CAA ಅಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ ಹಸ್ತಾಂತರಿಸಿದ ಕೇಂದ್ರ

|

Updated on: May 15, 2024 | 5:26 PM

ಗೃಹ ಸಚಿವಾಲಯ ಇಂದು (ಮೇ.15) ಪೌರತ್ವ (ತಿದ್ದುಪಡಿ) ಕಾಯ್ದೆಯಡಿ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದೆ. 2024ರ ಪೌರತ್ವ (ತಿದ್ದುಪಡಿ) ನಿಯಮಗಳ ಅಧಿಸೂಚನೆಯ ನಂತರ ಮೊದಲ ಈ ಪ್ರಮಾಣಪತ್ರವನ್ನು ಹಸ್ತರಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

CAA ಅಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ ಹಸ್ತಾಂತರಿಸಿದ ಕೇಂದ್ರ
Follow us on

ದೆಹಲಿ, ಮೇ.15: ಗೃಹ ಸಚಿವಾಲಯ ಇಂದು (ಮೇ.15) ಪೌರತ್ವ (ತಿದ್ದುಪಡಿ) ಕಾಯ್ದೆಯಡಿ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದೆ. 2024ರ ಪೌರತ್ವ (ತಿದ್ದುಪಡಿ) ನಿಯಮಗಳ ಅಧಿಸೂಚನೆಯ ನಂತರ ಮೊದಲ ಈ ಪ್ರಮಾಣಪತ್ರವನ್ನು ಹಸ್ತರಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇಂದು ಕೆಲವು ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನವದೆಹಲಿಯಲ್ಲಿ ಹಸ್ತಾಂತರಿಸಿದರು. ಇದರ ಜತೆಗೆ ಗೃಹ ಕಾರ್ಯದರ್ಶಿ ಅರ್ಜಿದಾರರನ್ನು ಅಜಯ್ ಕುಮಾರ್ ಭಲ್ಲಾ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದರು.

ಸಿಎಎನ್ನು 2019ರಲ್ಲಿ ಸಂಸತ್ತು ಅಂಗೀಕರಿಸಿತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್‌ನಲ್ಲಿ ಸಿಎಎ ನಿಯಮಗಳನ್ನು ಸೂಚಿಸಿತು. ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಕೇಂದ್ರ ಸರ್ಕಾರವು ಮಾರ್ಚ್ 11 ರಂದು ಲೋಕಸಭೆ ಚುನಾವಣೆಯ ಮೊದಲು ಅಧಿಸೂಚನೆ ಮಾಡಿತು. ಭಾರತೀಯ ಪೌರತ್ವ ನೀಡಲು ಜಿಲ್ಲಾ ಮಟ್ಟದ ಸಮಿತಿಗಳಿಗೆ ಅಧಿಕಾರವನ್ನು ನೀಡಲಾಗಿತ್ತು. ಪೌರತ್ವವನ್ನು ನೀಡುವ ಮೊದಲು ಅರ್ಜಿಗಳನ್ನು ಪರಿಶೀಲಿಸಲು ರಾಜ್ಯ ಮಟ್ಟದ ಅಧಿಕಾರ ಸಮಿತಿಗೆ ಅಧಿಕಾರ ನೀಡಲಾಗಿತ್ತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಿಂದ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾದ ಮತ್ತು ಡಿಸೆಂಬರ್ 31 ರೊಳಗೆ ಭಾರತಕ್ಕೆ ಪ್ರವೇಶಿಸಿದ ಜನರಿಗೆ ಮಾತ್ರ ಪೌರತ್ವವನ್ನು ನೀಡುವ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಜುಲೈ 11ಕ್ಕೆ ಇಡಿ ಸಮನ್ಸ್​ ವಿರುದ್ಧದ ಕೇಜ್ರಿವಾಲ್ ಅರ್ಜಿ ವಿಚಾರಣೆ

ನಿಯೋಜಿತ ಅಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಡಿಎಲ್‌ಸಿಗಳು ದಾಖಲೆಗಳ ಪರಿಶೀಲನೆಯ ನಂತರ ಅರ್ಜಿದಾರರಿಗೆ ನಿಷ್ಠೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ನಿಯಮಗಳ ಪ್ರಕಾರ ಪ್ರಕ್ರಿಯೆ ನಂತರ ಡಿಎಲ್‌ಸಿಗಳು ನಿರ್ದೇಶಕರ (ಜನಗಣತಿ ಕಾರ್ಯಾಚರಣೆ) ನೇತೃತ್ವದ ರಾಜ್ಯ ಮಟ್ಟದ ಸಶಕ್ತ ಸಮಿತಿಗೆ ಅರ್ಜಿಗಳನ್ನು ರವಾನಿಸಿದ್ದಾರೆ. ಅರ್ಜಿಗಳ ಪ್ರಕ್ರಿಯೆಯು ಆನ್‌ಲೈನ್ ಪೋರ್ಟಲ್ ದಿ ಎಂಪವರ್ಡ್ ಕಮಿಟಿ, ದಿಲ್ಲಿಯ ನಿರ್ದೇಶಕರ (ಜನಗಣತಿ ಕಾರ್ಯಾಚರಣೆ) ನೇತೃತ್ವದ ಮೂಲಕ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 15 May 24