AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ

ಭಾರತದಲ್ಲಿ ಪ್ರಯೋಗಿಸುತ್ತಿರುವ ಎರಡು ಲಸಿಕೆಯಲ್ಲಿ ಕೊವಿಶೀಲ್ಡ್​ ದರ ಮೇ 1 ರಿಂದ ಬದಲಾಗಲಿದೆ. ಕೇಂದ್ರ ಸರಕಾರಕ್ಕೆ ರೂ 150 ಕ್ಕೂ, ರಾಜ್ಯಗಳಿಗೆ ರೂ 400 ಮತ್ತು ಖಾಸಗೀ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ ಮಾಡಲಾಗುವುದು ಎಂದು ಕಂಪೆನಿಯ ಮುಖ್ಯಸ್ಥ ಆದಾರ್​ ಪೂನಾವಾಲಾ ತಿಳಿಸಿದ್ದಾರೆ.

ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ
ಕೊವಿಶೀಲ್ಡ್ ವ್ಯಾಕ್ಸಿನ್
ಡಾ. ಭಾಸ್ಕರ ಹೆಗಡೆ
| Edited By: |

Updated on: Apr 21, 2021 | 1:58 PM

Share

ಮೇ 1 ರ ನಂತರ ಲಸಿಕೆ ಪಡೆಯುವ ಯುವಕರು ಈ ಸುದ್ದಿ ಓದಬೇಕು. ಕೊವಿಶೀಲ್ಡ್​ ಲಸಿಕೆ ಮೇ 1 ರಿಂದ ದುಬಾರಿ ಆಗಲಿದೆ. ಈಗ ಕೊವಿಶೀಲ್ಡ್​ ಲಸಿಕೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇದನ್ನು ರೂ 250 ಕ್ಕೆ ನೀಡಲಾಗುತ್ತಿದೆ. ಸೀರಂ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಲಸಿಕೆಯನ್ನು ಇನ್ನು ಮುಂದೆ, ಅಂದರೆ ಮೇ 1 ರಿಂದ, ಮೂರು ದರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಸೀರಂ ಇನ್ಸ್​​ಟಿಟ್ಯೂಟ್​ನ ಮುಖ್ಯಸ್ಥ ಅದಾರ್​ ಪೂನಾವಾಲಾ ಹೇಳಿದ್ದಾರೆ. ತಾನು ಉತ್ಪಾದಿಸುವ ಲಸಿಕೆಯಲ್ಲಿ 590 ಪ್ರತಿಶತ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ರೂ 150 ಕ್ಕೆ ನೀಡಲಾಗುವುದು. ಉಳಿದ 50 ಪ್ರತಿಶತ ಲಸಿಕೆಯಲ್ಲಿ ಅರ್ಧದಷ್ಟನ್ನು ರಾಜ್ಯ ಸರಕಾರಗಳಿಗೆ ತಲಾ ರೂ 400 ಕ್ಕೂ ಮತ್ತು ಖಾಸಗೀ ಆಸ್ಪತ್ರೆಗಳಿಗೆ ರೂ 600 ಕ್ಕೆ ಮಾರಾಟ ಮಾಡಲು ನಿರ್ಧರಿಸುವುದಾಗಿ ಅವರು ಇಂಗ್ಲಿಷ್​ ಟಿವಿ ಚಾನೆಲ್​ ಎನ್​ಡಿ ಟಿವಿಗೆ ಹೇಳಿದ್ದಾರೆ.

ವಿದೇಶಿ ಲಸಿಕೆಗಳಿಗಿಂತ ತಮ್ಮ ಕಂಪೆನಿಯ ಲಸಿಕೆ ಕಡಿಮೆ ದರದಲ್ಲಿ ಸಿಗುತ್ತಿದೆ ಎಂಬುದನ್ನು ಜನ ಗಮನಿಸಬೇಕು. ವಿದೇಶಿ ಲಸಿಕೆ ₹ 750 ರಿಂದ ರೂ 1,500 ವೆಚ್ಚವಾಗುತ್ತದೆ. ಅದಕ್ಕೆ ಹೊಲಿಸಿದರೆ, ಕೊವಿಶೀಲ್ಡ್​ ಕಡಿಮೆ ದರದಲ್ಲಿ ಸಿಗುತ್ತದೆ, ಎಂದು ಹೇಳಿದ್ದಾರೆ. ಸರ್ಕಾರದ ಹೊಸ ನೀತಿಯ ಭಾಗವಾಗಿ, ಶೇಕಡಾ 50 ರಷ್ಟು ಲಸಿಕೆ ಪ್ರಮಾಣವನ್ನು ಕೇಂದ್ರಕ್ಕೆ ಮೀಸಲಿಡಲಾಗುವುದು ಮತ್ತು ಉಳಿದವುಗಳನ್ನು ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಹಂಚಲಾಗುತ್ತದೆ.

ಎಲ್ಲಾ ವಯಸ್ಕರಿಗೆ ವ್ಯಾಕ್ಸಿನೇಷನ್ ಹಾಕಲು ಶುರು ಮಾಡಿದಾಗ ಹೆಚ್ಚುವರಿ 1.2 ಮಿಲಿಯನ್ ಡೋಸ್ ಅಗತ್ಯವಿದೆ. ಹಲವಾರು ರಾಜ್ಯಗಳು ಕೋವಿಡ್ ಲಸಿಕೆ ಕೊರತೆಯ ಕುರಿತು ಈಗಾಗಲೇ ತಿಳಿಸಿವೆ.

ಲಸಿಕೆ ತಯಾರಕರಾದ ಸೀರಮ್ ಇನ್ಸಟಿಟ್ಯೂಟ್​ ಮತ್ತು ಭಾರತ್ ಬಯೋಟೆಕ್‌ಗೆ ಸರ್ಕಾರವು, 4,500 ಕೋಟಿ ನೆರವು ಘೋಷಿಸುವುದರೊಂದಿಗೆ – ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಕೊವಾಕ್ಸಿನ್ ಮತ್ತು ಕೊವಿಶೀಲ್ಡ್​ ಉತ್ಪಾದನೆ ಜಾಸ್ತಿ ಆಗುತ್ತದೆ. ತಮ್ಮ ಕಂಪೆನಿ ಈ ಕೂಡಲೇ ಉತ್ಪಾದನೆಯ ಪ್ರಮಾಣವನ್ನು ಜಾಸ್ತಿ ಮಾಡಲಿದೆ. ಮತ್ತು ಮೇ ಅಂತ್ಯದ ವೇಳೆಗೆ 15-20 ಪ್ರತಿಶತ ಜಾಸ್ತಿ ಕೋವಿಶೀಲ್ಡ್​ ಲಸಿಕೆ ಉತ್ಪಾದನೆ ಆಗಲಿದೆ ಎಂದು ಹೇಳಿದ್ದಾರೆ.

ಜುಲೈ ನಂತರ ತಮ್ಮ ಕಂಪನಿಯು ತಿಂಗಳಿಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಪೂನವಾಲಾ ಹೇಳಿದರು. “ಈ ಕೂಡಲೇ ನಮ್ಮ ಉತ್ಪಾದನೆಯನ್ನು ಜಾಸ್ತಿ ಮಾಡುತ್ತಿದ್ದೇವೆ ಮತ್ತು ಇದರ ಪರಿಣಾಮವನ್ನು ಜುಲೈ ನಂತರ ಕಾಣಬಹುದಾಗಿದೆ. ಆದರೆ ಈಗ ಮತ್ತು ಜುಲೈ ನಡುವೆ ನಾವು ನಮ್ಮ ಮಾಸಿಕ ಸಾಮರ್ಥ್ಯದಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸುತ್ತೇವೆ. ಜುಲೈ ನಂತರ ನಾವು ತಿಂಗಳಿಗೆ 100 ಮಿಲಿಯನ್ ಡೋಸ್‌ಗಳನ್ನು ದಾಟುತ್ತೇವೆ,”ಎಂದು ಅವರು ತಿಳಿಸಿದರು.

ಇದನ್ನೂ ಓದಿ:

ಸಿನಿರಂಗದಲ್ಲಿ ಕೆಲಸ ಮಾಡುವವರಿಗೆ, ಸಿನಿ ಪತ್ರಕರ್ತರಿಗೆ ಮೆಗಾಸ್ಟಾರ್‌ ಚಿರಂಜೀವಿಯಿಂದ ಉಚಿತ ಕೊರೊನಾ ಲಸಿಕೆ.!

(New price structure of Covishield to come into effect from May 1 says Adar Poonawalla of Serum Institute)

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್