ಆಮ್ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್(Swathi Maliwal) ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ನಿವಾಸದಲ್ಲಿ ನಡೆದ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ತೀಸ್ ಹಜಾರಿ ನ್ಯಾಯಾಲಯವು ಪ್ರಕರಣದ ಆರೋಪಿ ವಿಭವ್ ಕುಮಾರ್ ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇನ್ನೊಂದು ಕಡೆ ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿವೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ ವಿಭವ್ ಕುಮಾರ್ ಅವರನ್ನು ಪೊಲೀಸರು ಶನಿವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಭವ್ ಅವರನ್ನು ಅರುಣಾ ಅಸಫ್ ಅಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ದೆಹಲಿ ಪೊಲೀಸರು ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನಾವು ಡಿವಿಆರ್ ಕೇಳಿದ್ದೇವೆ ಅದನ್ನು ಪೆನ್ಡ್ರೈವ್ನಲ್ಲಿ ನೀಡಲಾಗಿದೆ. ಅದರಲ್ಲಿ ದೃಶ್ಯಾವಳಿಗಳು ಖಾಲಿ ಇವೆ. ಪೊಲೀಸರಿಗೆ ಐಫೋನ್ ಕೊಟ್ಟಿದ್ದು ಆರೋಪಿ ಪಾಸ್‌ವರ್ಡ್ ಹೇಳುತ್ತಿಲ್ಲ, ಫೋನ್ ಫಾರ್ಮ್ಯಾಟ್ ಮಾಡಲಾಗಿದೆ.
ವಿಭವ್ ಮೊದಲು ನನಗೆ ನಿರ್ದಯಿಯಾಗಿ ಹೊಡೆದರು, ಕಪಾಳಮೋಕ್ಷ ಮಾಡಿ ಒದ್ದರು ಎಂದು ಹೇಳಿದ್ದರು.
ವಿಭವ್ ಕುಮಾರ್ ಅವರನ್ನು ಶನಿವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಪೊಲೀಸರು ಮಲಿವಾಲ್ ಮೇಲಿನ ದಾಳಿಯ ಹಿಂದಿನ ಕಾರಣದ ಬಗ್ಗೆ ವಿಚಾರಣೆ ನಡೆಸಲು ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವುದು ಅಗತ್ಯ ಎಂದು ವಾದಿಸಿದರು.
ಮತ್ತಷ್ಟು ಓದಿ: ಕೇಜ್ರಿವಾಲ್ ಮನೆಯ ಸ್ವಾತಿ ಮಲಿವಾಲ್ ಮತ್ತೊಂದು ವಿಡಿಯೋ ರಿಲೀಸ್; ನಿಜಕ್ಕೂ ಆ ದಿನ ನಡೆದಿದ್ದೇನು?
ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ವಿಭವ್ ಕುಮಾರ್ ಅವರ ಬಂಧನದ ಬಗ್ಗೆ ವಾದ ಮಂಡಿಸಿದರು. ಸಿಎಂ ನಿವಾಸದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಸಿಸಿಟಿವಿಯ ಡಿವಿಆರ್ ಕೇಳಿದ್ದೆವು, ಪೆನ್ ಡ್ರೈವ್ ನಲ್ಲಿ ನೀಡಲಾಗಿದೆ ಎಂದು ಹೇಳಿದರು. ಫೂಟೇಜ್ ಖಾಲಿ ಕಂಡುಬಂದಿದೆ. ಪೊಲೀಸರಿಗೆ ಐಫೋನ್ ಕೊಟ್ಟಿದ್ದು, ಈಗ ಆರೋಪಿ ಪಾಸ್ ವರ್ಡ್ ಹೇಳುತ್ತಿಲ್ಲ. ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ. ಆರೋಪಿಯು ಇಂದಿಗೂ ಘಟನೆ ನಡೆದ ಸ್ಥಳದಲ್ಲಿಯೇ ಇದ್ದ ಎಂದು ಪ್ರಾಸಿಕ್ಯೂಟರ್ ಹೇಳುತ್ತಾರೆ.
ಮತ್ತೊಂದೆಡೆ, ಸ್ವಾತಿ ಮಲಿವಾಲ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಭವ್ ಕುಮಾರ್ ಪರ ವಕೀಲ ರಾಜೀವ್ ಮೋಹನ್ ಆರೋಪಿಸಿದ್ದಾರೆ. ಆಕೆಗೆ ನಿಜವಾಗಿಯೂ ದೇಹದಲ್ಲಿ ನೋವು ಇದ್ದಿದ್ದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಹೇಳಿಕೆ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ