ಗಲ್ಲು ಗುಲ್ಲು ಇನ್ನೂ ಜೀವಂತ.. ನಿರ್ಭಯಾ ಹಂತಕರಿಗೆ ಸದ್ಯಕ್ಕೆ ಗಲ್ಲು ಶಿಕ್ಷೆ ಜಾರಿ ಇಲ್ಲ
ದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದೂಡಿಕೆಯಾಗಿದೆ. ನಿಗದಿಯಂತೆ ನಾಳೆ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ. ಹೊಸ ಡೆತ್ ವಾರಂಟ್ ನೀಡಿದ ಬಳಿಕವಷ್ಟೇ ಗಲ್ಲು ಶಿಕ್ಷೆ ಜಾರಿ ಮಾಡಬೇಕು ಎಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ. ಆದೇಶ ಪ್ರಕಟವಾಗ್ತಿದ್ದಂತೆ ಕುಸಿದು ಬಿದ್ದ ನಿರ್ಭಯಾ ತಾಯಿ: ಈ ಹಿಂದೆ ಹೊರಡಿಸಿದ್ದ ಡೆತ್ ವಾರಂಟ್ಗೆ ತಡೆಯಾಜ್ಞೆ ನೀಡುತ್ತಿದ್ದಂತೆ ಕೋರ್ಟ್ ಆವರಣದಲ್ಲೇ ನಿರ್ಭಯಾ ತಾಯಿ ಕುಸಿದು ಬಿದ್ದಿದ್ದಾರೆ. ಅಪರಾಧಿಗಳಿಗೆ […]
ದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದೂಡಿಕೆಯಾಗಿದೆ. ನಿಗದಿಯಂತೆ ನಾಳೆ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ. ಹೊಸ ಡೆತ್ ವಾರಂಟ್ ನೀಡಿದ ಬಳಿಕವಷ್ಟೇ ಗಲ್ಲು ಶಿಕ್ಷೆ ಜಾರಿ ಮಾಡಬೇಕು ಎಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ.
ಆದೇಶ ಪ್ರಕಟವಾಗ್ತಿದ್ದಂತೆ ಕುಸಿದು ಬಿದ್ದ ನಿರ್ಭಯಾ ತಾಯಿ: ಈ ಹಿಂದೆ ಹೊರಡಿಸಿದ್ದ ಡೆತ್ ವಾರಂಟ್ಗೆ ತಡೆಯಾಜ್ಞೆ ನೀಡುತ್ತಿದ್ದಂತೆ ಕೋರ್ಟ್ ಆವರಣದಲ್ಲೇ ನಿರ್ಭಯಾ ತಾಯಿ ಕುಸಿದು ಬಿದ್ದಿದ್ದಾರೆ. ಅಪರಾಧಿಗಳಿಗೆ ಮಾ.3ರಂದು ಗಲ್ಲುಶಿಕ್ಷೆ ನೀಡಬೇಕೆಂದು ಈ ಹಿಂದೆ ದಿನಾಂಕ ನಿಗದಿಪಡಿಸಲಾಗಿತ್ತು. ಆದ್ರೀಗ ದೋಷಿಗಳಿಗೆ ಗಲ್ಲುಶಿಕ್ಷೆ ಮುಂದೂಡಿಕೆ ಬಗ್ಗೆ ಆದೇಶ ಪ್ರಕಟವಾಗ್ತಿದ್ದಂತೆ ಪಟಿಯಾಲ ಹೌಸ್ ಕೋರ್ಟ್ ಬಳಿ ನಿರ್ಭಯಾ ತಾಯಿ ಕುಸಿದು ಬಿದ್ದಿದ್ದಾರೆ.
ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಅಪರಾಧಿಗಳು ನಾಳೆ ನೀಡಬೇಕಿದ್ದ ಗಲ್ಲು ಶಿಕ್ಷೆಗೆ ಮತ್ತೆ ತಡೆ ಬಿದ್ದಿದೆ. ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ನಾಳೆ ಬೆಳಗ್ಗೆ 6 ಗಂಟೆಗೆ ಫಿಕ್ಸ್ ಮಾಡಲಾಗಿತ್ತು. ಆದ್ರೆ ಮುಂದಿನ ಆದೇಶದವರೆಗೂ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ತಡೆಹಿಡಿಯಲಾಗಿದೆ. ಇದಕ್ಕೂ ಮುನ್ನ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಅಲ್ಲದೆ ಕೋರ್ಟ್ ಕೂಡ ಅಪರಾಧಿಗಳ ಗಲ್ಲು ತಡೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಅಪರಾಧಿಗಳ ಹೋರಾಟದ ಹಾದಿ ಮುಕ್ತಾಯ: ನಿರ್ಭಯಾ ಅಪರಾಧಿಗಳ ಹೋರಾಟದ ಹಾದಿ ಮುಕ್ತಾಯವಾಗಿದೆ. ಸತತವಾಗಿ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಕೆ ಮಾಡ್ತಿದ್ದ ಅಪರಾಧಿಗಳ ಕೊನೆಯ ಕಸರತ್ತಿಗೂ ಕೋರ್ಟ್ ಮನ್ನಣೆ ಕೊಟ್ಟಿಲ್ಲ. ಸಾಕೇತ್ ಜಿಲ್ಲಾ ನ್ಯಾಯಾಲಯ, ದೆಹಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋದ್ರೂ ಅಪರಾಧಿಗಳಿಗೆ ಗೆಲುವಾಗಿರಲಿಲ್ಲ. ಇದಾದ ಬಳಿಕ ಸುಪ್ರೀಂಕೋರ್ಟ್ಗೆ ಪುನರ್ ಪರಿಶೀಲನೆ ಅರ್ಜಿ ಹಾಗೂ ಕ್ಯುರೆಟಿವ್ ಅರ್ಜಿ ಸಲ್ಲಿಕೆ ಮಾಡಿದ್ದರು. ಆದ್ರೆ ಎಲ್ಲಾ ಅರ್ಜಿಗಳು ಈಗ ತಿರಸ್ಕೃತಗೊಂಡಿವೆ. ಜೊತೆಗೆ ರಾಷ್ಟ್ರಪತಿಗಳೂ ಕ್ಷಮಾದಾನ ಅರ್ಜಿಯನ್ನೂ ತಿರಸ್ಕರಿಸಿದ್ದಾರೆ.
Published On - 5:50 pm, Mon, 2 March 20