ಡಿಜಿಟಲ್, ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಇರಬೇಕು ಎಂದ ಸಚಿವ ಪ್ರಕಾಶ್​ ಜಾವಡೇಕರ್​

OTT Platform Guidelines : ಒಟಿಟಿಗೆ ಸೆನ್ಸಾರ್​ ಬೋರ್ಡ್​ ಇಲ್ಲ. ಅವರು ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ವಿಂಗಡಿಸಬೇಕು. ಪೇರಂಟಲ್ ಲಾಕ್​ ವ್ಯವಸ್ಥೆ ಕಡ್ಡಾಯ. 13+, 18+, ಎ ವಿಂಗಡಣೆ ಇರಬೇಕು. ಸೆನ್ಸಾರ್​ ಮಂಡಳಿಯ ಸೂಚನೆಗಳು ಒಟಿಟಗೂ ಅನ್ವಯಿಸುತ್ತವೆ.

ಡಿಜಿಟಲ್, ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಇರಬೇಕು ಎಂದ ಸಚಿವ ಪ್ರಕಾಶ್​ ಜಾವಡೇಕರ್​
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

Updated on: Feb 25, 2021 | 2:39 PM

ದೆಹಲಿ: ಒಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಸರ್ಕಾರ ಗುರುವಾರ (ಫೆ.25) ಮಾರ್ಗದರ್ಶಿ ಸೂತ್ರ ( OTT guidelines) ಗಳನ್ನು ಪ್ರಕಟಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್​ ಜಾವಡೇಕರ್​ ನಿಯಂತ್ರಣ ಕ್ರಮಗಳ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಮಾಧ್ಯಮಗಳ ಸ್ವಾತಂತ್ರ್ಯ, ಕಲಾವಿದರ ಸೃಜನಶೀಲತೆಗೆ ಕಡಿವಾಣ ಹಾಕುವ ಉದ್ದೇಶ ನಮಗಿಲ್ಲ. ಆದರೆ ಜವಾಬ್ದಾರಿಯೊಂದಿಗೆ ಎಲ್ಲರೂ ಸ್ವಾತಂತ್ರ್ಯ ಬಳಸಿಕೊಳ್ಳುವುದು ಎಲ್ಲ ಜವಾಬ್ದಾರಿ ಎಂದು ಹೇಳಿದರು. ಒಟಿಟಿ ವೇದಿಕೆಗಳನ್ನು ನ್ಯಾಯದಾನ ಪ್ರಕ್ರಿಯೆಯ ವ್ಯಾಪ್ತಿಯೊಳಗೆ ತರುವುದು ನಮ್ಮ ಉದ್ದೇಶ. ಮಾಧ್ಯಮ ಯಾವುದೇ ಇದ್ದರೂ ಅದಕ್ಕೆ ಮಾರ್ಗದರ್ಶಿ ಸೂತ್ರಗಳು ಇರಬೇಕು. ಸಂಸತ್ತಿನಲ್ಲಿಯೂ ಒಟಿಟಿ ವೇದಿಕೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಎರಡು ಬಾರಿ ನೀವು ಸ್ವಯಂ ನಿಯಂತ್ರಣಾ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದೆ. ಅವರು ಸ್ಪಂದಿಸಲಿಲ್ಲ. ಹೀಗಾಗಿ ನಾವು ಎಲ್ಲ ಮಾಧ್ಯಮಗಳಿಗೂ ಸಾಂಸ್ಥಿಕ ನಿಯಂತ್ರಣ ವ್ಯವಸ್ಥೆ ಬೇಕು ಅಂತ ಹೇಳಿದವು. ಎಲ್ಲ ಸ್ವಾತಂತ್ರ್ಯವೂ ಜವಾಬ್ದಾರಿಯೊಂದಿಗೆ ಬರುತ್ತದೆ. ಮೂರು ಹಂತದ ನಿಯಂತ್ರಣ ವ್ಯವಸ್ಥೆ ಬೇಕು. ಒಟಿಟಿ ಮತ್ತು ಡಿಜಿಟಲ್ ಮೀಡಿಯಾಗಳು ತಮ್ಮ ಬಗೆಗಿನ ಮಾಹಿತಿ ಘೋಷಿಸಿಕೊಳ್ಳಬೇಕು. ಇದು ನೋಂದಣಿ ಬೇಕಿಲ್ಲ. ಆದರೆ ಮಾಹಿತಿ ಹೇಳೂವುದು ಅನಿವಾರ್ಯ. ದೂರು ಪರಿಹಾರ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್​ ಅಥವಾ ಹೈಕೋರ್ಟ್​ ನ್ಯಾಯಾಧೀಶರು ಇದನ್ನು ರೂಪಿಸಬೇಕು. ದೂರು ವಿಲೇವಾರಿ

ಒಟಿಟಿಗೆ ಸೆನ್ಸಾರ್​ ಬೋರ್ಡ್​ ಇಲ್ಲ. ಅವರು ವಯಸ್ಸಿಗೆ ಅನುಗುಣವಾಗಿ ಕಂಟೆಂಟ್ ವಿಂಗಡಿಸಬೇಕು. ಪೇರಂಟಲ್ ಲಾಕ್​ ವ್ಯವಸ್ಥೆ ಕಡ್ಡಾಯ. 13+, 18+, ಎ ವಿಂಗಡಣೆ ಇರಬೇಕು. ಸೆನ್ಸಾರ್​ ಮಂಡಳಿಯ ಸೂಚನೆಗಳು ಒಟಿಟಗೂ ಅನ್ವಯಿಸುತ್ತವೆ. ಡಿಜಿಟಲ್ ಮೀಡಿಯಾಗಳು ತಪ್ಪು ಸುದ್ದಿ, ಸುಳ್ಳು ಹರಡಲು ಅಧಿಕಾರವಿಲ್ಲ. ಮಾಧ್ಯಮಗಳ ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಇರುತ್ತದೆ. ಇವರೆಡೂ ಕಾನೂನುಗಳ ಜೊತೆಗೆ ಬರುತ್ತದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ಪರೋಕ್ಷ ಪ್ರಚಾರದ ಪೋಸ್ಟ್ ಹಾಕುವ ಪ್ರಭಾವಶಾಲಿಗಳಿಗಾಗಿ ಹೊಸ ಮಾರ್ಗಸೂಚಿ..