ನವದೆಹಲಿ: ಭಾರತ ಮತ್ತು ಚೀನಾ ನಡುವೆ ಸಂಘರ್ಷ ಆರಂಭವಾದ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾದ ಅತಿಕ್ರಮಣವನ್ನು ಒಪ್ಪಿಕೊಂಡಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಮೇ 5 ರಿಂದ ಗಲ್ವಾನ್ ಕಣಿವೆಯಲ್ಲಿ ಚೀನಾ ಅತಿಕ್ರಮಣ ಮಾಡಿದೆ. ಕುಗ್ರಾಗ್ ನಾಲಾ, ಗೋಗ್ರಾ, ಪಾಂಗೋಗೋ ಸರೋವರದ ಬಳಿಯೂ ಚೀನಾ ಅತಿಕ್ರಮಣ ಮಾಡಿದೆ. ಮೇ 17-18 ರಂದು ಚೀನಾ ಸೇನೆಯಿಂದ ಈ ಅತಿಕ್ರಮಣವಾಗಿದೆ. ಈಗಿನ ಗಡಿ ಬಿಕ್ಕಟ್ಟು ಸುದೀರ್ಘ ಕಾಲದವರೆಗೆ ಮುಂದುವರಿಯಲಿದೆ. ಪೂರ್ವ ಲಡಾಖ್‌ನಲ್ಲಿ ಚೀನಾದ ಅತಿಕ್ರಮಣ ಸೂಕ್ಷ್ಮ ವಿಷಯವಾಗಿದ್ದು, ಹತ್ತಿರದಿಂದ ನಿಗಾ ವಹಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಇಂದಿನ ಕೇಂದ್ರ ಸರ್ಕಾರದ ಈ ಹೇಳಿಕೆ ಪ್ರತಿಪಕ್ಷಗಳು ಇದುವರೆಗೆ ಮಾಡುತ್ತಿದ್ದ ಚೀನಾ ಭಾರತದ ನೆಲವನ್ನು ಅತಿಕ್ರಮಿಸಿದೆ ಎಂಬ ಆರೋಪವನ್ನು ನಿಜ ಎಂದು ಸಾಬಿತುಪಡಿಸಿದೆ. ಆದ್ರೆ ಇದುವರೆಗೆ ಯಾಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ನಿರಾಕರಿಸುತ್ತಿತ್ತು ಎನ್ನುವುದು ಈಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.