ಸುಮಾರು 10,000 ರೈತ ಉತ್ಪನ್ನಗಳ ಸಂಸ್ಥೆಗಳನ್ನು (Farmers Producers Organizations -FPO) ಸ್ಥಾಪಿಸುವ ಯೋಜನೆಯಡಿ 100 ಮೇವು ಎಫ್‌ಪಿಒಎಸ್ (ರೈತರ ಉತ್ಪಾದಕ ಸಂಸ್ಥೆಗಳು) ರಚಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯು ಹೇಗೆ ಕಾಗದದ ಮೇಲೆಯೇ ಉಳಿದಿದೆ ಎಂಬುದನ್ನು ವರದಿಯು ಎತ್ತಿ ತೋರಿಸಿದೆ.
ದೇಶದ ಕೆಲವು ಭಾಗಗಳಲ್ಲಿ ಕೃಷಿ ಕುಟುಂಬಗಳ ಮೇಲೆ ಪರಿಣಾಮ ಬೀರುವ ಮೇವಿನ ಕೊರತೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ನಾಲ್ಕು ದಿನಗಳ ಹಿಂದೆ ಸವಿಸ್ತಾರವಾಗಿ ವರದಿ ಮಾಡಿತ್ತು. ಈ ಮೇವಿನ ಕೊರತೆಯನ್ನು ಪರಿಹರಿಸಲು “ತಕ್ಷಣದ ಕ್ರಿಯಾ ಯೋಜನೆ” ಯನ್ನು ರೂಪಿಸಲು ಕೇಂದ್ರ ಸರ್ಕಾರವು ಗುರುವಾರ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಸಭೆಯನ್ನು ಕರೆದಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಸಭೆ ನಡೆಯಲಿದೆ.
ವಿಳಂಬ ಮತ್ತು ವಿರಳವಾದ ಈ ಬಾರಿಯ ಮುಂಗಾರು ಮಳೆ ಮತ್ತು ಹಸಿರು ಮೇವಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಬಾಜ್ರಾ ಬೆಳೆಯೂ ಹಾನಿಗೊಂಡಿದೆ. ಈ ಮಧ್ಯೆ, ಜಾನುವಾರುಗಳನ್ನು ಚರ್ಮ ಗಂಟು ಕಾಯಿಲೆ (Lumpy Skin Disease) ಬಾಧಿಸತೊಡಗಿದೆ. ಜೊತೆಗೆ ಮೇವಿನ ಹಣದುಬ್ಬರ ಒಂಬತ್ತು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ತಮ್ಮ ಜಾನುವಾರುಗಳ ಪೋಷಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕೃಷಿ ಕಾರ್ಯದರ್ಶಿ ಮನೋಜ್ ಅಹುಜಾ ಸೇರಿದಂತೆ ಕೇಂದ್ರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮೇವು ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯಗಳ ಅಧಿಕಾರಿಗಳು ಮತ್ತು ಹೆಚ್ಚುವರಿ ದಾಸ್ತಾನು ಹೊಂದಿರುವ ರಾಜ್ಯಗಳ ಅಧಿಕಾರಿಗಳನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ. ಸಭೆಯಲ್ಲಿ ಹೆಚ್ಚುವರಿಯಿಂದ ಕೊರತೆಯಿರುವ ಪ್ರದೇಶಗಳಿಗೆ ಮೇವು ಸಾಗಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಯೋಜನೆ ರೂಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಉತ್ತರ ಮತ್ತು ದಕ್ಷಿಣದ ರಾಜ್ಯಗಳ ಅಧಿಕಾರಿಗಳನ್ನು ಸಭೆ ಆಹ್ವಾನಿಸಲಾಗಿದ್ದು, ಆಯಾ ರಾಜ್ಯಗಳಲ್ಲಿ ಪರಿಸ್ಥಿತಿಯ ಮೌಲ್ಯಮಾಪನವನ್ನು ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಗೋಧಿ ಹುಲ್ಲು ಬಿಕ್ಕಟ್ಟು ಮತ್ತು ಹವಾಮಾನ ವೈಪರೀತ್ಯ ಮಧ್ಯೆ ತೀವ್ರ ಮೇವಿನ ಕೊರತೆ
ರೈತರು, ಕೃಷಿ ವಿಜ್ಞಾನಿಗಳು ಮತ್ತು ತಜ್ಞರ ಪ್ರಕಾರ, ಗೋಧಿ ಬಿಕ್ಕಟ್ಟಿನಿಂದ ಉತ್ತರ ಭಾರತದ ರಾಜ್ಯಗಳಾದ್ಯಂತ ರೈತರು ಒಣ ಮೇವಿನ ಕೊರತೆಯನ್ನು ಎದುರಿಸುತ್ತಿದ್ದಾರೆ, ಇದು ಪ್ರಾಥಮಿಕವಾಗಿ ಮಾರ್ಚ್‌ನಿಂದ ಅಸಾಮಾನ್ಯ ಬೇಸಿಗೆ ಕಾಲದಿಂದಾಗಿ ಉತ್ತರ ಭಾರತದಲ್ಲಿ ಹಾಲಿ ರಬಿ ಋತುವಿನಲ್ಲಿ ಅನೇಕ ರೈತರು ಗೋಧಿಯ ಬದಲಿಗೆ ಸಾಸಿವೆಯನ್ನು ಬೆಳೆಯಲು ಆಯ್ಕೆ ಮಾಡಿದರು. ಇಲ್ಲಿ ಗೋಧಿಗಿಂತ ಸಾಸಿವೆಗೆ ಕಡಿಮೆ ನೀರು ಇದ್ದರೆ ಸಾಕಾದೀತು ಎಂಬುದಷ್ಟೇ ಅಲ್ಲ, ಬೆಳೆಗೆ ಉತ್ತಮ ಬೆಲೆ ಸಿಗುತ್ತಿದೆ ಎಂಬುದೂ ರೈತರಿಗೆ ಆಕರ್ಷಕವಾಗಿ ಕಂಡಿದೆ. “ರಾಜಸ್ಥಾನದಾದ್ಯಂತ ಗೋಧಿ ಬಿತ್ತನೆ ಕಡಿಮೆಯಾಗಿದೆ. ರೈತರು ಕಡಿಮೆ ನೀರು ಅಗತ್ಯವೆನಿಸುವ ಬೇಳೆ ಮತ್ತು ಸಾಸಿವೆಯಂತಹ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ” ಎಂದು ರೈತರೊಬ್ಬರು ಹೇಳಿದ್ದಾರೆ.
ಗೋಧಿ ಇಳುವರಿ ಕೊರತೆಯು ಉತ್ತರದ ಅನೇಕ ರಾಜ್ಯಗಳಲ್ಲಿ ಜಾನುವಾರುಗಳ ಆಹಾರದ ಬಿಕ್ಕಟ್ಟಿಗೆ ಕಾರಣವಾಗಿದೆ. ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳು ಇತರ ರಾಜ್ಯಗಳಿಗೆ ಒಣಹುಲ್ಲನ್ನು ಕಳುಹಿಸಲು ಅನಿರ್ದಿಷ್ಟಾವಧಿಯ ನಿಷೇಧವನ್ನೂ ವಿಧಿಸಿವೆ.
ಗೋಧಿ ಹುಲ್ಲು ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ 1,100-1,700 ರೂ.ಗೆ ಮಾರಾಟವಾಗುತ್ತಿದೆ; ಕಳೆದ ವರ್ಷ ಅದೇ ಕ್ವಿಂಟಲ್‌ಗೆ 400-600 ರೂ.ಗೆ ಮಾರಾಟವಾಗುತ್ತಿತ್ತು. ರಾಜಸ್ಥಾನದ ಬಿಕಾನೇರ್‌ನಲ್ಲಿ ಗೋಧಿ ಹುಲ್ಲು ಪ್ರತಿ ಕ್ವಿಂಟಲ್‌ಗೆ 2,000 ರೂ.ಗೆ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತದಾದ್ಯಂತ ಮೇವಿನ ತೀವ್ರ ಕೊರತೆಯ ಬಗ್ಗೆ ರೈತರು ದೂರಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಈ ಹಿಂದೆ ವರದಿ ಮಾಡಿತ್ತು.
Published On - 12:39 pm, Thu, 6 October 22