ್ಷ ರೂ.ವರೆಗೆ ದಂಡ ವಿಧಿಸಿದ್ದಲ್ಲದೆ, ಗ್ರಾಹಕರನ್ನು ಮೋಸಗೊಳಿಸದಂತೆ ನಿರ್ದೇಶನ ನೀಡಿದೆ.

ಡಾರ್ಕ್ ಪ್ಯಾಟರ್ನ್ ನಿಂದಾಗಿ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದ PhysicsWallah ಮತ್ತು McAfee ಕಂಪನಿ ವಿರುದ್ಧ ಸ್ವಯಂ ಕಾರ್ಯಾಚರಣೆ ನಡೆಸಿದ ಸಿಸಿಪಿಎ, ಫಿಸಿಕ್ಸ್ ವಲ್ಲಾಹ್​ಗೆ 5 ಲಕ್ಷ ರೂ. ಮತ್ತು ಮ್ಯಾಕ್‌ಅಫೀಗೆ 1 ಲಕ್ಷ ರೂ. ದಂಡ ವಿಧಿಸಿದೆ.

ಇದನ್ನೂ ಓದಿ: ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಜನರ ದಾರಿತಪ್ಪಿಸುವ ಜಾಹೀರಾತು: ಎರಡು ಕೋಚಿಂಗ್ ಸಂಸ್ಥೆಗೆ 7 ಲಕ್ಷ ರೂ. ದಂಡ

CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಗ್ರಾಹಕರನ್ನು ದಾರಿ ತಪ್ಪಿಸುವ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಯ್ಕೆಗಳ ಮೇಲೆ ಪ್ರಭಾವ ಬೀರುವ ಡಾರ್ಕ್ ಪ್ಯಾಟರ್ನ್ ಬಳಸಿದ್ದಕ್ಕಾಗಿ ಫಿಸಿಕ್ಸ್‌ವಾಲಾ ಲಿಮಿಟೆಡ್ ಮತ್ತು ಮ್ಯಾಕ್‌ಅಫೀ ಸಾಫ್ಟ್‌ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುವ ಮತ್ತು ಡಿಜಿಟಲ್ ಜಗತ್ತಿನಲ್ಲಿ ಜನರನ್ನು ದಾರಿ ತಪ್ಪಿಸುವ ಕಂಪನಿಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘಿಸುವ ಕಂಪನಿಗಳು ಅಥವಾ ವೆಬ್‌ಸೈಟ್‌ಗಳಿಗೆ 5 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಷ್ಟಾದರೂ ಸುಧಾರಿಸದ ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ಸಹ ನೀಡಲಾಗಿದೆ.

‘ಡಾರ್ಕ್ ಪ್ಯಾಟರ್ನ್’ ಅಂದರೆ ಏನು?:

ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳು, ಟಿಕೆಟ್ ಬುಕಿಂಗ್ ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳು ಗ್ರಾಹಕರಿಗೆ ತಿಳಿಯದಂತೆ ಅವರ ಜೇಬಿಗೆ ಕತ್ತರಿ ಹಾಕಲು ಬಳಸುವ ತಂತ್ರಜ್ಞಾನದ ತಂತ್ರಗಳನ್ನೇ ‘ಡಾರ್ಕ್ ಪ್ಯಾಟರ್ನ್’ ಎನ್ನಲಾಗುತ್ತದೆ. ನೀವು ಖರೀದಿಸುವ ವಸ್ತುವಿನ ಪಕ್ಕದಲ್ಲಿ “ಇನ್ನೂ ಕೇವಲ 2 ನಿಮಿಷ ಮಾತ್ರ ಬಾಕಿ ಇದೆ” ಅಥವಾ “ಇನ್ನು ಕೇವಲ 1 ಸ್ಟಾಕ್ ಇದೆ” ಎಂದು ಸುಳ್ಳು ಹೇಳಿ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ. ಕೊನೆಯ ಕ್ಷಣದವರೆಗೆ ವಸ್ತುವಿನ ಅಸಲಿ ಬೆಲೆ ತೋರಿಸದೆ, ಪೇಮೆಂಟ್ ಮಾಡುವ ಹಂತದಲ್ಲಿ ‘ಕಾನ್ವೆನಿಯನ್ಸ್ ಫೀಸ್’ ಅಥವಾ ಹೆಚ್ಚುವರಿ ಟ್ಯಾಕ್ಸ್ ಎಂದು ಹಣ ವಸೂಲಿ ಮಾಡಲಾಗುತ್ತದೆ.

ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಬೊಮ್ಮಾಯಿ ಸರ್ಕಾರ ತಂದಿದ್ದ ಕಾನೂನು ಎತ್ತಿ ಹಿಡಿದ ಸುಪ್ರೀಂ

CCPA ನಿಷೇಧಿಸಿರುವ ಪ್ರಮುಖ ಡಾರ್ಕ್ ಪ್ಯಾಟರ್ನ್‌ಗಳು:

CCPA ಒಟ್ಟು 13 ಕ್ಕೂ ಹೆಚ್ಚು ರೀತಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಘೋಷಿಸಿದೆ. ಅವುಗಳೆಂದರೆ,

  • ಗ್ರಾಹಕರನ್ನು ಬಲವಂತವಾಗಿ ಜಾಹೀರಾತುಗಳನ್ನು ನೋಡುವಂತೆ ಮಾಡುವುದು.
  • ಖರೀದಿಸದ ಸೇವೆಗಳಿಗೆ ಕಡ್ಡಾಯವಾಗಿ ಹಣ ವಸೂಲಿ ಮಾಡುವುದು.
  • ವೆಬ್‌ಸೈಟ್‌ಗಳಲ್ಲಿ ಕ್ಯಾನ್ಸಲ್ ಮಾಡುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು