Monsoon 2024: ಈ ವರ್ಷ ಭಾರತದಲ್ಲಿ ಸರಾಸರಿಗಿಂತ ಹೆಚ್ಚು ಮಳೆ ಸಾಧ್ಯತೆ

Weather Today: ಭಾರತದಲ್ಲಿ ಇನ್ನೇನು ಮಳೆಗಾಲ ಶುರುವಾಗುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸರಾಸರಿಗಿಂತಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Monsoon 2024: ಈ ವರ್ಷ ಭಾರತದಲ್ಲಿ ಸರಾಸರಿಗಿಂತ ಹೆಚ್ಚು ಮಳೆ ಸಾಧ್ಯತೆ
ಮಳೆ
Follow us
|

Updated on: May 15, 2024 | 5:59 PM

Weather Today: ಮೇ 19ರಿಂದ ಭಾರತದ ಕೆಲವು ಪ್ರದೇಶಗಳ ಕಡೆಗೆ ನೈಋತ್ಯ ಮಾನ್ಸೂನ್ ಮುನ್ನುಗ್ಗುತ್ತದೆ ಎಂದು ಭಾರತ ಹವಾಮಾನ ಇಲಾಖೆ (IMD) ಭವಿಷ್ಯ ನುಡಿದಿದೆ. ಹವಾಮಾನ ಇಲಾಖೆಯು ಮಿಂಚು ಮತ್ತು ಗುಡುಗು ಸಹಿತ ಮಳೆಯ (Heavy Rain) ಮುನ್ಸೂಚನೆ ನೀಡಿದೆ. ಮೇ 18ರವರೆಗೆ ಪೆನಿನ್ಸುಲರ್ ಭಾರತದ ಮೇಲೆ ಜೋರಾದ ಗಾಳಿ ಸಹಿತ ಮಳೆಯಾಗಲಿದೆ. ಮಾನ್ಸೂನ್ (Monsoon) ಸಾಮಾನ್ಯವಾಗಿ ಮೇ 22ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿಯನ್ನು ತಲುಪುತ್ತದೆ. ಆದರೆ, ಈ ಬಾರಿ ಮೇ 19ಕ್ಕೆ 3 ದಿನ ಮುಂಚಿತವಾಗಿ ತಲುಪುವ ನಿರೀಕ್ಷೆ ಇದೆ.

ಇಡೀ ಉತ್ತರ ಭಾರತದಲ್ಲಿ ಪ್ರಸ್ತುತ ಶಾಖದ ಅಲೆ ಹೆಚ್ಚಾಗಿದೆ. ಮಧ್ಯ ಭಾರತದಲ್ಲಿ ಪೂರ್ವ ಮಾನ್ಸೂನ್‌ನ ಝಲಕ್ ಕಾಣುತ್ತಿದೆ. ದಕ್ಷಿಣ ಮತ್ತು ಪೂರ್ವ ಭಾರತದ ರಾಜ್ಯಗಳು ನೈಋತ್ಯ ಮಾನ್ಸೂನ್‌ಗಾಗಿ ಕಾಯುತ್ತಿವೆ. ಬಿಸಿಲಿನ ಝಳದಿಂದ ಕಂಗೆಟ್ಟಿರುವ ಜನರಿಗೆ ಸಂತಸ ನೀಡಲು ಸಮಯಕ್ಕಿಂತ ಮುನ್ನವೇ ಮುಂಗಾರು ಮುನ್ಸೂಚನೆ ಬರುತ್ತಿರುವುದು ಸಂತಸದ ಸುದ್ದಿ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಮುಂಗಾರು ಗತಿ ಉತ್ತಮವಾಗಿದೆ. ಈ ವರ್ಷ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರಲಿದೆ.

IMD ಪ್ರಕಾರ, ನೈಋತ್ಯ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 19ರ ಸುಮಾರಿಗೆ ಪ್ರವೇಶಿಸುವ ಸಾಧ್ಯತೆಯಿದೆ. ಭಾರತವು 2024ರಲ್ಲಿ ಸರಾಸರಿ ಮಾನ್ಸೂನ್ ಅನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ. ಇದು ಕೃಷಿಕರಿಗೆ ಸಂತೋಷಕರ ವಿಷಯವಾಗಿದೆ. ಪ್ರಸ್ತುತ ಶಾಖದ ಅಲೆಯಿಂದ ತತ್ತರಿಸುತ್ತಿರುವ ಅನೇಕ ಪ್ರದೇಶಗಳಿಗೆ ಇದು ಪರಿಹಾರ ನೀಡುತ್ತದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ, ಉತ್ತರ ಕರ್ನಾಟಕಕ್ಕೂ ಒಲಿದ ವರುಣ: ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಒಟ್ಟು ಶೇ.106ರಷ್ಟು ದೀರ್ಘಾವಧಿಯ ಸರಾಸರಿಯ ಮಾನ್ಸೂನ್ ನಿರೀಕ್ಷಿಸಲಾಗಿದೆ. ಮುಂಗಾರು ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳದ ದಕ್ಷಿಣ ಭಾಗಕ್ಕೆ ಆಗಮಿಸುತ್ತದೆ ಮತ್ತು ಸೆಪ್ಟೆಂಬರ್ ಮಧ್ಯದಲ್ಲಿ ಹಿಮ್ಮುಖವಾಗುತ್ತದೆ ಎಂದಿದ್ದಾರೆ.

ಭಾರತದ ಹವಾಮಾನ ಇಲಾಖೆಯ ಸರಾಸರಿ ಮಳೆಯ ಪ್ರಮಾಣವು ಕಳೆದ 4 ತಿಂಗಳ ಋತುವಿನಲ್ಲಿ 96-104ರ ನಡುವೆ ಇರುತ್ತದೆ. ರವಿಚಂದ್ರನ್ ಅವರು 2024ರ ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಹವಾಮಾನ ಬದಲಾವಣೆಗಳು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಭಾರತದ ವಾಯುವ್ಯ, ಪಶ್ಚಿಮ ಮತ್ತು ಈಶಾನ್ಯ ಭಾಗಗಳ ಕೆಲವು ಭಾಗಗಳಲ್ಲಿ 2024ರಲ್ಲಿ ಸರಾಸರಿ ಮಾನ್ಸೂನ್ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ತತ್ತರಿಸಿದ್ದ ಯಾದಗಿರಿ ಜನ ರಾತ್ರಿ ಸುರಿದ ಮಳೆಯಿಂದ ಕೊಂಚ ನಿರಾಳ

IMD ಮುನ್ಸೂಚನೆಯ ಪ್ರಕಾರ, ಮಾನ್ಸೂನ್ ಮೇ 19ರಂದು ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಮತ್ತು ಮರುದಿನ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ದಕ್ಷಿಣ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಇನ್ನಷ್ಟು ಸುಧಾರಣೆಯಾಗುವ ಸಾಧ್ಯತೆ ಇದೆ. ನೈಋತ್ಯ ಮಾನ್ಸೂನ್ ಮೇ 19ರಂದು ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳನ್ನು ಪ್ರವೇಶಿಸಲಿದೆ. ಮೇ 25ರಂದು ಈಶಾನ್ಯ ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ. ಜೂನ್ 27ರೊಳಗೆ ಮುಂಗಾರು ಉತ್ತರ ಭಾರತವನ್ನು ತಲುಪುವ ನಿರೀಕ್ಷೆಯಿದೆ.

ನೈಋತ್ಯ ಮಾನ್ಸೂನ್ ಮೇ 19ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ. ಇದರ ನಂತರ ಮುಂಗಾರು ಮೇ 29 ಮತ್ತು ಜೂನ್ 1ರ ನಡುವೆ ಕೇರಳವನ್ನು ಅಪ್ಪಳಿಸಬಹುದು. ಸಾಮಾನ್ಯವಾಗಿ, ಜೂನ್ 10ರೊಳಗೆ ಮುಂಗಾರು ಮಹಾರಾಷ್ಟ್ರವನ್ನು ಪ್ರವೇಶಿಸುತ್ತದೆ. ಈ ವರ್ಷ ಅದು ಸರಿಯಾದ ಸಮಯಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 15ರ ವೇಳೆಗೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರಕ್ಕೆ ಮುಂಗಾರು ಪ್ರವೇಶಿಸಬಹುದು. ಜೂನ್ 20-25ರ ನಡುವೆ ಮುಂಗಾರು ಉತ್ತರ ಪ್ರದೇಶ, ಹಿಮಾಚಲ, ಉತ್ತರಾಖಂಡ ಮತ್ತು ಕಾಶ್ಮೀರವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಮಾನ್ಸೂನ್ ಜೂನ್ 30ರಂದು ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್‌ಗೆ ಅಪ್ಪಳಿಸಬಹುದು. ಇದು ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’