ಕಲಬುರಗಿಯಲ್ಲಿ ಬರ್ಬರ ಹತ್ಯೆ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ಕಲಬುರಗಿಯಲ್ಲಿ ಬರ್ಬರ ಹತ್ಯೆ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು
ಪ್ರಾತಿನಿಧಿಕ ಚಿತ್ರ

ಆಸ್ಪತ್ರೆಗೆ ದಾಖಲಾಗಿದ್ದ ಜಿಶಾನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. 25 ವರ್ಷದ ಆಟೋ ಚಾಲಕ ಜಿಶಾನ್ ಮೇಲೆ ಹಲ್ಲೆ ನಡೆಸಲು ಹಳೆ ವೈಷಮ್ಯವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

sandhya thejappa

|

Apr 21, 2021 | 10:33 AM

ಕಲಬುರಗಿ: ಮಾರಕಾಸ್ತ್ರಗಳಿಂದ ಆಟೋ ಚಾಲಕನ ಬರ್ಬರ ಹತ್ಯೆ ನಡೆದಿರುವ ಘಟನೆ ನಗರದ ದರ್ಗಾ ರಸ್ತೆಯ ಸನಾ ಹೋಟೆಲ್ ಬಳಿ ನಡೆದಿದೆ. ನಗರದ ಮಿಲ್ಲತ್ ನಗರ ಬಡಾವಣೆಯ ನಿವಾಸಿ ಜಿಶಾನ್ (25) ಹತ್ಯೆಗೊಳಗಾದ ಆಟೋ ಚಾಲಕ. ಸನಾ ಹೋಟೆಲ್ ಬಳಿ ನಿಂತಾಗ ನಾಲ್ಕೈದು ಜನ ಬಂದು ಜಿಶಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಕಳೆದ ರಾತ್ರಿ ನಡೆದ ಘಟನೆಯಲ್ಲಿ ಜಿಶಾನ್ ಗಂಭೀರ ಗಾಯಗೊಂಡಿದ್ದರು. ಗಾಯಗೊಂಡ ಜಿಶಾನ್ನನ್ನು ತಡರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾಗಿದ್ದ ಜಿಶಾನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. 25 ವರ್ಷದ ಆಟೋ ಚಾಲಕ ಜಿಶಾನ್ ಮೇಲೆ ಹಲ್ಲೆ ನಡೆಸಲು ಹಳೆ ವೈಷಮ್ಯವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಣದ ವಿಚಾರಕ್ಕಾಗಿ ಸಹೋದರನಿಗೆ ಚಾಕು ಇರಿತ ಹುಬ್ಬಳ್ಳಿ: ನಗರದ ಈಶ್ವರ ನಗರದಲ್ಲಿ ಹಣದ ವಿಚಾರಕ್ಕಾಗಿ ಸಹೋದರನಿಗೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಪ್ಪನ ಮಗ ಮಂಜು ಎಂಬಾತ ಸುನೀಲ ಕೃಷ್ಣಾ ಘಾಟೇಕರ ಎಂಬುವವನಿಗೆ ಚಾಕು ಇರಿದಿದ್ದಾನೆ. ಮದುವೆಗೆ ಹಣ ಕೇಳುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಮದುವೆಗೆ ಹಣ ನೀಡುವಂತೆ ಸುನೀಲ್​ಗೆ ಮಂಜು ಪೀಡಿಸುತ್ತಿದ್ದ. ಮಂಜು ಸುನೀಲ್ ಬೆನ್ನಿಗೆ ಮತ್ತು ಇತರೆ ಎರಡು ಕಡೆಗಳಲ್ಲಿ ಚಾಕು ಇರಿದಿದ್ದಾನೆ. ಗಾಯಗೊಂಡ ಸುನೀಲ ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕಸಬಾ ಪೊಲೀಸರು ಮಂಜುನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್.. ಅಂತ್ಯಸಂಸ್ಕಾರಕ್ಕೆ ಗೇಟ್​ ಮುಂದೆ ಕಾದು ಕುಳಿತ ಕುಟುಂಬಸ್ಥರು

ಅಂತ್ಯಕ್ರಿಯೆ ಹೊತ್ತಲ್ಲಿ ಬಂತು ಪಾಸಿಟಿವ್​, ಸಂಬಂಧಿಕರೆಲ್ಲಾ ಕಾಲ್ಕಿತ್ತ ಮೇಲೆ ನೆಗೆಟಿವ್ ರಿಪೋರ್ಟ್​; ಅಧಿಕಾರಿಗಳ ಯಡವಟ್ಟಿಗೆ ಜನ ಹೈರಾಣು

(Auto driver murdered by Strangers at Kalaburagi)

Follow us on

Related Stories

Most Read Stories

Click on your DTH Provider to Add TV9 Kannada