ಬ್ಯಾಂಕ್ ಆಫ್ ಇಂಡಿಯಾ ಸೇರಿ 4 ಬ್ಯಾಂಕ್​ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಬ್ಯಾಂಕ್ ಆಫ್ ಇಂಡಿಯಾ ಸೇರಿ 4 ಬ್ಯಾಂಕ್​ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ಬ್ಯಾಂಕ್​ ಸಾಂದರ್ಭಿಕ ಚಿತ್ರ

ಖಾಸಗೀಕರಣದ ಮೊದಲ ಹಂತ ಇದಾಗಿದೆ. ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್​​​ಗಳನ್ನು ಮೊದಲು ಮಾರಾಟ ಮಾಡಲಾಗುತ್ತಿದೆ.

Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 15, 2021 | 7:54 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ  ಅಧಿಕಾರಕ್ಕೆ ಬಂದ ನಂತರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರೈಲ್ವೆ​ ಸೇರಿ ಅನೇಕ ವಲಯಗಳು ನಿಧಾನವಾಗಿ ಖಾಸಗೀಕರಣಗೊಳ್ಳುತ್ತಿವೆ. ಈಗ ಕೇಂದ್ರ ಸರ್ಕಾರ ಬ್ಯಾಂಕ್​ಗಳ ಮೇಲೆ ಕಣ್ಣಿಟ್ಟಿದೆ. ನಾಲ್ಕು ಮಧ್ಯಮ ಗಾತ್ರದ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಮುಂದಾಗಿದೆ ಎಂದು ವರದಿ ಹೇಳಿದೆ.

ಮೊದಲ ಹಂತದಲ್ಲಿ ಬ್ಯಾಂಕ್​ ಆಫ್​ ಮಹಾರಾಷ್ಟ್ರ, ಬ್ಯಾಂಕ್​ ಆಫ್​ ಇಂಡಿಯಾ, ಇಂಡಿಯನ್​ ಓವರ್​​ಸೀಸ್​ ಬ್ಯಾಂಕ್​ ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾವನ್ನು ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಖಾಸಗೀಕರಣದ ಮೊದಲ ಹಂತ ಇದಾಗಿದೆ. ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್​​​ಗಳನ್ನು ಮೊದಲು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದೇಶದ ದೊಡ್ಡ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡುವ ಆಲೋಚನೆ ಕೇಂದ್ರ ಸರ್ಕಾರದ್ದು. ಈ ಬಗ್ಗೆ ಉತ್ತರ ನೀಡಲು ಹಣಕಾಸು ಸಚಿವಾಲಯ ನಿರಾಕರಿಸಿದೆ.

ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 50,000 ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 33,000, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಲ್ಲಿ 26,000 ಹಾಗೂ ಬ್ಯಾಂಕ್​ ಆಫ್​ ಮಹಾರಾಷ್ಟ್ರದಲ್ಲಿ 13,000 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣವು ರಾಜಕೀಯವಾಗಿ ಅಪಾಯಕಾರಿಯಾಗಿದೆ. ಇದರಿಂದ ಉದ್ಯೋಗ ನಷ್ಟ ಉಂಟಾಗಬಹದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ಹಾಗೂ ಎಲ್​ಐಸಿ ಷೇರುಗಳ್ನು ಸರ್ಕಾರ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆದಿದೆ.

ಇದನ್ನೂ ಓದಿ: HDFC ಬ್ಯಾಂಕ್ ಗ್ರಾಹಕರೇ ಎಚ್ಚರ: RBIನ ಈ ತೀರ್ಮಾನದಿಂದ ನಿಮ್ಮ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗಬಹುದು..!

Follow us on

Related Stories

Most Read Stories

Click on your DTH Provider to Add TV9 Kannada