ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಹಲವು ರಾಜ್ಯಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಅಭಾವ ಉಂಟಾಗಿದೆ. ಏತನ್ಮಧ್ಯೆ ಕೊರೊನಾ ಲಸಿಕೆಯ ಕೊರತೆಯೂ ತಲೆದೋರಿರುವುದು ಚಿಂತೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲೇ ಕೊರೊನಾ ಲಸಿಕೆ ಬೆಲೆಯನ್ನು ಸಂಸ್ಥೆಗಳು ಹೆಚ್ಚಿಸಿವೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಹಿಂದೆ ಸರ್ಕಾರ ಒಂದು ಡೋಸ್ ಕೊರೊನಾ ಲಸಿಕೆಗೆ ₹150 ನೀಡುತ್ತಿದ್ದು ಅದನ್ನು ₹400ಕ್ಕೆ ಏರಿಸಲಾಗುತ್ತಿದೆ ಎನ್ನಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್, ಭಾರತದಲ್ಲಿ ಒಂದು ಡೋಸ್ ಕೊರೊನಾ ಲಸಿಕೆಗೆ ಸರ್ಕಾರ ₹400 ನೀಡಬೇಕಾಗಿ ಬಂದಿದೆ. ಇದು ಉಳಿದೆಲ್ಲಾ ದೇಶಗಳ ಸರ್ಕಾರ ಪಾವತಿಸುತ್ತಿರುವುದಕ್ಕಿಂತಲೂ ಅಧಿಕವಾಗಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ, ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದಕ್ಕೆ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ಲಭ್ಯವಿರುವ ಎರಡು ಕೊರೊನಾ ಲಸಿಕೆಗಳನ್ನೂ ಸರ್ಕಾರ ಪ್ರತಿ ಡೋಸ್ಗೆ ₹150ರಂತೆ ಪಾವತಿಸಿ ಖರೀದಿಸುತ್ತಿದೆ. ಇದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ನಾವು ಸಂಸ್ಥೆಯಿಂದ ಖರೀದಿ ಮಾಡಿದ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಉಚಿತವಾಗಿ ವಿವರಿಸುತ್ತಿದ್ಧೇವೆ. ಇನ್ನು ಮುಂದೆಯೂ ಉಚಿತವಾಗಿಯೇ ವಿತರಿಸಲಾಗುವುದು. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟೀಕರಿಸಿದೆ.
It is clarified that Govt of India’s procurement price for both #COVID19 vaccines remains Rs 150 per dose.
GOI procured doses will continue to be provided TOTALLY FREE to States.@PMOIndia @drharshvardhan @AshwiniKChoubey @DDNewslive @PIB_India @mygovindia https://t.co/W6SKPAnAXw
— Ministry of Health (@MoHFW_INDIA) April 24, 2021
ಈ ನಡುವೆ, ಕೊರೊನಾ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೊಳ್ಳುವುದಾದರೆ ₹600 ನೀಡಬೇಕು ಎಂದು ಸ್ವತಃ ಸೆರಮ್ ಸಂಸ್ಥೆಯ ಮುಖ್ಯಸ್ಥರೇ ಹೇಳಿದ್ದು, ಆ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ; ಆನ್‌ಲೈನ್ ನೋಂದಣಿಗೆ ಅವಕಾಶ, ಇಲ್ಲಿದೆ ವಿವರ