Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Kannada Digital Live| ಸರ್ಕಾರ ನೀಡಿದ ಮಾರ್ಗಸೂಚಿಯಂತೆ ಜನ ನಡೆದುಕೊಳ್ಳಲು ಏನು ಮಾಡಬೇಕು?

ಆನ್​ಲೈನ್ ಪರೀಕ್ಷೆಗಳು ಆಗುತ್ತದೆ, ಆನ್​ಲೈನ್​ ತರಗತಿಯಾಗುತ್ತದೆ ಹೀಗಿರುವಾಗ ಆನ್​ಲೈನ್ ಸಭೆ ಮತ್ತು ಆನ್​ಲೈನ್​ನಲ್ಲಿ ಪ್ರಚಾರ, ಚುನಾವಣೆ ಮಾಡಲು ಸಾಧ್ಯವಾಗುವುದಿಲ್ಲವಾ ಎಂದು ಶ್ವಾಸಕೋಶ ತಜ್ಞರಾದ ಡಾ. ಪವನ್ ಹೇಳಿದ್ದಾರೆ.

Tv9 Kannada Digital Live| ಸರ್ಕಾರ ನೀಡಿದ ಮಾರ್ಗಸೂಚಿಯಂತೆ ಜನ ನಡೆದುಕೊಳ್ಳಲು ಏನು ಮಾಡಬೇಕು?
ಶ್ವಾಸಕೋಶ ತಜ್ಞ ಡಾ. ಪವನ್ , ಗೃಹಿಣಿ ಪುನಿತಾ.ಜೆ ಮತ್ತು ಓಲಾ ಊಬರ್ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ
Follow us
preethi shettigar
|

Updated on:Apr 13, 2021 | 10:02 AM

ಕೊವಿಡ್​ ಎರಡನೇ ಅಲೆ ಹರಡುವುದನ್ನು ತಪ್ಪಿಸಲು ಜನ ಸರಕಾರಕ್ಕೆ ಸಹಕಾರ ನೀಡುತ್ತಿರುವುದು ಅಷ್ಟಾಗಿ ಕಾಣುತ್ತಿಲ್ಲ. ಲಾಕ್​ಡೌನ್​ ಮಾಡಬೇಕಾ? ಸರಕಾರ ನೀಡಿದ ಮಾರ್ಗಸೂಚಿಯಂತೆ ಜನ ನಡೆದುಕೊಳ್ಳುವಂತೆ ಮಾಡಲು ಏನು ಮಾಡಬೇಕು? ಎನ್ನುವ ಗೊಂದಲ ಸದ್ಯ ಶುರುವಾಗಿದೆ. ಈ ಕುರಿತು ಇಂದಿನ ಟಿವಿ9 ಡಿಜಿಟಲ್​ನಲ್ಲಿ ಆ್ಯಂಕರ್​ ಆನಂದ್​ ಬುರಲಿ ಚರ್ಚೆ ನಡೆಸಿದ್ದು, ಈ ಸಂವಾದದಲ್ಲಿ ಶ್ವಾಸಕೋಶ ತಜ್ಞ ಡಾ. ಪವನ್ , ಓಲಾ ಊಬರ್ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಮತ್ತು ಗೃಹಿಣಿ ಪುನಿತಾ.ಜೆ ಭಾಗವಹಿಸಿದ್ದರು.

ಲಾಕ್​ಡೌನ್ ಬೇಕೇ ಅಥವಾ ಬೇಡುವೇ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೊರೊನಾ ಮೊದಲ ಅಲೆ ಬಂದ ಸಂದರ್ಭದಲ್ಲಿ ಲಾಕ್​ಡೌನ್ ಮಾಡಿರುವುದರಿಂದ ನಮ್ಮಲ್ಲಿ ಸಾಕಷ್ಟು ಅನುಭವ ಇದೆ. ಲಾಕ್​ಡೌನ್ ಮೊದಲು ಮಾಡಿದಾಗ ಎಷ್ಟೋ ಜನ ಸರಿಯಾಗಿ ಪಾಲಿಸಿದೆ ಪೊಲೀಸರಿಂದ ಏಟುಗಳನ್ನು ತಿಂದಿದ್ದಾರೆ. ದಂಡ ಕಟ್ಟಿದ್ದಾರೆ. ಎಲ್ಲೋ ಒಂದು ಕಡೆ ಲಾಕ್​ಡೌನ್ ಯಶಸ್ವಿ ಆಗಿದೆಯಾ ಎನ್ನುವ ಪ್ರಶ್ನೆ ಇದೆ. ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದೇವೆ. ಆದರೆ ಎಲ್ಲಾ ಕೆಲಸ ಕಾರ್ಯ ಸ್ಥಗಿತಗೊಂಡಿತು. ಈಗ ಮತ್ತೆ ಲಾಕ್​ಡೌನ್ ಮಾಡಿ ಮತ್ತೆ ಅದೇ ಪರಿಸ್ಥಿತಿ ಎದುರಿಸಬೇಕಾ ಎನ್ನುವುದು ಪ್ರಶ್ನೆ. ಲಾಕ್​ಡೌನ್​ನಿಂದ ಮರಣ ಪ್ರಮಾಣ ಕಡಿಮೆ ಮಾಡಬಹುದು ವಿನಃ ಕೊವಿಡ್ ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಶ್ವಾಸಕೋಶ ತಜ್ಞರಾದ ಡಾ. ಪವನ್ ಹೇಳಿದ್ದಾರೆ.

ಈಗ ಮತ್ತೆ ಲಾಕ್​ಡೌನ್​ ಮಾಡುವುದರಿಂದ ಆರ್ಥಿಕ ಸ್ಥಿತಿ ಮತ್ತೆ ಹದಗೆಡುವ ಸಾಧ್ಯತೆ ಇದೆ. ಬೇರೆ ದೇಶಗಳಲ್ಲಾದರೆ ಜನರನ್ನು ಸಾಕುವ ಶಕ್ತಿ ಸರ್ಕಾರಕ್ಕೆ ಇದೆ. ಆದರೆ ನಮ್ಮ ದೇಶದಲ್ಲಿ ಇರುವ ಜನರಿಗೆ ಮೂಲ ಸೌಕರ್ಯವನ್ನು ನೀಡಿ ಅವರನ್ನು ಸಾಕುವ ಚೈತನ್ಯ ನಮ್ಮ ಸರ್ಕಾರಕ್ಕೆ ಇಲ್ಲ. ಅದರಲ್ಲೂ ನಮ್ಮಲ್ಲಿ 70 ಜನ ಕೃಷಿ ಆಧಾರಿತರು ಇದ್ದಾರೆ. ಇನ್ನು ಕೂಲಿ ಕೆಲಸ ಮಾಡಿ ಬದುಕುವವರು ಇದ್ದಾರೆ. ಅಲ್ಲದೆ ವ್ಯಾಪರ ವಹಿವಾಟು ಮಾಡುವವರಿಗೆ ಮತ್ತೆ ಲಾಕ್​ಡೌನ್​ ಮಾಡಿದರೆ ದೊಡ್ಡ ಹೊಡೆತ ಬೀಳಲಿದೆ ಎಂದು ಶ್ವಾಸಕೋಶ ತಜ್ಞರಾದ ಡಾ. ಪವನ್ ತಿಳಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ನಾವು ಈಗ ಲಾಕ್​ಡೌನ್ ಮಾಡಿದರೆ ಮೊದಲ ಹಂತದ ಕೊರೊನಾ ಅಲೆಯಲ್ಲಿ ಮಾಡಿದ ತಪ್ಪನ್ನೆ ಪುನಃ ಮಾಡಿದಂತಾಗುತ್ತದೆ. ಲಾಕ್​ಡೌನ್ ತಡೆಯುವ ಶಕ್ತಿ ನಮ್ಮಲ್ಲಿ ಇಲ್ಲ. ರಾಜಕಾರಣಿ, ಸಾರ್ವಜನಿಕರು ಎಲ್ಲರ ತಪ್ಪು ಇಲ್ಲಿ ಇದೆ. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಒಬ್ಬರ ಮೇಲೆ ಒಬ್ಬರು ದೂರಿಕೊಂಡು ನಡೆದರೆ ಪ್ರಯೋಜನ ಇಲ್ಲ. ಜೀವನ ಮತ್ತು ಜೀವ ಎರಡನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಶ್ವಾಸಕೋಶ ತಜ್ಞರಾದ ಡಾ. ಪವನ್ ಅಭಿಪ್ರಾಯಪಟ್ಟಿದ್ದಾರೆ.

ಆನ್​ಲೈನ್ ಪರೀಕ್ಷೆಗಳು ಆಗುತ್ತದೆ, ಆನ್​ಲೈನ್​ ತರಗತಿಯಾಗುತ್ತದೆ ಹೀಗಿರುವಾಗ ಆನ್​ಲೈನ್ ಸಭೆ ಮತ್ತು ಆನ್​ಲೈನ್​ನಲ್ಲಿ ಪ್ರಚಾರ, ಚುನಾವಣೆ ಮಾಡಲು ಸಾಧ್ಯವಾಗುವುದಿಲ್ಲವಾ. ಇನ್ನು ಕೊರೊನಾ ಹೆಚ್ಚಾಗಿದೆ ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲ ಎನ್ನುವುದು ತಪ್ಪು ಬೆಡ್​ಗಳು ಹೆಚ್ಚು ಇದ್ದರೆ ಅವರನ್ನು ನೋಡಿಕೊಳ್ಳಲು ಆರೋಗ್ಯ ಸಿಬ್ಬಂದಿಗಳು ಬೇಕು ಅವರ ಕೊರತೆ ಇದೆ. ಹೀಗಾಗಿ ಇರುವ ಬೆಡ್​ಗಳಲ್ಲಿಯೇ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಮುಖ್ಯ ಎಂದು ಶ್ವಾಸಕೋಶ ತಜ್ಞರಾದ ಡಾ. ಪವನ್ ಹೇಳಿದ್ದಾರೆ.

ಯಾರು ಕೂಡ ಇತ್ತೀಚೆಗೆ ಮಾಸ್ಕ್ ಧರಿಸುವುದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ. ರಸ್ತೆಗಳಂತು ತುಂಬಿರುತ್ತದೆ. ಹೀಗಾಗಿ ನಾನು ಕೇಳಿಕೊಳ್ಳುವುದು ಇಷ್ಟೇ ಮಾಸ್ಕ್​ಗಳನ್ನು ಎಲ್ಲರೂ ಧರಿಸಬೇಕು ಮತ್ತು ಯಾರು ಬೀದಿಗಳಲ್ಲಿ ಮಾಸ್ಕ್​ ಕೊಂಡುಕೊಳ್ಳಲು ಆಗದ ಸ್ಥಿತಿಯಲ್ಲಿ ಇರುತ್ತಾರೆ. ಅವರಿಗೆ ಮಾಸ್ಕ್​ ಹಂಚುವ ಕಾರ್ಯವನ್ನು ಮಾಡಬೇಕಿದೆ. ಇನ್ನು ಮಕ್ಕಳಲ್ಲಿ ಕೊರೊನಾ ಹರಡದಂತೆ ಕಾಪಾಡಲು ಹೆಚ್ಚು ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು ಇನ್ನು ಹಬ್ಬ ಹರಿದಿನದ ಸಂದರ್ಭದಲ್ಲಿ ಮುಂಜಾನೆಯ ಸಮಯಕ್ಕೆ ಹೋಗಿ ಹೂವು ಹಣ್ಣುಗಳನ್ನು ಖರೀದಿ ಮಾಡುವುದು ಅಗತ್ಯ ಇದನ್ನು ಎಲ್ಲರು ಅರಿತುಕೊಳ್ಳಬೇಕು. ಮಾರುಕಟ್ಟೆಗಳಲ್ಲಿ ಹೆಚ್ಚು ಗುಂಪು ಸೇರುವುದನ್ನು ನಿಲ್ಲಿಸಬೇಕು ಎಂದು ಗೃಹಿಣಿ ಪುನಿತಾ.ಜೆ ತಿಳಿಸಿದ್ದಾರೆ.

ಲಾಕ್​ಡೌನ್ ಆಗಿಬಿಟ್ಟರೆ ನೆಮ್ಮದಿಯಿಂದ ಬದುಕುವುದನ್ನೇ ಜನರು ಮರೆತುಬಿಡಬೇಕಾಗುತ್ತದೆ. ಲಾಕ್​ಡೌನ್ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ತಪ್ಪು ಹೊರಿಸುತ್ತಿದ್ದಾರೆ. ಸ್ವಲ್ಪಮಟ್ಟಿಗೆ ಜನರು ಮಾಸ್ಕ್ ಇಲ್ಲದೆ ರಸ್ತೆಗೆ ಇಳಿದಿರಬಹುದು ಆದರೆ ಕೊರೊನಾ ಹೆಚ್ಚಾಗಲು ಸರ್ಕಾರವೇ ನೇರವಾಗಿ ಕಾರಣ. ಕೆಲವು ತಿಂಗಳುಗಳ ಹಿಂದೆ ಕೊರೊನಾ ಕಾಲದಲ್ಲಿ ರಾಜಕೀಯ ಅಧಿಕಾರಿಗಳೇ ಮೆರವಣಿಗೆಯನ್ನು ನಡೆಸಿದ್ದಾರೆ. ಮಾಸ್ಕ್ ಹಾಕಿಕೊಳ್ಳದೇ ಪ್ರಚಾರ ಕಾರ್ಯದಲ್ಲಿ ಮುಂದಾಗಿದ್ದರು. ಇದನ್ನೇಲ್ಲ ನೋಡಿದ ಜನರು ಮಾಸ್ಕ್ ಹಾಕುವುದನ್ನು ಬಿಟ್ಟಿದ್ದಾರೆ. ಸರ್ಕಾರವೇ ಕೊರೊನಾವನ್ನು ಕಡೆಗಣಿಸಿದೆ. ಈ ಬಾರಿಯೂ ಮತ್ತೆ ಲಾಕ್​ಡೌನ್ ಆದರೆ ಜನರು ಹೆಚ್ಚಾಗಿ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಓಲಾ ಊಬರ್ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಹೇಳಿದ್ದಾರೆ.

​ಒಟ್ಟಾರೆಯಾಗಿ ಕೊರೊನಾ ಲಕ್ಷಣಗಳು ಕಂಡುಬಂದಾಗ ಆಸ್ಪತ್ರೆಗಳಿಗೆ ಹೋಗಿ, ಸುಖಸುಮ್ಮನೆ ಕೊರೊನಾ ಹರಡುವಿಕೆ ಬಗ್ಗೆ ಆತಂಕಪಡುವುದರ ಬದಲು. ಮಾಸ್ಕ್ ಧರಿಸುವುದು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ. ಆ ಮೂಲಕ ಲಾಕ್​ಡೌನ್​ನಿಂದ ದೂರವಿರಬಹುದು.

ಇದನ್ನೂ ಓದಿ: Tv9 Digital Live: ಕೊರೊನಾ ನಡುವೆ ಐಟಿ ಕಂಪನಿಗಳ ಸಾಧನೆ! ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಾ?

( TV9 Kannada Digital live experts shares opinion about coronavirus )

Published On - 10:00 am, Tue, 13 April 21

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ