ಪೋಸ್ಟ್ ಪೇಯ್ಡ್! ಟೆಲಿಕಾಂ ಇಲಾಖೆಗೆ 8ಸಾವಿರ ಕೋಟಿ ಪಾತಿಸಿದ ಏರ್‌ಟೆಲ್
ಟೆಲಿಕಾಂ ಇಲಾಖೆಗೆ ಏರ್‌ಟೆಲ್ ಕಂಪನಿ ಮತ್ತೆ 8,000 ಕೋಟಿ ರೂಪಾಯಿ ಪಾವತಿಸಿದೆ. ಫೆ.17ರಂದು 10 ಸಾವಿರ ಕೋಟಿ ಪಾವತಿ ಮಾಡಿತ್ತು. ತರಂಗಗುಚ್ಛದ ಬಳಕೆ, ಪರವಾನಗಿ ಶುಲ್ಕ ಸೇರಿದಂತೆ ಏರ್‌ಟೆಲ್ 35,586 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ದಂಡ ಪಾವತಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಪಘಾತಕ್ಕೆ 8 ಮಂದಿ ಬಲಿ: ಸರ್ಕಾರಿ ಬಸ್, ಟ್ಯಾಂಕರ್ ಹಾಗೂ ಟ್ಯಾಕ್ಸಿ ನಡುವೆ ಸರಣಿ ಅಪಘಾತ ಸಂಭವಿಸಿ 8 ಜನ ಮೃತಪಟ್ಟ ಘಟನೆ ಗುಜರಾತ್ನ ತಾಪಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 24 […]
ಟೆಲಿಕಾಂ ಇಲಾಖೆಗೆ ಏರ್‌ಟೆಲ್ ಕಂಪನಿ ಮತ್ತೆ 8,000 ಕೋಟಿ ರೂಪಾಯಿ ಪಾವತಿಸಿದೆ. ಫೆ.17ರಂದು 10 ಸಾವಿರ ಕೋಟಿ ಪಾವತಿ ಮಾಡಿತ್ತು. ತರಂಗಗುಚ್ಛದ ಬಳಕೆ, ಪರವಾನಗಿ ಶುಲ್ಕ ಸೇರಿದಂತೆ ಏರ್‌ಟೆಲ್ 35,586 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ದಂಡ ಪಾವತಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಅಪಘಾತಕ್ಕೆ 8 ಮಂದಿ ಬಲಿ: ಸರ್ಕಾರಿ ಬಸ್, ಟ್ಯಾಂಕರ್ ಹಾಗೂ ಟ್ಯಾಕ್ಸಿ ನಡುವೆ ಸರಣಿ ಅಪಘಾತ ಸಂಭವಿಸಿ 8 ಜನ ಮೃತಪಟ್ಟ ಘಟನೆ ಗುಜರಾತ್ನ ತಾಪಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 24 ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಟ್ಯಾಂಕರ್ ಚಾಲರ ರಾಂಗ್ ಸೈಡ್ ಬಂದಿದ್ದು, ಘಟನೆ ಕಾರಣ ಎನ್ನಲಾಗಿದೆ.
‘ಕೇಂದ್ರ ಸರ್ಕಾರ ಪ್ರಯೋಜಿತ ನರಮೇಧ’ ದೆಹಲಿಯಲ್ಲಿನ ಹಿಂಸಾಚಾರ ಕೇಂದ್ರ ಸರ್ಕಾರ ಪ್ರಯೋಜಿತ ನರಮೇಧ ಅಂತಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ದೆ, ಕೋಲ್ಕತ್ತಾದಲ್ಲಿ ಗೋಲಿಮಾರೋ ಘೋಷಣೆ ಕೂಗಿದ್ದನ್ನು ಖಂಡಿಸಿದ ದೀದಿ, ಗುಜರಾತ್ ಮಾದರಿಯ ನರಮೇಧವನ್ನು ಪುನಾರವರ್ತಿಸಲಾಗುತ್ತಿದೆ ಅಂತಲೂ ಕಿಡಿಕಾರಿದ್ದಾರೆ.
‘ಕೊರೊನಾಗೆ ಗೋಮೂತ್ರ, ಸಗಣಿ ಮದ್ದು’ ಗೋಮೂತ್ರ, ಸಗಣಿಯಿಂದ ಕೊರೊನಾ ವೈರಸ್ನ್ನ ಗುಣಪಡಿಸಬಹುದು ಅಂತಾ ಅಸ್ಸಾಂ ಬಿಜೆಪಿ ಶಾಸಕಿ ಹೇಳಿದ್ದಾರೆ. ಅಸ್ಸಾಂ ವಿಧಾನಸಭೆಯಲ್ಲಿ ಮಾತಾಡಿರೋ ಶಾಸಕಿ ಸುಮನ್ ಹರಿಪ್ರಿಯಾ, ಗೋ ಮೂತ್ರ ಸಿಂಪಡಿಸಿದ್ರೆ ಇಡೀ ಏರಿಯಾ ಶುದ್ಧವಾಗುತ್ತೆ ಅಂದಿದ್ದಾರೆ. ಸುಮನ್ ಹರಿಪ್ರಿಯಾ, ಸಿನಿಮಾ ನಿರ್ದೇಶಕಿ, ನಿರ್ಮಾಪಕಿಯೂ ಆಗಿದ್ದಾರೆ.
ಅಧಿಕಾರಿ ಕುಟುಂಬಕ್ಕೆ 1 ಕೋಟಿ ಪರಿಹಾರ: ದೆಹಲಿ ಹಿಂಸಾಚಾರ ವೇಳೆ ಹತ್ಯೆಗೀಡಾದ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಕುಟುಂಬಕ್ಕೆ ಸಿಎಂ ಕೇಜ್ರಿವಾಲ್ ಪರಿಹಾರ ಘೋಷಿಸಿದ್ದಾರೆ. 1 ಕೋಟಿ ಪರಿಹಾರ ಕೊಡೋದಾಗಿ ಘೋಷಿಸಿದ್ದಲ್ದೇ, ಕುಟುಂಬದ ಒಬ್ರಿಗೆ ಸರ್ಕಾರಿ ಕೆಲಸದ ಭರವಸೆ ನೀಡಿದ್ದಾರೆ. ಕಳೆದ ವಾರ ಚಾಂದಬಾಗ್ ಮೋರಿಯಲ್ಲಿ ಅಧಿಕಾರಿಯ ಮೃತದೇಹ ಪತ್ತೆಯಾಗಿತ್ತು.
ಮಗನಿಗೆ ಬೈಕ್ ಕೊಟ್ಟ ಅಪ್ಪನಿಗೆ ಫೈನ್: ಒಡಿಶಾದ ಸಂಬಾಲ್ಪುರ್ ಜಿಲ್ಲೆಯ ಖೇತ್ರಾಜ್‌ಪುರ ಟ್ರಾಫಿಕ್ ಪೊಲೀಸರು ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ 43 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಬಾಲಕ ಬರಿಸ್ ಸಿಂಗ್ ಅಪ್ಪ ಬಿಜಯ್ ಸಿಂಗ್ ಒಡೆತನದ ಸ್ಕೂಟರನ್ನು ಹೆಲ್ಮೆಟ್ ಧರಿಸದೆ ಓಡಿಸುತ್ತಿದ್ದ. ಈ ವೇಳೆ ದಾಖಲೆ ಕೇಳಿದಾಗ ಆತನ ಬಳಿ ಲೈಸೆನ್ಸ್ ಇಲ್ಲದಿರುವುದು ಕಂಡುಬಂದಿದೆ.
ಜಿ.ಎಸ್.ಟಿ ಸಂಗ್ರಹದಲ್ಲಿ ಹೆಚ್ಚಳ: ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಕೇಂದ್ರ ಸರ್ಕಾರಕ್ಕೆ ಜಿ.ಎಸ್.ಟಿ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಖುಷಿ ತರಿಸಿದೆ .ಫೆಬ್ರವರಿ ತಿಂಗಳಲ್ಲಿ ಸುಮಾರು 1.05 ಲಕ್ಷ ಕೋಟಿ ರೂ ಜೆಎಸ್‌ಟಿ ಸಂಗ್ರಹವಾಗಿದ್ದು, ಇದು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಂಗ್ರಹಿಸಿದ್ದ ಜಿಎಸ್ಟಿ ಮೊತ್ತಕ್ಕಿಂತ ಶೇಕಡಾ 8.3%ರಷ್ಟಿದೆ.
Published On - 7:43 am, Tue, 3 March 20