ಪಾಟ್ನಾ: ಬಿಹಾರದ ಕಿಶನ್‌ಗಂಜ್‌ನಲ್ಲಿರುವ ಆರ್‌ಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರೈ ಸೇರಿ ಮೂವರು ಸರ್ಕಾರಿ ಅಧಿಕಾರಿಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ಇಲಾಖೆ ದಾಳಿ ನಡೆಸಿದೆ. ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿದ್ದು, ಲೆಕ್ಕಕ್ಕೆ ಸಿಗದ ಕೋಟಿಗಟ್ಟಲೆ ಹಣವನ್ನು ವಶಪಡಿಸಿಕೊಂಡಿದೆ. ಗ್ರಾಮೀಣ ಕಾಮಗಾರಿ ಇಲಾಖೆಯ (ಆರ್‌ಡಬ್ಲ್ಯುಡಿ) ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಕೇಂದ್ರ ವಿಚಕ್ಷಣ ಆಯೋಗದ ತಂಡ ದಾಳಿ ನಡೆಸಿದೆ. ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್‌ಗಳಿಂದ ಲಂಚ ಪಡೆದಿರುವ ಬಗ್ಗೆ ಮಾಹಿತಿ ಪಡೆದ ತಂಡ ರೈ ಮನೆ ಮೇಲೆ ದಾಳಿ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ನಾದ ಇಂದ್ರಪುರಿ ರಸ್ತೆ ಸಂಖ್ಯೆ 10ರಲ್ಲಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಜಯ್ ಕುಮಾರ್ ರೈ ಅವರ ನಿವಾಸದ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಸಿದ್ದು, ಸುಮಾರು ₹ 1 ಕೋಟಿ ನಗದು ಪತ್ತೆಯಾಗಿದೆ.
#WATCH | Bihar: Cash counting is underway at the residence of Sanjay Kumar Rai, Executive Engineer of the Kishanganj Division of Rural Works Department in Patna.
Vigilance department has conducted raids at 3-4 premises of Sanjay Kumar Rai in Bihar pic.twitter.com/RwW04tNs4I
— ANI (@ANI) August 27, 2022
ಇದೇ ವೇಳೆ ತನಿಖಾ ತಂಡ ನೋಟುಗಳನ್ನು ಹೊಂದಾಣಿಕೆ ಮಾಡಲು ಆರಂಭಿಸಿದೆ. ದಾಳಿಯಲ್ಲಿ ಇನ್ನೂ ಹಲವು ದಾಖಲೆಗಳು ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಳಿ ನಡೆಯುತ್ತಿದೆ. ಅಪಾರ ಪ್ರಮಾಣದ ನಗದು ವಸೂಲಿಯಾಗಿರುವುದರಿಂದ ನೋಟು ಎಣಿಕೆ ಯಂತ್ರ ಅಳವಡಿಸಲಾಗಿದೆ.
ಪಾಟ್ನಾದ ಡಿಎಸ್ಪಿ ವಿಜಿಲೆನ್ಸ್ ಸುಜಿತ್ ಸಾಗರ್ ಪ್ರಕಾರ, ಸಂಜಯ್ ಕುಮಾರ್ ರೈ ಒಳಗೊಂಡ ಲಂಚಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಹಲವಾರು ದಾಳಿಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಹಲವಾರು ದಾಳಿಗಳನ್ನು ನಡೆಸಲಾಯಿತು ಮತ್ತು 4 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.
Published On - 3:23 pm, Sat, 27 August 22