ಯುಕೆಯ ಖ್ಯಾತ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಗಡಿಪಾರು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ದುಬೈನಿಂದ ಸುಮಾರು ಇಪ್ಪತ್ತು ಗಂಟೆಗಳ ಪ್ರಯಾಣದ ನಂತರ  ಮುಂಜಾನೆ 3.05ಕ್ಕೆ ತಿರುವನಂತಪುರಕ್ಕೆ ಬಂದಿಳಿದಾಗ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ಬಲವಂತವಾಗಿ ಗಡೀಪಾರು ಮಾಡಲಾಯಿತು ಎಂದು ಅರ್ಜಿದಾರರು ಹೇಳಿದ್ದಾರೆ.

ಯುಕೆಯ ಖ್ಯಾತ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಗಡಿಪಾರು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ಫಿಲಿಪ್ಪೊ ಒಸೆಲ್ಲಾ
Edited By:

Updated on: Oct 12, 2022 | 8:33 PM

ಮಾರ್ಚ್‌ನಲ್ಲಿ ಭಾರತಕ್ಕೆ ಪ್ರವೇಶ ನಿರಾಕರಣೆ ಮತ್ತು ನಂತರದ ಅವರ ಗಡೀಪಾರು ವಿರುದ್ಧ ಯುಕೆ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ (Filippo Osella) ಅವರು ಸಲ್ಲಿಸಿದ ಅರ್ಜಿಯನ್ನು ಕೇಂದ್ರ ಸರ್ಕಾರ ಬುಧವಾರ ವಿರೋಧಿಸಿದ್ದು, ಅವರು ಕಪ್ಪು ಪಟ್ಟಿಯ ಅತ್ಯುನ್ನತ ವರ್ಗದಲ್ಲಿದ್ದಾರೆ ಎಂದು ಹೇಳಿದೆ. ಅರ್ಜಿದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ನಂತರ ಅವರನ್ನು ಗಡಿಪಾರು ಮಾಡಲು ಅಧಿಕಾರಿಗಳು ಸಾಕಷ್ಟು ಕಾರಣಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರದ ವಕೀಲರು ಹೇಳಿದರು. ಕೇರಳದ ಮೀನುಗಾರ ಸಮುದಾಯಗಳ ಕುರಿತು ಸಂಶೋಧನೆಯಲ್ಲಿ ತೊಡಗಿರುವ ಬ್ರಿಟನ್​​ನ ಮಾನವಶಾಸ್ತ್ರಜ್ಞ ಮಾರ್ಚ್ 23 ರಂದು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ಗಡೀಪಾರು ಮಾಡಲಾಯಿತು ಎಂದು ಹೇಳಿದ್ದಾರೆ.  ಅವರು (ಅರ್ಜಿದಾರರು) ಕಪ್ಪುಪಟ್ಟಿಯ ಅತ್ಯಧಿಕ ವರ್ಗದಲ್ಲಿದ್ದರು. ಬಹಳಷ್ಟು ಸಂಗತಿಗಳು ಇದ್ದ ಕಾರಣ ಅವರನ್ನು ಗಡೀಪಾರು ಮಾಡಬೇಕಾಯಿತು. ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಸಂಗತಿಗಳು ಇವೆ ಎಂದು ಕೇಂದ್ರ ಸರ್ಕಾರದ ವಕೀಲರು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು.

ಅಫಿಡವಿಟ್‌ನಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲದ ಕಾರಣ ಸಂಬಂಧಿತ ಫೈಲ್ ಅನ್ನು ಪರಿಶೀಲಿಸುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಏತನ್ಮಧ್ಯೆ, ನ್ಯಾಯಮೂರ್ತಿ ಯಶವಂತ್ ವರ್ಮಾ ನ್ಯಾಯಾಲಯವು ಯಾವುದೇ ವಿಶೇಷ ದಾಖಲೆಯನ್ನು ಪರಿಗಣಿಸುವ ಮೊದಲು ಈ ವಿಷಯದಲ್ಲಿ ತನ್ನ ಲಿಖಿತ ಪ್ರತಿಕ್ರಿಯೆಯನ್ನು ಮೊದಲು ಸಲ್ಲಿಸುವಂತೆ ಕೇಂದ್ರವನ್ನು ಕೇಳಿದ್ದಾರೆ.

“ಅಫಿಡವಿಟ್ ಸಲ್ಲಿಸಿ. ಸೀಲ್ ಮಾಡಿದ ಕವರ್‌ನಲ್ಲಿ ಸಲ್ಲಿಕೆ ಮಾಡಲಾದ ಯಾವುದನ್ನಾದರೂ ನಾವು ಸ್ವತಂತ್ರವಾಗಿ ಪರಿಶೀಲಿಸುವುದು ಅರ್ಜಿದಾರರಿಗೆ ಅನ್ಯಾಯವಾಗುತ್ತದೆ. ಅದು ಏನೆಂದು ಅವರಿಗೆ ತಿಳಿಯುವುದಿಲ್ಲ. ಆ ಅಫಿಡವಿಟ್ ನಮಗೆ ಸವಲತ್ತು ಹೊಂದಿರುವ ಕೆಲವು ದಾಖಲೆಗಳನ್ನು ನೋಡಲು ಅಡಿಪಾಯವನ್ನು ಹಾಕುವುದಾದರೆ ನಂತರ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದ ನ್ಯಾಯಾಧೀಶರು ಪ್ರತಿಕ್ರಿಯೆಯನ್ನು ಸಲ್ಲಿಸಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದರು.

ವಿಮಾನ ನಿಲ್ದಾಣದಿಂದ “ಬಲವಂತ” ಗಡೀಪಾರು ಮತ್ತು ಮಾನ್ಯ ವೀಸಾದ ಹೊರತಾಗಿಯೂ ಪ್ರವೇಶವನ್ನು ನಿರಾಕರಿಸುವ ಹಿಂದಿನ ಕಾರಣಗಳು ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳು ಉತ್ತರಿಸಿಲ್ಲ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಅಧಿಕಾರಿಗಳ ನಡವಳಿಕೆಯು ತರವಲ್ಲದ್ದು. ಇದು ಅನ್ಯಾಯ ಮತ್ತು ನಿರಂಕುಶ. ಭಾರತದ ಸಂವಿಧಾನ, ಅಂತರಾಷ್ಟ್ರೀಯ ಕಾನೂನು ಮತ್ತು ಮೂಲಭೂತ ಮಾನವ ಹಕ್ಕುಗಳು ಮತ್ತು ಘನತೆಗೆ ಅತಿರೇಕವಾಗಿದೆ ಎಂದು ಅವರು ಹೇಳಿದ್ದಾರೆ.

ದುಬೈನಿಂದ ಸುಮಾರು ಇಪ್ಪತ್ತು ಗಂಟೆಗಳ ಪ್ರಯಾಣದ ನಂತರ  ಮುಂಜಾನೆ 3.05ಕ್ಕೆ ತಿರುವನಂತಪುರಕ್ಕೆ ಬಂದಿಳಿದಾಗ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ಬಲವಂತವಾಗಿ ಗಡೀಪಾರು ಮಾಡಲಾಯಿತು ಎಂದು ಅರ್ಜಿದಾರರು ಹೇಳಿದ್ದಾರೆ.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ಈ ನಿರಂಕುಶ ನಡವಳಿಕೆಯಲ್ಲಿ ಕಾರಣಗಳು ಗೊಂದಲ ಹುಟ್ಟಿಸಿವೆ. ಮುಂಜಾನೆ 4:30 ರ ಹೊತ್ತಿಗೆ ಅವರನ್ನು ಅಕ್ಷರಶಃ ಹಿಂದಕ್ಕೆ ಕರೆದೊಯ್ದು ಕಠೋರ ಅಪರಾಧಿಯಂತೆ ಅವರನ್ನು ಅನ್ಯಾಯವಾಗಿ ಗಡೀಪಾರು ಮಾಡಲಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿದಾರರು ತಮ್ಮ ಲಗೇಜ್‌ನಿಂದ ರಕ್ತದೊತ್ತಡದ ಔಷಧಿಗಳಿಗಾಗಿ ಸಲ್ಲಿಸಿದ ಮನವಿಯನ್ನೂ ಕಡೆಗಣಿಸಲಾಯಿತು ಎಂದು ಮನವಿಯನ್ನು ಸೇರಿಸಲಾಗಿದೆ. ಈ ಘಟನೆಯನ್ನು  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಮತ್ತು ವ್ಯಾಪಕ ಟೀಕೆ ಆಗಿದ್ದು ಶೈಕ್ಷಣಿಕ ಸಮುದಾಯದಿಂದಲೂ ಹಿನ್ನಡೆ ಅನುಭವಿಸಬೇಕಾಯಿತು. ಅರ್ಜಿದಾರರು ಭಾರತಕ್ಕೆ ಮಾನ್ಯವಾದ ಮಲ್ಟಿಪಲ್ ಎಂಟ್ರಿ 12-ತಿಂಗಳ ಸಂಶೋಧನಾ ವೀಸಾವನ್ನು ಹೊಂದಿದ್ದರು. ಕಳಂಕವಿಲ್ಲದ ಪ್ರಯಾಣದ ದಾಖಲೆಯನ್ನು ಹೊಂದಿದ್ದಾರೆ ಮತ್ತು ಗಡೀಪಾರು ಮಾಡಲು ಕಾನೂನುಬದ್ಧವಾಗಿ ಮಾನ್ಯವಾದ ಯಾವುದೇ ಕಾರಣಗಳು ಅವರ ಮೇಲೆ ಇಲ್ಲ ಎಂದು ಮನವಿಯಲ್ಲಿ ಹೇಳಿದೆ.

ಅರ್ಜಿದಾರರು ಶೈಕ್ಷಣಿಕ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಬಲವಾಗಿ ನಂಬುತ್ತಾರೆ, ಆದ್ದರಿಂದ ಅರ್ಜಿದಾರರು ಪ್ರತಿ ಬಾರಿ ಭಾರತಕ್ಕೆ ಸಂಶೋಧನಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅವರು ಪಾಕಿಸ್ತಾನಕ್ಕೆ ಅಥವಾ ದಕ್ಷಿಣ ಏಷ್ಯಾದ ಬೇರೆಡೆಗೆ ತಮ್ಮ ಭೇಟಿಗಳನ್ನು ಘೋಷಿಸಿದ್ದರು.

ಅರ್ಜಿದಾರರು ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ಅನೇಕ ದೇಶಗಳಿಗೆ ಭೇಟಿ ನೀಡಿದ್ದರೂ ಅವರಿಗೆ ಯಾವಾಗಲೂ ಭಾರತಕ್ಕೆ ಸೂಕ್ತವಾದ ವೀಸಾಗಳನ್ನು ನೀಡಲಾಗಿದೆ ಎಂಬುದನ್ನು ಗಮನಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ.