ನ. 5ರೊಳಗೆ ಚಕ್ರಬಡ್ಡಿ ಹಣ ಸಾಲಗಾರರ ಬ್ಯಾಂಕ್ ಖಾತೆಗೆ ಹಿಂತಿರುಗಿಸಿ – ಕೇಂದ್ರದ ಆದೇಶ

|

Updated on: Oct 27, 2020 | 5:27 PM

ದೆಹಲಿ: ನವೆಂಬರ್​ 5ರೊಳಗೆ ಚಕ್ರಬಡ್ಡಿ ಹಣವನ್ನು ಸಾಲಗಾರರ ಬ್ಯಾಂಕ್ ಖಾತೆಗೆ ಜಮೆಮಾಡಿ. ಮೊರಾಟೋರಿಯಂ ಅವಧಿಯ ಸಾಲದ ಮೇಲಿನ ಚಕ್ರಬಡ್ಡಿ ಹಿಂತಿರುಗಿಸಿ ಎಂದು ದೇಶದ ಎಲ್ಲಾ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಚಕ್ರಬಡ್ಡಿ ಮೊತ್ತವನ್ನು ಬ್ಯಾಂಕ್​ಗಳು ಕೇಂದ್ರದಿಂದ ಪಡೆಯಬೇಕು. ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲ, ಕ್ರೆಡಿಟ್​ ಕಾರ್ಡ್​ ಸೇರಿದಂತೆ ಎಲ್ಲಾ ಸಾಲಗಳ ಮೇಲಿನ ಚಕ್ರಬಡ್ಡಿಗೂ ಈ ನಿರ್ದೇಶನ ಅನ್ವಯವಾಗಲಿದೆ. ಹಾಗಾಗಿ, ಈಗಾಗಲೇ ಚಕ್ರಬಡ್ಡಿ ಮೊತ್ತವನ್ನು ಲೆಕ್ಕ […]

ನ. 5ರೊಳಗೆ ಚಕ್ರಬಡ್ಡಿ ಹಣ ಸಾಲಗಾರರ ಬ್ಯಾಂಕ್ ಖಾತೆಗೆ ಹಿಂತಿರುಗಿಸಿ - ಕೇಂದ್ರದ ಆದೇಶ
ಶೇ 16,000ದಷ್ಟು ಏರಿಕೆ
Follow us on

ದೆಹಲಿ: ನವೆಂಬರ್​ 5ರೊಳಗೆ ಚಕ್ರಬಡ್ಡಿ ಹಣವನ್ನು ಸಾಲಗಾರರ ಬ್ಯಾಂಕ್ ಖಾತೆಗೆ ಜಮೆಮಾಡಿ. ಮೊರಾಟೋರಿಯಂ ಅವಧಿಯ ಸಾಲದ ಮೇಲಿನ ಚಕ್ರಬಡ್ಡಿ ಹಿಂತಿರುಗಿಸಿ ಎಂದು ದೇಶದ ಎಲ್ಲಾ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಚಕ್ರಬಡ್ಡಿ ಮೊತ್ತವನ್ನು ಬ್ಯಾಂಕ್​ಗಳು ಕೇಂದ್ರದಿಂದ ಪಡೆಯಬೇಕು. ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲ, ಕ್ರೆಡಿಟ್​ ಕಾರ್ಡ್​ ಸೇರಿದಂತೆ ಎಲ್ಲಾ ಸಾಲಗಳ ಮೇಲಿನ ಚಕ್ರಬಡ್ಡಿಗೂ ಈ ನಿರ್ದೇಶನ ಅನ್ವಯವಾಗಲಿದೆ.

ಹಾಗಾಗಿ, ಈಗಾಗಲೇ ಚಕ್ರಬಡ್ಡಿ ಮೊತ್ತವನ್ನು ಲೆಕ್ಕ ಹಾಕುವಲ್ಲಿ ಬ್ಯಾಂಕ್​ಗಳು ಬ್ಯುಸಿಯಾಗಿದೆ. ಮಾರ್ಚ್​ರಿಂದ -ಆಗಸ್ಟ್​ವರೆಗೆ 6 ತಿಂಗಳು ಸಾಲದ ಕಂತು ಮರುಪಾವತಿಯನ್ನು ಮುಂದೂಡಲಾಗಿತ್ತು. ಮುಂದೂಡಿಕೆ ಅವಧಿಯಲ್ಲಿ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕೇಂದ್ರದಿಂದ ತೀರ್ಮಾನ ಕೈಗೊಳ್ಳಲಾಗಿತ್ತು.