Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಶೋಯೆಬ್ ಜಮೈ ಮೇಲೆ ಹಲ್ಲೆ ಮಾಡಿ ಹೊರದೂಡಿದ ಸಹ ಪ್ಯಾನೆಲಿಸ್ಟ್: ವಿಡಿಯೊ ವೈರಲ್

ಜುಲೈ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಸಂಜಯ್ ಪುರಣ್ ಸಿಂಗ್ ನಿರ್ದೇಶನದ '72 ಹೂರೇ ' ಚಲನಚಿತ್ರದ ಕುರಿತು ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆದಿತ್ತು. ಸುದೀರ್ಘ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಶೋಯೆಬ್ ಜಮೈ ಈ ಘಟನೆಯನ್ನು ವಿವರಿಸಿದ್ದಾರೆ.

ಟಿವಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಶೋಯೆಬ್ ಜಮೈ ಮೇಲೆ ಹಲ್ಲೆ ಮಾಡಿ ಹೊರದೂಡಿದ ಸಹ ಪ್ಯಾನೆಲಿಸ್ಟ್: ವಿಡಿಯೊ ವೈರಲ್
ಶೋಯೆಬ್ ಜಮೈ
Follow us
ರಶ್ಮಿ ಕಲ್ಲಕಟ್ಟ
|

Updated on: Jun 12, 2023 | 2:06 PM

ಟಿವಿ ವಾಹಿನಿಯ ಚರ್ಚೆಯ ಪ್ಯಾನೆಲಿಸ್ಟ್ ಆಗಿ ಭಾಗವಹಿಸಿದ್ದ ಇಂಡಿಯಾ ಮುಸ್ಲಿಂ ಫೌಂಡೇಶನ್ (India Muslim Foundation) ಮುಖ್ಯಸ್ಥ, ಜಾಮಿಯಾ ವಿದ್ಯಾರ್ಥಿ ಶೋಯೆಬ್ ಜಮೈ(Shoaib Jamai) ಮೇಲೆ ಹಲ್ಲೆ ನಡೆಸಿ, ಅವರನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ಹೇಳಲಾದ ವಿಡಿಯೊ ವೈರಲ್ ಆಗಿದೆ. ಈ ವೈರಲ್ ವಿಡಿಯೊವನ್ನು ಹಂಚಿಕೊಂಡ ಶಿವಸೇನಾ ಸಂಸದೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪ್ರಿಯಾಂಕಾ ಚತುರ್ವೇದಿ (Priyanka Chaturvedi ), ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಿಂತ ಭಾರತೀಯ ಸುದ್ದಿ ವಾಹಿನಿಗಳು ಉತ್ತಮ ಮನರಂಜನೆ ನೀಡುತ್ತವೆ ಎಂದು ಬರೆದಿದ್ದಾರೆ.

ಶೋಯೆಬ್ ಜಮೈ ಪ್ಯಾನೆಲಿಸ್ಟ್ ಆಗಿರುವ ಯಾವುದೇ ಸುದ್ದಿ ವಾಹಿನಿ ಚರ್ಚೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಹೇಳಿದ್ದಾರೆ. “ಈಗ ಸ್ವಲ್ಪ ಸಮಯದಿಂದ ಈ ವ್ಯಕ್ತಿ ಸಭ್ಯತೆಯ ಎಲ್ಲ ಮಿತಿಗಳನ್ನು ದಾಟುತ್ತಿದ್ದಾನೆ. ಆದರೆ ಯಾವ ಟಿವಿ ಚಾನೆಲ್ ಅವರನ್ನು ಕರೆಯುತ್ತದೆಯೋ ಅದನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವರು ಭಾಗವಹಿಸುವ ಟಿವಿ ಚರ್ಚೆಯಲ್ಲಿ ನಾನು ಭಾಗವಹಿಸುವುಜಿಲ್ಲ ಎಂದು ಎಂದು ಪೂನಾವಾಲಾ ಹೇಳಿದ್ದಾರೆ.

ವೈರಲ್ ವಿಡಿಯೊದಲ್ಲಿ ಸಹ-ಪ್ಯಾನೆಲಿಸ್ಟ್ ಸುಬುಹಿ ಖಾನ್ ಮತ್ತು ಶೋಯೆಬ್​​ ಮೈ ಮುಟ್ಟಿ ಜಗಳವಾಡುತ್ತಿರುವುದನ್ನು ಕಾಣಬಹುದು. ನಂತರ ಶೋಯೆಬ್ ಜಮೈಯನ್ನು ಕಾರ್ಯಕ್ರಮದಿಂದ ಹೊರಹೋಗುವಂತೆ ಕೇಳಲಾಯಿತು.

ಜುಲೈ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಸಂಜಯ್ ಪುರಣ್ ಸಿಂಗ್ ನಿರ್ದೇಶನದ ’72 ಹೂರೇ ‘ ಚಲನಚಿತ್ರದ ಕುರಿತು ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆದಿತ್ತು. ಸುದೀರ್ಘ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಶೋಯೆಬ್ ಜಮೈ ಈ ಘಟನೆಯನ್ನು ವಿವರಿಸಿದ್ದಾರೆ. ಇದು ದುರದೃಷ್ಟಕರ. ನಾನು ಸಹ -ಪ್ಯಾನಲಿಸ್ಟ್​​ನಿಂದ ನಿಂದನೆಗೊಳಗಾದೆ. ಆದರೆ ನಾನು ಈ ವಿಷಯವನ್ನು ಬೇರೆ ರೀತಿಯಲ್ಲಿ ದೊಡ್ಡದು ಮಾಡಲು ಹೋಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: G20 Meeting: ಡಿಜಿಟಲೀಕರಣವು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ: ನರೇಂದ್ರ ಮೋದಿ

ಇಂಡಿಯಾ ಮುಸ್ಲಿಂ ಫೌಂಡೇಶನ್‌ನ ಅಧ್ಯಕ್ಷ ಶೋಯೆಬ್ ಜಮೈ ಆಗಾಗ ಪ್ರಚೋದನಾಕಾರಿ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಬಾಂಗ್ಲಾದೇಶದಿಂದ 25 ಕೋಟಿ, ಪಾಕಿಸ್ತಾನದಿಂದ 25 ಕೋಟಿ ಮತ್ತು ಭಾರತಕ್ಕಾಗಿ 25 ಕೋಟಿ ಮುಸ್ಲಿಮರು ಒಂದಾದರೆ ಭಾರತವು ಅಖಂಡ ಭಾರತವಾಗಿ ಬದಲಾಗುತ್ತದೆ ಎಂದು ಅವರು ಹೇಳಿದ್ದರು. ಹಿಂದೂಗಳ ವಿರುದ್ಧ ಯಾವುದೇ ದ್ವೇಷದ ಭಾಷಣದ ಉದ್ದೇಶ ನನಗೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ