ಚಂಡೀಗಢದ ಎರಡು ನೈಟ್​ಕ್ಲಬ್​ಗಳ ಬಳಿ ಅವಳಿ ಸ್ಫೋಟ

ಚಂಡೀಗಢದ ಎರಡು ನೈಟ್​ಕ್ಲಬ್​ಗಳ ಬಳಿ ಅವಳಿ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಸ್ಫೋಟದಿಂದಾಗಿ ಹಲವಾರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಕಚ್ಚಾ ಬಾಂಬ್‌ಗಳಿಂದ ಸ್ಫೋಟಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ, ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೈಟ್‌ಕ್ಲಬ್‌ಗಳ ಮೇಲೆ ಕಡಿಮೆ ತೀವ್ರತೆಯ ಬಾಂಬ್ ಎಸೆದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.

ಚಂಡೀಗಢದ ಎರಡು ನೈಟ್​ಕ್ಲಬ್​ಗಳ ಬಳಿ ಅವಳಿ ಸ್ಫೋಟ
ಸ್ಫೋಟ
Image Credit source: India TV

Updated on: Nov 26, 2024 | 10:09 AM

ಚಂಡೀಗಢದ ಎರಡು ನೈಟ್​ಕ್ಲಬ್​ಗಳ ಬಳಿ ಅವಳಿ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಸ್ಫೋಟದಿಂದಾಗಿ ಹಲವಾರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಕಚ್ಚಾ ಬಾಂಬ್‌ಗಳಿಂದ ಸ್ಫೋಟಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ, ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನೈಟ್‌ಕ್ಲಬ್‌ಗಳ ಮೇಲೆ ಕಡಿಮೆ ತೀವ್ರತೆಯ ಬಾಂಬ್ ಎಸೆದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.

ಚಂಡೀಗಢ ಪೊಲೀಸರ ವಿಧಿವಿಜ್ಞಾನ ತಂಡಗಳು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿವೆ. ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇದು ಬಾಂಬ್ ಅಥವಾ ಇನ್ನಾವುದೇ ಸ್ಫೋಟಕ ವಸ್ತುವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಧಿವಿಜ್ಞಾನ ತಜ್ಞರು ಮತ್ತು ಇತರ ತನಿಖಾ ಸಂಸ್ಥೆಗಳು ಸೇರಿದಂತೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎಲ್ಲಾ ಕಡೆಯಿಂದ ಈ ಸಂಪೂರ್ಣ ಪ್ರದೇಶವನ್ನು ಸುತ್ತುವರೆದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಲಾಗಿತ್ತು
ಸೆಪ್ಟೆಂಬರ್ 11 ರಂದು ಆಟೋದಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಚಂಡೀಗಢದ ಸೆಕ್ಟರ್ -10 ರ ಕೋಠಿ ನಂ. 575 ರ ಮೇಲೆ ಹ್ಯಾಂಡ್ ಗ್ರೆನೇಡ್ ಬಾಂಬ್‌ನಿಂದ ದಾಳಿ ನಡೆಸಿದ್ದರು. ಆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಆದರೆ ಮನೆಯ ಎಲ್ಲಾ ಗಾಜಿನ ಕಿಟಕಿಗಳು ಒಡೆದು ಹೋಗಿವೆ.

ಮತ್ತಷ್ಟು ಓದಿ: ಕೊಲ್ಕತ್ತಾದಲ್ಲಿ ಹಾಡಹಗಲೇ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ

72 ಗಂಟೆಗಳಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು
ಈ ಪ್ರಕರಣದಲ್ಲಿ ವಿದೇಶದಲ್ಲಿ ನೆಲೆಸಿರುವ ಹ್ಯಾಪಿ ಪಾಶಿಯಾ ಎಂಬಾತನ ಹೆಸರು ಬೆಳಕಿಗೆ ಬಂದಿದ್ದು, ಪಂಜಾಬ್ ಪೊಲೀಸ್‌ನಲ್ಲಿ ಎಸ್‌ಪಿ ಹುದ್ದೆಯಿಂದ ನಿವೃತ್ತರಾದ ಜಸ್ಕಿರತ್ ಸಿಂಗ್ ಚಾಹಲ್‌ನನ್ನು ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದೆ.ಪಂಜಾಬ್ ಪೊಲೀಸರ ವಿಶೇಷ ತಂಡಗಳು ಇಬ್ಬರು ಬಾಂಬ್ ಎಸೆದ ಆರೋಪಿಗಳಾದ ರೋಹನ್ ಮಸಿಹ್ ಮತ್ತು ವಿಶಾಲ್ ಮಸಿಹ್ ಅವರನ್ನು ಅಮೃತಸರ ಮತ್ತು ದೆಹಲಿಯಿಂದ ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ