
ಭುವನೇಶ್ವರ: ಕಳೆದ 75 ವರ್ಷಗಳಿಂದ ವ್ಯಕ್ತಿಯೊಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಸ್ವಾರಸ್ಯಕರ ಸಂಗತಿ ಒಡಿಶಾದ ಜಜ್ಪುರ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅಚ್ಚರಿಯ ಸಂಗತಿಯೆಂದರೆ, ನಂದಾ ಈ ಕೆಲಸಕ್ಕೆ ಸರ್ಕಾರ ನೀಡಲು ಮುಂದಾದ ನೆರವನ್ನು ಸಹ ತಿರಸ್ಕರಿಸಿದ್ದಾರಂತೆ. ಮಕ್ಕಳಿಗೆ ಪಾಠ ಹೇಳಿಕೊಡುವುದು ನನಗೆ ಬಹಳ ಇಷ್ಟ. ಹೀಗಾಗಿ, ಅವರಿಗೆ ಶಿಕ್ಷಣ ನೀಡಲು ಈ ಮರದ ನೆರಳೇ ನನಗೆ ಸಾಕು ಎಂದು ಈ ಪರೋಪಕಾರಿ ವೃದ್ಧ ಹೇಳಿದ್ದಾರೆ.
ವೃದ್ಧನ ಅಮೋಘ ಸೇವೆಗೆ ತಲೆಬಾಗಿರುವ ಗ್ರಾಮಸ್ಥರು ಇವರಿಗೆ ತಮ್ಮ ಕಾರ್ಯ ಮುಂದುವರಿಸಲು ಒಂದು ಕೊಠಡಿಯನ್ನು ನಿರ್ಮಿಸಲು ಮುಂದಾಗಿದ್ದಾರೆ.
Published On - 3:21 pm, Sun, 27 September 20