ಕೊರೊನಾ ವೈರಸ್ ಸಾಂಕ್ರಾಮಿಕ(Coronavirus)ದಿಂದ ಅನಾಥರಾದ ಮಕ್ಕಳಿಗೆ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ (Health Insurance) ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ. ಅಂದರೆ ಈ ಬಾರಿ ಕೊವಿಡ್ 19 ಸಾಂಕ್ರಾಮಿಕದಿಂದ ಅನೇಕ ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ. ಜೀವನಕ್ಕೆ ಕಷ್ಟಪಡುವಂತಾಗಿದೆ. ಹೀಗೆ ಅನಾಥರಾದ ಮಕ್ಕಳಿಗೆ ಅನುಕೂಲವಾಗುವಂತೆ ಆರೋಗ್ಯ ವಿಮೆ ನೀಡಲು ಕೇಂದ್ರ ಸರ್ಕಾರ (Central Government) ಮುಂದಾಗಿದ್ದು, ಇದು ಪುಟ್ಟ ಮಗುವಿನಿಂದ ಹಿಡಿದು 18ವರ್ಷದವರೆಗಿನವರಿಗೆ ಅನ್ವಯ ಆಗುತ್ತದೆ ಎಂದು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಅನುರಾಗ್ ಠಾಕೂರ್, ಈ ಉಚಿತ ಆರೋಗ್ಯವಿಮೆಯ ಪ್ರೀಮಿಯಮ್ನ್ನು ಪ್ರಧಾನಮಂತ್ರಿ ತುರ್ತುಪರಿಸ್ಥಿತಿ ಸಂದರ್ಭದ ನಿಧಿಯ, ನಾಗರಿಕ ನೆರವು ಮತ್ತು ಪರಿಹಾರ (PM-CARES)ದಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೇ, ಈ ಆರೋಗ್ಯ ವಿಮೆ ಸ್ಕೀಮ್ಗೆ ಸಂಬಂಧಪಟ್ಟ ಪೂರ್ತಿ ವಿವರವನ್ನೂ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ವಿವರ ಇರುವ ಸರ್ಕಾರಿ ವೆಬ್ಸೈಟ್ನ ಲಿಂಕ್ನ್ನೂ ಕೂಡ ಅನುರಾಗ್ ಠಾಕೂರ್ ಶೇರ್ ಮಾಡಿಕೊಂಡಿದ್ದಾರೆ.
ಮಕ್ಕಳಿಗಾಗಿ ಪಿಎಂ-ಕೇರ್ಸ್ (PM-CARES) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಸಕ್ತವರ್ಷದ ಮೇ ತಿಂಗಳಲ್ಲಿ ಉದ್ಘಾಟನೆ ಮಾಡಿದ್ದಾರೆ. 2020ರ ಮಾರ್ಚ್ನಲ್ಲಿ ಕೊವಿಡ್ 19 ಸಾಂಕ್ರಾಮಿಕ ಶುರುವಾದಾಗಿನಿಂದ ಅನೇಕ ಮಕ್ಕಳು ತಮ್ಮ ಪಾಲಕರು, ಪೋಷಕರನ್ನು ಕಳೆದುಕೊಂಡಿದ್ದಾರೆ. ಅಂಥವರನ್ನು ನೋಡಿಕೊಳ್ಳಲೂ ಯಾರೂ ಇಲ್ಲದೆ ಅನಾಥಾಶ್ರಮ ಸೇರುವ ಪರಿಸ್ಥಿತಿಯೂ ಬಂದಿದೆ. ಅಂಥ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲ ಒದಗಿಸಿಕೊಡಲು, ಅವರ ಬದುಕನ್ನು ಭದ್ರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಮೂಲಕ ಒಂದಷ್ಟು ಯೋಜನೆಗಳನ್ನು ಪರಿಚಯಿಸಿದೆ. ಅದರ ಒಂದು ಭಾಗವಾಗಿ ಈಗ ಆರೋಗ್ಯ ವಿಮೆ ಸೌಕರ್ಯ ನೀಡಲೂ ನಿರ್ಧಾರ ಮಾಡಿದೆ.
कोविड से प्रभावित बच्चों के देखभाल हेतु उठाए कदमों के तहत 18 साल तक के बच्चों को आयुष्मान भारत के तहत 5 लाख रुपये का मुफ्त स्वास्थ्य बीमा दिया जाएगा और इसके प्रीमियम का भुगतान पीएम केयर्स द्वारा किया जाएगा। #MonsoonSession https://t.co/Gxpj7sFlYV pic.twitter.com/kfa7fTWigq
— Office of Mr. Anurag Thakur (@Anurag_Office) August 4, 2021
Published On - 10:59 am, Thu, 5 August 21