Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Digital Live: ಕೊರೊನಾ ನಡುವೆ ಐಟಿ ಕಂಪನಿಗಳ ಸಾಧನೆ! ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಾ?

2020ರ ಲಾಕ್​ಡೌನ್​ ಸಂಕಷ್ಟದಲ್ಲೂ ಐಟಿ ಕಂಪನಿಗಳು ಉತ್ತಮ ಸಾಧನೆ ಮಾಡಿವೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಉತ್ತಮ ಬೆಳವಣಿಗೆ ಹೊಸ ಉದ್ಯೋಗಗಳನ್ನು ಹುಟ್ಟು ಹಾಕಬಹುದು ಮತ್ತು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಂಬಳದಲ್ಲಿ ಹೆಚ್ಚಳವಾಗಬಹುದೆಂಬ ಆಶಾ ಭಾವನೆ ಸದ್ಯಕ್ಕೆ ಮೂಡುತ್ತಿದೆ.

Tv9 Digital Live: ಕೊರೊನಾ ನಡುವೆ ಐಟಿ ಕಂಪನಿಗಳ ಸಾಧನೆ! ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಾ?
ಕುಮಾರ ಸ್ವಾಮಿ ಮತ್ತು ಡಾ.ಎಂ.ಯು.ಆಶ್ವತ್ಥ್
Follow us
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 07, 2021 | 11:42 PM

ಬೆಂಗಳೂರು: ಕೊರೊನಾ ಎಂಬ ಮಹಾಮಾರಿ ಸೋಂಕು ಹುಟ್ಟು ಹಾಕುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಆರ್ಥಿಕವಾಗಿ, ಮಕ್ಕಳ ಭವಿಷ್ಯದ ಮೇಲೆ ಸೇರಿದಂತೆ ಹಲವು ವಿಷಯಗಳಲ್ಲಿ ನಾನಾ ರೀತಿಯ ತೊಂದರೆಗಳನ್ನು ತಂದೊಡ್ಡಿದೆ. ಈ ನಡುವೆಯೂ ಭಾರತೀಯ ಐಟಿ ಕಂಪನಿಗಳು ಅತ್ಯುತ್ತಮ ಸಾಧನೆ ಮಾಡಿವೆ. ಈ ಬಗ್ಗೆ ಬ್ಲೂಂಬರ್ಗ್​ ಮತ್ತು ಬ್ಯುಸಿನೆಸ್​ ಟುಡೆ ಪತ್ರಿಕೆಗಳು ವರದಿ ಮಾಡಿವೆ. ಹಾಗಾದರೆ ಈ ಸಾಧನೆಯಿಂದ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆಯಾ? ಇನ್ನೂ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ಸಿಗಬಹುದಾ ಎಂದು ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಉದ್ಯಮಿ ಕುಮಾರಸ್ವಾಮಿ ಮತ್ತು ಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಯು.ಆಶ್ವತ್ಥ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆ್ಯಂಕರ್ ಆನಂದ್ ಬುರಲಿ ನಡೆಸಿಕೊಟ್ಟರು.

2020ನೇ ಇಡೀ ವರ್ಷ ಸಂಪೂರ್ಣವಾಗಿ ಲಾಕ್​ಡೌನ್​ ಮೂಲಕ ಮಗಿದು ಹೋಗಿತ್ತು. ಈ ಸಂದರ್ಭದಲ್ಲೂ ಐಟಿ ಕಂಪನಿಗಳು ಹೊಸ ಸಾಧನೆ ಮಾಡಿವೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಉತ್ತಮ ಬೆಳವಣಿಗೆ ಹೊಸ ಉದ್ಯೋಗಗಳನ್ನು ಹುಟ್ಟು ಹಾಕಬಹುದು ಮತ್ತು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಂಬಳದಲ್ಲಿ ಹೆಚ್ಚಳವಾಗಬಹುದೆಂಬ ಆಶಾ ಭಾವನೆ ಸದ್ಯಕ್ಕೆ ಮೂಡುತ್ತಿದೆ. ಆದರೆ ಐಟಿ ಕಂಪನಿಯ ಸಾಧನೆಗೆ ಕಾರಣವೇನು ಎಂದು ಚರ್ಚೆಯ ಅತಿಥಿಯಾಗಿದ್ದ ಉದ್ಯಮಿ ಕುಮಾರ ಸ್ವಾಮಿಗೆ ಆ್ಯಂಕರ್ ಆನಂದ್ ಬುರಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಮಾರ ಸ್ವಾಮಿ ಕೊರೊನಾದಿಂದ ನೌಕರರಿಗೆ ವರ್ಕ್ ಫ್ರಮ್ ಹೋಮ್ನ ನೀಡಲಾಗಿತ್ತು. ಇದರಿಂದ ಕಂಪನಿಗಳು ಉತ್ತಮ ಬೆಳವಣಿಗೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮನೆಯಲ್ಲೇ ಕೂತು ಕೆಲಸ ಮಾಡುವುದರಿಂದ ಕಂಪನಿಗೆ ಹೋಗಿ ಬರುವ ಸಮಯವನ್ನು ಕೆಲಸದಲ್ಲಿ ವ್ಯಯಿಸುವುದರಿಂದ ಕಂಪನಿಯ ಪ್ರೊಡಕ್ಷನ್ ಅಭಿವೃದ್ಧಿ ಹೊಂದುತ್ತಿದೆ. ಸಣ್ಣಸಣ್ಣ ಉದ್ಯಮಕ್ಕೆ ಮಾತ್ರ ಕೊರೊನಾ ವೇಳೆಯಲ್ಲಿ ಹೊಡೆತ ಬಿದ್ದಿದೆ. ಆದರೆ ಐಟಿ ಕಂಪನಿಗಳ ಬೆಳವಣಿಗೆಗೆ ಯಾವುದೇ ತೊಂದರೆ ಎದುರಾಗಿಲ್ಲ. ಈಗ ತಾನೇ ಎಂಜಿನಿಯರಿಂಗ್ ಮುಗಿಸಿ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಇವೆ. ಆದರೆ ಕಂಪನಿಯ ಬಗ್ಗೆ ಹೆಚ್ಚು ಜ್ಞಾನವನ್ನು ಹೊತ್ತು ಬಂದಾಗ ವಿದ್ಯಾರ್ಥಿಗಳಿಗೆ ಉದ್ಯೋಗಗಳು ಸಿಗುತ್ತದೆ. ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿವೆ. ಇವುಗಳ ಬಗ್ಗೆ ಸ್ವಲ್ಪ ಜ್ಞಾನವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ತಿಳಿಸಿದರು.

;

ಎಂಜಿನಿಯರಿಂಗ್ ಮುಗಿಸಿದ ತಕ್ಷಣ ಕೆಲಸ ಸಿಗುತ್ತದೆ ಎನ್ನುವ ಮನೋಭಾವವನ್ನು ಇಟ್ಟುಕೊಳ್ಳುವ ಬದಲು ತಕ್ಷಣ ಕೆಲಸವನ್ನು ಪಡೆಯುವುದಕ್ಕೆ ಬೇಕಾಗುವ ತಯಾರಿಗಳನ್ನು ಮಾಡಿಕೊಂಡರೆ ಸೂಕ್ತ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕೂತು ಕಲಿಯುವುದಕ್ಕೂ, ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೋ ಆ ಕ್ಷೇತ್ರದಲ್ಲಿ ಹೆಚ್ಚಾಗಿ ತಿಳಿದುಕೊಳ್ಳಬೇಕು. ಆಳಾವಾಗಿ ಅಧ್ಯಾಯನ ನಡೆಸಬೇಕು. ಕಾಲೇಜುಗಳಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತದೆ. ಹೀಗಾದಾಗ ಮಾತ್ರ ಐಟಿ ಕಂಪನಿಗಳಲ್ಲಿ ಕೆಲಸ ಮಾಡಬಹುದು ಎಂದರು.

ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಯು.ಆಶ್ವತ್ಥ್ ಕೊರೊನಾಕ್ಕೂ ಮೊದಲು ಐಟಿ ಕಂಪನಿಗಳು ಬೆಳವಣಿಗೆಯನ್ನು ಹೋದುತ್ತಾ ಬಂದಿದೆ. ಹಲವು ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್​ಗೆ ಬರುತ್ತಿವೆ. ಕಂಪನಿಗಳು ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಿವೆ ಎಂದು ತಿಳಿದುಕೊಂಡು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರಿ ಮಾಡಲಾಗುತ್ತಿದೆ. ಕೇವಲ ಪುಸ್ತಕದಲ್ಲಿರುವ ಪಠ್ಯಕ್ಕೆ ಸೀಮಿತವಾಗಿಸಿ ವಿದ್ಯಾರ್ಥಿಗಳನ್ನು ತಯಾರಿ ಮಾಡುತ್ತಿಲ್ಲ. ಇದರ ಜೊತೆ ಜೊತೆಗೆ ಉದ್ಯೋಗಕ್ಕೆ ಅಗತ್ಯವಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲಾ ಕ್ಷೇತ್ರಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ತಯಾರಿ ಮಾಡುವುದು ತೀರಾ ಕಷ್ಟ. ಹೀಗಾಗಿ ವಿದ್ಯಾರ್ಥಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಎಂದು ತಿಳಿದುಕೊಂಡು, ಜೊತೆಗೆ ಯಾವ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆಯಿದೆ ಎಂದು ಅರಿತುಕೊಂಡು ಈ ದೆಸೆಯಲ್ಲಿ ತರಬೇತಿಗಳನ್ನು ನೀಡಲಾಗುತ್ತದೆ. ಕೊರೊನಾ ವೇಳೆಯಲ್ಲೂ ಆನ್​ಲೈನ್​ನಲ್ಲಿ ಸಾಧ್ಯವಾಗುವ ಮಟ್ಟಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸದ್ಯ ರಾಜಕಾರಣದಲ್ಲಿ ಈಶ್ವರಪ್ಪ, ಯಡಿಯೂರಪ್ಪ ಮುಸುಕಿನ ಗುದ್ದಾಟದ್ದೆ ಸುದ್ದಿ.. ಇಲ್ಲಿದೆ ಸಮಗ್ರ ಮಾಹಿತಿ

ಇದನ್ನೂ ಓದಿ: ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ: ಶಂಕರ್ ಅಶ್ವಥ್

(Discussion about IT Company Recruitment on tv9 digital live)

Published On - 11:41 pm, Wed, 7 April 21

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ