ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ತತ್ತರಿಸಿದ್ದ ಯಾದಗಿರಿ ಜನ ರಾತ್ರಿ ಸುರಿದ ಮಳೆಯಿಂದ ಕೊಂಚ ನಿರಾಳ
ಜನ ಡೆಸ್ಪರೇಟ್ ಆಗಿ ಮಳೆಗಾಗಿ ಕಾಯುತ್ತಿದ್ದರು ಮತ್ತು ಅವರು ಆಸೆ ನಿನ್ನೆ ರಾತ್ರಿ ಕೈಗೂಡಿದೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಯಾದಗಿರಿ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಯಾದಗಿರಿ ನಗರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ನಿನ್ನೆ ರಾತ್ರಿ ಮಳೆಯಾಗಿದೆ. ಬಿಸಿಲಿನ ಬೇಗೆ ತತ್ತರಿಸಿದ್ದ ಜನಕ್ಕೆ ಒಂದಿನಿತು ನಿರಾಳತೆಯನ್ನು ಮಳೆರಾಯ ಒದಗಿಸಿದ್ದಾನೆ.
ಯಾದಗಿರಿ: ಉತ್ತರ ಕರ್ನಾಟಕದ ಬಿಸಿಲು ನಾಡುಗಳಲ್ಲಿ ಯಾದಗಿರಿ (Yadgir) ಸಹ ಒಂದು. ಕಳೆದ ವಾರ ಯಾದಗಿರಿ ನಗರದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ (46 degree Celsius) ದಾಖಲಾಗಿತ್ತು. ಟಿವಿ9 ವಾಹಿನಿಯ ಯಾದಗಿರಿ ನೀಡಿರುವ ಮಾಹಿತಿ ಪ್ರಕಾರ ಮನೆಗಳ ಛಾವಣಿ ಮತ್ತು ಗೋಡೆಗಳು ರಾತ್ರಿ ಸಮಯದಲ್ಲೂ ಬಿಸಿಯಾಗಿರುತ್ತಿದ್ದ ಕಾರಣ ಜನ ನಿದ್ರಿಸುವುದು ಸಾಧ್ಯವಾಗಿರಲಿಲ್ಲ. ಇದನ್ನು ಹೇಳುವ ತಾತ್ಪರ್ಯವೆಂದರೆ ಆ ಭಾಗದ ಎಲ್ಲ ಜಿಲ್ಲೆಗಳಿಗಿಂತ ಯಾದಗಿರಿ ಜಿಲ್ಲೆ ಹೆಚ್ಚು ತಾಪಮಾನದಿಂದ ಕೂಡಿದೆ. ಜನ ಡೆಸ್ಪರೇಟ್ ಆಗಿ ಮಳೆಗಾಗಿ (rains) ಕಾಯುತ್ತಿದ್ದರು ಮತ್ತು ಅವರು ಆಸೆ ನಿನ್ನೆ ರಾತ್ರಿ ಕೈಗೂಡಿದೆ. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಯಾದಗಿರಿ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಯಾದಗಿರಿ ನಗರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ನಿನ್ನೆ ರಾತ್ರಿ ಮಳೆಯಾಗಿದೆ. ಬಿಸಿಲಿನ ಬೇಗೆ ತತ್ತರಿಸಿದ್ದ ಜನಕ್ಕೆ ಒಂದಿನಿತು ನಿರಾಳತೆಯನ್ನು ಮಳೆರಾಯ ಒದಗಿಸಿದ್ದಾನೆ. ಮಳೆ ಇವತ್ತು ಸಹ ಸುರಿದರೆ ನೆಲ ಕೊಂಚ ತಂಪಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ನೆಲದಿಂದ ಮೇಲೇಳುವ ಧಗೆ ಜನರ ಬದುಕನ್ನು ಆಸಹನೀಯವಾಗಿಸುತ್ತದೆ. ಇದಿನ್ನೂ ಮೇ ತಿಂಗಳ ಮಧ್ಯಂತರ ಭಾಗ, ಅಸಲಿ ಮಳೆಗಾಲ ಶುರುವಾಗಲು ಒಂದು ತಿಂಗಳು ಕಾಯಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ, ಉತ್ತರ ಕರ್ನಾಟಕಕ್ಕೂ ಒಲಿದ ವರುಣ: ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ