ಭಾರತದಿಂದ ಸದ್ಯಕ್ಕೆ ಈ ದೇಶಗಳಿಗೆ ಯಾರೂ ಹೋಗುವಂತಿಲ್ಲ

|

Updated on: Mar 04, 2020 | 9:43 AM

ದೆಹಲಿ: ಚೀನಾದಲ್ಲಿ ದಿಢೀರನೇ ಉದ್ಭವಿಸಿ ಅಲ್ಲಿನ ಜನರನ್ನು ಹೈರಾಣಗೊಳಿಸಿದ ಬಳಿಕ ಇತರ ದೇಶಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಕೊರೊನಾ ಎಂಬ ಡ್ರ್ಯಾಗನ್ ಮೃತ್ಯು ಕಾಯಿಲೆ ಭಾರತದಲ್ಲೂ ಕಾಣಿಸಿಕೊಂಡಿದೆ. ಇದನ್ನು ಮೊಳಕೆಯಲ್ಲೇ ಚಿವುಟಿಹಾಕಲು ಭಾರತ ಸರ್ಕಾರ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಕೆಲ ದೇಶಗಳಿಗೆ ಭಾರತದಿಂದ ಯಾರೂ ಹೋಗಬಾರದೆಂದು ಆದೇಶಿಸಿ ಕೇಂದ್ರ ಸರ್ಕಾರ ಕೆಲ ದೇಶಗಳಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೊರೊನಾ ಸೋಂಕು ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಕೈ ಹಾಕಿದ್ದು ಇಟಲಿ, ದಕ್ಷಿಣ […]

ಭಾರತದಿಂದ ಸದ್ಯಕ್ಕೆ ಈ ದೇಶಗಳಿಗೆ ಯಾರೂ ಹೋಗುವಂತಿಲ್ಲ
ಪಾಸ್​ಪೋರ್ಟ್ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಚೀನಾದಲ್ಲಿ ದಿಢೀರನೇ ಉದ್ಭವಿಸಿ ಅಲ್ಲಿನ ಜನರನ್ನು ಹೈರಾಣಗೊಳಿಸಿದ ಬಳಿಕ ಇತರ ದೇಶಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಕೊರೊನಾ ಎಂಬ ಡ್ರ್ಯಾಗನ್ ಮೃತ್ಯು ಕಾಯಿಲೆ ಭಾರತದಲ್ಲೂ ಕಾಣಿಸಿಕೊಂಡಿದೆ. ಇದನ್ನು ಮೊಳಕೆಯಲ್ಲೇ ಚಿವುಟಿಹಾಕಲು ಭಾರತ ಸರ್ಕಾರ ಸನ್ನದ್ಧವಾಗಿದೆ.

ಈ ನಿಟ್ಟಿನಲ್ಲಿ ಕೆಲ ದೇಶಗಳಿಗೆ ಭಾರತದಿಂದ ಯಾರೂ ಹೋಗಬಾರದೆಂದು ಆದೇಶಿಸಿ ಕೇಂದ್ರ ಸರ್ಕಾರ ಕೆಲ ದೇಶಗಳಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೊರೊನಾ ಸೋಂಕು ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಕೈ ಹಾಕಿದ್ದು ಇಟಲಿ, ದಕ್ಷಿಣ ಕೊರಿಯಾ, ಜಪಾನ್, ಚೀನಾ, ಇರಾನ್ ಸೇರಿದಂತೆ ಹಲವು ದೇಶಗಳಿಗೆ ತೆರಳಲು ವೀಸಾ ರದ್ದುಗೊಳಿಸಿ ಆದೇಶ ನೀಡಿದೆ.

Published On - 3:49 pm, Tue, 3 March 20