ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಿ ದೇವಸ್ಥಾನ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಅಸ್ಸಾಂನ ಬಿಜೆಪಿ ಶಾಸಕ
ತಾಜ್ ಮಹಲ್ ಮತ್ತು ಕುತುಬ್ ಮಿನಾರ್ನ್ನು ಕೆಡವಲು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಅಲ್ಲಿ ವಿಶ್ವದ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಬಹುದು ಎಂದು ಕುರ್ಮಿ ಹೇಳಿದ್ದಾರೆ
ಗುವಾಹಟಿ: ಪಠ್ಯ ಪುಸ್ತಕದಿಂದ ಮೊಘಲ್ ಇತಿಹಾಸವನ್ನು(Mughal history) ತೆಗೆದುಹಾಕುವ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ (Qutub Minar) ಅನ್ನು ಕೆಡವಬೇಕು ಎಂದು ಮರಿಯಾನಿ ಕ್ಷೇತ್ರದ ಬಿಜೆಪಿ ಶಾಸಕ ರೂಪ್ಜ್ಯೋತಿ ಕುರ್ಮಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ತಾಜ್ ಮಹಲ್ (Taj Mahal) ಇರುವ ಜಾಗದಲ್ಲಿ ದೇವಾಲಯ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ. ಮೊಘಲರು 1500 ರ ದಶಕದಲ್ಲಿ ಭಾರತಕ್ಕೆ ಬಂದ ಆಕ್ರಮಣಕಾರರು. ಅವರ ಬಗ್ಗೆ ವಿದ್ಯಾರ್ಥಿಗಳು ಅವರ ಬಗ್ಗೆ ಅಧ್ಯಯನ ಮಾಡಬಾರದು. ವಿದ್ಯಾರ್ಥಿಗಳು ಇತರ ಭಾರತೀಯ ರಾಜರ ಬಗ್ಗೆ ಕಲಿಯಬೇಕು ಎಂದು ರೂಪ್ಜ್ಯೋತಿ ಕುರ್ಮಿ ಹೇಳಿದ್ದಾರೆ.
ಮೊಘಲ್ ಇತಿಹಾಸವನ್ನು ಬಹಳ ಹಿಂದೆಯೇ ತೆಗೆದುಹಾಕಬೇಕಾಗಿತ್ತು. ಈಗ ಪುಸ್ತಕಗಳಿಂದ ಪ್ರಸ್ತುತ ವಿಷಯವನ್ನು ತೆಗೆದುಹಾಕಿದ್ದಕ್ಕಾಗಿ ನಾನು ಕೇಂದ್ರ ಸರ್ಕಾರವನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Assam Bharatiya Janta Party (BJP) MLA Rupjyoti Kurmi urges Prime Minister Narendra Modi to demolish the #TajMahal, Qutub Minar, and build temples instead. pic.twitter.com/w1LM2AlEci
— Inaya Saba (@InayaSaba) April 5, 2023
ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ನ್ನು ಕೆಡವಲು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಅಲ್ಲಿ ವಿಶ್ವದ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಬಹುದು ಎಂದು ಕುರ್ಮಿ ಹೇಳಿದ್ದಾರೆ.
ಇದನ್ನೂ ಓದಿ: 12ನೇ ತರಗತಿಯ ಪಠ್ಯ ಪುಸ್ತಕಗಳಿಂದ ಗಾಂಧಿ ಕುರಿತ ವಿಷಯ, ಆರ್‌ಎಸ್‌ಎಸ್ ಮೇಲಿನ ನಿಷೇಧ ವಿಚಾರ ಕೈಬಿಟ್ಟ ಎನ್‌ಸಿಇಆರ್‌ಟಿ
ದೇವಸ್ಥಾನವು ಯುನಿಸೆಫ್ ಮಾತ್ರವಲ್ಲದೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗುರುತಿಸಲ್ಪಡುವಂತಿರಬೇಕು. ದೇವಾಲಯವನ್ನು ನಿರ್ಮಿಸಲು ನಾನು ಒಂದು ವರ್ಷದ ಸಂಬಳವನ್ನು ನೀಡುತ್ತೇನೆ ಎಂದಿದ್ದಾರೆ ಕುರ್ಮಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ