TV9 Digital Live | ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇದು ಸಾಧ್ಯವೇ? ತಜ್ಞರ ಅಭಿಪ್ರಾಯಗಳು ಹೀಗಿವೆ

ಒಂದು ಕೇಂದ್ರದಲ್ಲಿಯೇ ಎಲ್ಲರಿಗೂ ಲಸಿಕೆ ನೀಡುವುದು ಬೇಡ ಏಕೆಂದರೆ ಲಸಿಕೆ ಪಡೆಯಲು ಮುಗಿ ಬೀಳುವಾಗಲೇ ಒಬ್ಬರಿಂದ ಒಬ್ಬರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಆಗದೇ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಡಾ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

TV9 Digital Live | ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇದು ಸಾಧ್ಯವೇ? ತಜ್ಞರ ಅಭಿಪ್ರಾಯಗಳು ಹೀಗಿವೆ
ಪ್ರತಿರಕ್ಷಾ ಶಾಸ್ತ್ರಜ್ಞ ಡಾ. ಚಂದ್ರಶೇಖರ್, ಆ್ಯಂಕರ್​ ಸೌಮ್ಯ ಹೆಗಡೆ ಮತ್ತು ಸಾಂಕ್ರಮಿಕ ರೋಗತಜ್ಞರಾದ ಡಾ. ಸುನಿಲ್
Follow us
preethi shettigar
| Updated By: sandhya thejappa

Updated on: Apr 21, 2021 | 10:54 AM

ಏಪ್ರಿಲ್ 19ರಂದು ಕೇಂದ್ರ ಸರಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೇ 1 ರಿಂದ 18 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ಕೊಡಲು ಒಪ್ಪಿಗೆ ನೀಡಿದೆ. ಈ ವಯಸ್ಸಿನ ಕೋಟ್ಯಾಂತರ ಜನರಿಗೆ ಕೊಡಲು ಎಷ್ಟು ಲಸಿಕೆ ಬೇಕು? ಇದೆಲ್ಲ ಸಾಧ್ಯವೇ? ಎನ್ನುವುದು ಸದ್ಯ ನಮ್ಮ ಮುಂದೆ ಇರುವ ಪ್ರಶ್ನೆ ಹೀಗಾಗಿ ಈ ಕುರಿತು ಇಂದಿನ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ ನಡೆಸಲಾಗಿದ್ದು, ಸಾಂಕ್ರಮಿಕ ರೋಗ ತಜ್ಞರಾದ ಡಾ.ಸುನಿಲ್, ಪ್ರತಿರಕ್ಷಾ ಶಾಸ್ತ್ರಜ್ಞ ಡಾ.ಚಂದ್ರಶೇಖರ್, ವೈದ್ಯಕೀಯ ಸಂಘದ ಪದಾಧಿಕಾರಿ ಮಾಯಣ್ಣ ಈ ಸಂವಾದದಲ್ಲಿ ಭಾಗವಹಿಸಿದ್ದಾರೆ. ಆ್ಯಂಕರ್​ ಸೌಮ್ಯ ಹೆಗಡೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

18 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ಕೊಡಲು ಒಪ್ಪಿಗೆ ನೀಡಿರುವುದು ನಿಜಕ್ಕೂ ಉತ್ತಮ ನಿರ್ಧಾರ. ಈ ಹಿಂದೆ ನಿಯಮಿತ ಲಸಿಕೆ ಇದ್ದಿದ್ದರಿಂದ ಸರ್ಕಾರ ಮೊದಲು ಕೊರೊನಾ ವಾರಿಯರ್ಸ್ ಮತ್ತು ಹಿರಿಯರಿಗೆ ಲಸಿಕೆ ನೀಡುವಲ್ಲಿ ಮುಂದಾಗಿತ್ತು. ಆದರೆ ಇಲ್ಲಿ ನಾವು ಒಂದು ಸ್ವಲ್ಪ ಇಡವಿದೆವೂ ಇಸ್ರೇಲ್ ಮತ್ತು ಬೇರೆ ದೇಶ ಮಾಡಿದಾಗ ಪ್ರಾರಂಭದ ಹಂತದಲ್ಲಿಯೇ ಎಲ್ಲರಿಗೂ ಕೂಡ ಲಸಿಕೆಯನ್ನು ನೀಡಬೇಕಾಗಿತ್ತು. ಆದರೆ ಇಸ್ರೇಲ್ ಸಣ್ಣ ಭಾಗ ನಮ್ಮದು ಹಾಗಲ್ಲ ದೊಡ್ಡ ದೇಶ ಹೀಗಾಗಿ ಸ್ವಲ್ಪ ಹಿಂಜರಿಕೆ ಉಂಟಾಗಿದೆ. ಆದರೆ ಈಗೀನ ನಿರ್ಧಾರ ಅವಸ್ಯವಾಗಿದೆ ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.

ಇನ್ನು ಸರ್ಕಾರ ಹಾಕುವ ಸಾವೀನ ಲೆಕ್ಕ ಇಡೀ ದೇಶಕ್ಕೆ ಶೇಕಡಾ 10 ಇರಬಹುದು ಆದರೆ ಒಂದು ಕುಟುಂಬದಲ್ಲಿನ ಸಾವು ಆ ಸಂಸಾರಕ್ಕೆ ಶೇಕಡಾ 100 ಆಗಿರುತ್ತದೆ. ಹೀಗಾಗಿ ಎಲ್ಲರನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಲಸಿಕೆ ಪೂರೈಕೆ ಮಾಡಬೇಕು. ಅಲ್ಲದೇ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ನಮ್ಮ ದೇಶದ ರಕ್ಷಣೆಗಾಗಿ ನಾವು ಶ್ರಮ ಪಡುತ್ತಿದ್ದೇವೆ ಎಂಬ ಭಾವನೆಯನ್ನು ಬೆಳಸಿಕೊಂಡು ಸೇವೆ ಸಲ್ಲಿಸಬೇಕು ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಡಾ.ಚಂದ್ರಶೇಖರ್ ಹೇಳಿದ್ದಾರೆ.

ಸಾರ್ವಜನಿಕರಿಗೆ ಲಿಸಿಕೆ ಮತ್ತು ಕೊರೊನಾ ಕುರಿತು ಮಾಹಿತಿ ನೀಡುವಲ್ಲಿ ನಾವು ವಿಫಲವಾಗಿದ್ದೇವೆ. ಇದರಲ್ಲಿ ಜನರು, ಸುಳ್ಳು ಸುದ್ದಿ ಹಬ್ಬಿಸಿದ ಮಾಧ್ಯಮ ಮತ್ತಿತರ ಎಲ್ಲರ ಪಾತ್ರವು ಕೂಡ ಇದೆ. ಸತ್ಯಾಂಶ ಏನು ಎಂಬುವುದು ಸರಿಯಾಗಿ ಮನವರಿಕೆಯಾಗದೇ ಇರುವ ಕಾರಣಕ್ಕೆ ಲಸಿಕೆ ಹಾಕಿಕೊಳ್ಳುವಲ್ಲಿ ಜನರು ಹಿಂದೇಟು ಹಾಕುತ್ತಿದ್ದಾರೆ . ನನ್ನ ಬಳಿಯೇ ಸಾಕಷ್ಟು ಜನರು ಕರೆ ಮಾಡಿ ಕೇಳಿದ್ದು ಕೂಡ ಉಂಟು ಹೀಗಾಗಿ ಲಸಿಕೆ ಪಡೆದು ಸಾವಾಗಿದೆ ಎನ್ನುವ ಭಯವನ್ನು ಮೊದಲು ದೂರ ಮಾಡಬೇಕು ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.

ಇನ್ನು ಕೊರೊನಾ ಬಂದ ಕುಟುಂಬದಲ್ಲಿ ಜಾಗೃತಿ ಇತ್ತೀಚೆಗೆ ಇದೆ. ಬಿದ್ದ ಮೇಲೆ ಬುದ್ಧಿ ಬರುತ್ತದೆ ಎನ್ನುವುದು ಇದಕ್ಕೆ ಸೂಕ್ತವಾದ ಮಾತು. ಇನ್ನು ನನ್ನ ಕಾಳಜಿ ಏನು ಎಂದರೆ ಲಸಿಕೆ ಕೇಂದ್ರಗಳನ್ನು ಹೆಚ್ಚು ಮಾಡದೇ ಒಂದು ಕೇಂದ್ರದಲ್ಲಿಯೇ ಎಲ್ಲರಿಗೂ ಲಸಿಕೆ ನೀಡುವುದು ಬೇಡ ಏಕೆಂದರೆ ಲಸಿಕೆ ಪಡೆಯಲು ಮುಗಿ ಬೀಳುವಾಗಲೇ ಒಬ್ಬರಿಂದ ಒಬ್ಬರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಆಗದೇ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಪ್ರತಿರಕ್ಷಾ ಶಾಸ್ತ್ರಜ್ಞ ಡಾ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಆದರೆ ಈ ಹಿಂದೆ ಲಸಿಕೆ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನಮ್ಮ ಬಳಿ ಇತ್ತು. ಇನ್ನು ಆ ಸಂದರ್ಭದಲ್ಲಿ ಲಿಸಿಕೆ ಪಡೆಯುವವರ ಸಂಖ್ಯೆ ಕೂಡ ಕಡಿಮೆ ಇತ್ತು. ಹೀಗಾಗಿ ಲಸಿಕೆ ಅಭಾವ ಇರಲಿಲ್ಲ. ನಂತರದ ದಿನಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಾ ಬಂತ್ತು. ಆದರೆ ಲಸಿಕೆಯ ಅಭಾವ ಸೃಷ್ಟಿಯಾಯಿತು. ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಎಂದು ಬಂದಾಗ ನಾವು ಪ್ರಾಯೋಗಿಕವಾಗಿ ಯೋಚನೆ ಮಾಡಬೇಕಾಗುತ್ತದೆ. ಇನ್ನು ಉಳಿದ ದೇಶಗಳಲ್ಲಿ ಒಂದು ದೇಶಕ್ಕೆ ಒಂದು ಲಸಿಕೆ ಇದೆ. ಆದರೆ ನಮ್ಮ ದೇಶದಲ್ಲಿ ಮೊದಲು ಕೊವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಮುಟಿಕ್ ಇದೆ. ಹೀಗಾಗಿ ಈ ಮೂರು ಲಸಿಕೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಒಂದು ದೇಶದಲ್ಲಿ ಒಂದು ಲಸಿಕೆ ಇರುವುದು ಉತ್ತಮವಾದ ಬೆಳವಣಿಗೆ ನಮ್ಮ ದೇಶದಲ್ಲೂ ಇದೇ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಸಾಂಕ್ರಮಿಕ ರೋಗ ತಜ್ಞರಾದ ಡಾ. ಸುನಿಲ್ ಹೇಳಿದ್ದಾರೆ.

ಈಗಾಗಲೇ ಎಲ್ಲಾ ಆಸ್ಪತ್ರೆಗಳಲ್ಲಿ ನಾವು ಅಂದುಕೊಂಡ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಲಸಿಕೆ ವಿಚಾರದಲ್ಲಿ ತುಂಬಾ ಗೊಂದಲ ಇದೆ ಎನ್ನುವುದು ನನ್ನ ಅಭಿಪ್ರಾಯ. ಮೊದಲು ಉಚಿತ ಲಸಿಕೆ ಎಂದು ಇತ್ತು, ನಂತರ ದುಡ್ಡುಕೊಟ್ಟು ಕೊಂಡುಕೊಳ್ಳುವುದು ಎಂದು ತಿಳಿಸಿದರು. ಹೀಗೆ ಮಾಡುವುದರಿಂದ ಜನರಲ್ಲಿ ನಂಬಿಕೆ ಕಡಿಮೆಯಾಗುತ್ತದೆ. ಇದಲ್ಲದೇ ಲಸಿಕೆ ಪೂರೈಕೆ ಮಾಡುತ್ತಿರುವ ಪ್ರಮಾಣ ಕೂಡ ಕಡಿಮೆಯಾಗಿದೆ. ಹೀಗಾಗಿ ಲಸಿಕೆ ಪೂರೈಕೆ ಮಾಡುವುದು ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿದೆ. 15 ರಿಂದ 20ಲಕ್ಷ ಲಸಿಕೆಯಿಂದ ಏನು ಸಾಧಿಸಲು ಸಾಧ್ಯವಾಗುವುದಿಲ್ಲ. ಲಸಿಕೆ ತೆಗೆದುಕೊಳ್ಳಲು ಯಾರು ಇಷ್ಟಪಡುತ್ತಾರೆ ಅವರಿಗೆ ಲಸಿಕೆ ತೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಯಾರು ಲಸಿಕೆ ಪಡೆಯಲು ಇಚ್ಛಿಸುವುದಿಲ್ಲವೋ ಅವರಿಗೆ ನಾವು ಒತ್ತಾಯಪೂರ್ವಕವಾಗಿ ಲಸಿಕೆ ನೀಡುತ್ತಿದ್ದೇವೆ ಇದೆಲ್ಲಾ ನೋಡಿದ ಮೇಲೆ ಸರ್ಕಾರ ಮುಂದಿನ ನಿಲುವುಗಳ ಬಗ್ಗೆ ಕಾತುರರಾಗಿದ್ದೇನೆ ಎಂದು ಸಾಂಕ್ರಮಿಕ ರೋಗ ತಜ್ಞರಾದ ಡಾ.ಸುನಿಲ್ ತಿಳಿಸಿದ್ದಾರೆ.

ಕೊರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಎನ್​ಜಿಓಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಬೇಕು ಮತ್ತು ಎನ್​ಜಿಓ ಮೂಲಕ ಜನರಲ್ಲಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಕೊವಿಡ್ ಸಾಫ್ಟವೇರ್​ ಅನ್ನು ಕೂಡ ಅಪ್​ಡೇಟ್ ಮಾಡಬೇಕು. ಬೇರೆ ದೇಶಕ್ಕೆ ಲಸಿಕೆ ಬೇಕು ಎಂದು ನಮ್ಮ ದೇಶಕ್ಕೆ ಬೇಡಿಕೆ ಇದೆ. ಆದರೆ ನಮ್ಮ ದೇಶದಲ್ಲಿ ಲಸಿಕೆ ಪಡೆಯಲು ಹಿಂದೆ ಉಳಿದಿದ್ದಾರೆ. ಲಸಿಕೆ ಪಡೆದರೇ ಮೂರನೇ ಅಲೆಯ ಪರಿಣಾಮವನ್ನು ನಾವು ಕಡಿಮೆ ಮಾಡಬಹುದು. ಸರ್ಕಾರ ಕೂಡ ಯಾವಾಗಲೂ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಾಂಕ್ರಮಿಕ ರೋಗತಜ್ಞರಾದ ಡಾ.ಸುನಿಲ್ ಅಭಿಪ್ರಾಯಪಟ್ಟಿದ್ದಾರೆ.

ನಾಗರಿಕರೇ ಇವತ್ತೀನ ಈ ಸ್ಥಿತಿಗೆ ನೇರ ಹೊಣೆ ಏಕೆಂದರೆ ಸರ್ಕಾರಕ್ಕೆ ಈ ಬಗ್ಗೆ ಎಷ್ಟು ಜವಾಬ್ದಾರಿ ಇದೆ ಅಷ್ಟೇ ಜವಾಬ್ದಾರಿ ಸಾಮಾನ್ಯ ಜನರಿಗೂ ಕೂಡ ಬೇಕು. ಪೊಲೀಸರು ಹಿಡಿಯುತ್ತಾರೆ ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ಮಾತ್ರ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಲಸಿಕೆ ನೀಡುವಲ್ಲಿ ಹೋಗಿ ಲಸಿಕೆ ತೆಗೆದುಕೊಳ್ಳಲು ಜನ ಇನ್ನಾದರೂ ಮುಂದೆ ಬರಬೇಕು. ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ಕೂಡ ಸರಿಯಾಗಿ ವೆಂಟಿಲೇಟರ್ ಬೆಡ್ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಬೇಕು ಎಂದು ವೈದ್ಯಕೀಯ ಸಂಘದ ಪದಾಧಿಕಾರಿ ಮಾಯಣ್ಣ ಹೇಳಿದ್ದಾರೆ.

ಇದನ್ನೂ ಓದಿ: Tv9 Kannada Digital Live| ಸರ್ಕಾರ ನೀಡಿದ ಮಾರ್ಗಸೂಚಿಯಂತೆ ಜನ ನಡೆದುಕೊಳ್ಳಲು ಏನು ಮಾಡಬೇಕು?