Fact Check: ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಔರಂಗಜೇಬನ ಪೋಸ್ಟರ್‌?: ವೈರಲ್ ವಿಡಿಯೋದ ಸತ್ಯ ಏನು?

ವೀಡಿಯೊದಲ್ಲಿ, ಕೆಲವರು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ನಿಂತಿದ್ದಾರೆ. ಈ ಜನರು ತಮ್ಮ ಕೈಯಲ್ಲಿ ಪೋಸ್ಟರ್ ಮತ್ತು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೆಲವರು ಔರಂಗಜೇಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುವುದನ್ನು ಸಹ ಕೇಳಬಹುದು.

Fact Check: ಧೀರೇಂದ್ರ ಶಾಸ್ತ್ರಿ ಪಾದಯಾತ್ರೆಯಲ್ಲಿ ಔರಂಗಜೇಬನ ಪೋಸ್ಟರ್‌?: ವೈರಲ್ ವಿಡಿಯೋದ ಸತ್ಯ ಏನು?
ವೈರಲ್​​ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2024 | 10:55 AM

ಬಾಗೇಶ್ವರ ಧಾಮದ ಪೀಠಾಧೀಶ್ವರರಾದ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರು ಒಂಬತ್ತು ದಿನಗಳ ಹಿಂದೂ ಏಕತಾ ಪಾದಯಾತ್ರೆಯಲ್ಲಿದ್ದಾರೆ. ಏತನ್ಮಧ್ಯೆ, ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಯ ಸಮಯದಲ್ಲಿ ಕೆಲವರು ಔರಂಗಜೇಬ್ ಅವರ ಪೋಸ್ಟರ್‌ಗಳನ್ನು ತೋರಿಸಿದ್ದಾರೆ ಮತ್ತು ಔರಂಗಜೇಬ್ ಜಿಂದಾಬಾದ್ ಎಂದು ಘೋಷಣೆಗಳನ್ನು ಜನರು ಕೂಗಿದರು ಎಂದು ಹೇಳಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ, ಕೆಲವರು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ನಿಂತಿದ್ದಾರೆ. ಈ ಜನರು ತಮ್ಮ ಕೈಯಲ್ಲಿ ಪೋಸ್ಟರ್ ಮತ್ತು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೆಲವರು ಔರಂಗಜೇಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುವುದನ್ನು ಸಹ ಕೇಳಬಹುದು.

X ನಲ್ಲಿ ವಿಡಿಯೋವನ್ನು ಹಂಚಿಕೊಂಡ ಬಳಕೆದಾರರು ಹೀಗೆ ಬರೆದಿದ್ದಾರೆ, ‘‘ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಯ ಸಮಯದಲ್ಲಿ, ಮುಸ್ಲಿಮರು ಔರಂಗಜೇಬ್ ಅವರ ಫೋಟೋಗಳನ್ನು ತೋರಿಸಿದ್ದಾರೆ ಮತ್ತು ಘೋಷಣೆಗಳನ್ನು ಕೂಗಿದ್ದಾರೆ. ಔರಂಗಜೇಬ್ ನಿಮ್ಮ ತಂದೆ-ಔರಂಗಜೇಬ್ ನಿಮ್ಮ ತಂದೆ. ಹಿಂದೂಗಳು ಒಂದಾಗದಿದ್ದರೆ ಔರಂಗಜೇಬನ ಈ ಮಕ್ಕಳು ನಿಮಗೆ ಏನು ಮಾಡುತ್ತಾರೆ ಎಂದು ಊಹಿಸಿ. ಅವರು ನಿಮ್ಮ ಜಾತಿ ನೋಡಿ ಕತ್ತು ಕೊಯ್ಯುವುದಿಲ್ಲ’’ ಎಂದು ಬರೆಯಲಾಗಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಗೆ ಸಂಬಂಧಿಸಿಲ್ಲ. ಬದಲಾಗಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಗೆ ಸಂಬಂಧಿಸಿದ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನಾವು ಇದೇ ವಿಡಿಯೋವನ್ನು ಇನ್​ಸ್ಟಾಗ್ರಾಮ್ ಖಾತೆಯೊಂದರಲ್ಲಿ ಕಂಡುಕೊಂಡಿದ್ದೇವೆ. ಇದನ್ನು ನವೆಂಬರ್ 20 ರಂದು ಇಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ಇದನ್ನು ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಎಂದು ವಿವರಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಧೀರೇಂದ್ರ ಶಾಸ್ತ್ರಿಯವರ ಪಾದಯಾತ್ರೆಯು ನವೆಂಬರ್ 21 ರಿಂದ ಪ್ರಾರಂಭವಾಯಿತು. ಅಂದರೆ ಈ ವಿಡಿಯೋ ಪಾದಯಾತ್ರೆ ಪ್ರಾರಂಭಕ್ಕು ಮುನ್ನವೇ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಆಗಿದೆ.

ವೈರಲ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಕೆಲವು ಬಳಕೆದಾರರು ಇದು ಮಹಾರಾಷ್ಟ್ರದಿಂದ ಬಂದಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಕಂಡುಬರುವ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಮಹಾರಾಷ್ಟ್ರ ಕೋಡ್ ಕೂಡ ಗೋಚರಿಸುತ್ತದೆ. ಈ ವಾಹನಗಳಲ್ಲಿ ಒಂದರ ಮೇಲೆ MH-20 ಸಂಖ್ಯೆ ಬರೆಯಲಾಗಿದೆ. ಹುಡುಕಿದಾಗ ಇದು ಮಹಾರಾಷ್ಟ್ರದ ಔರಂಗಾಬಾದ್‌ನ ಕೋಡ್ ಎಂದು ಕಂಡುಬಂದಿದೆ.

ಅಲ್ಲದೆ ವೈರಲ್ ಆದ ವಿಡಿಯೋದಲ್ಲಿ ಧೀರೇಂದ್ರ ಶಾಸ್ತ್ರಿ ಎಲ್ಲಿಯೂ ಕಾಣಿಸುತ್ತಿಲ್ಲ. ವಿಡಿಯೋದಲ್ಲಿ, ಫ್ಲೈಓವರ್‌ನ ಒಂದು ಬದಿಯಲ್ಲಿ, ಕೆಲವರು ‘ಜಾವೇದ್ ಖುರೇಷಿಗೆ ಮತ ನೀಡಿ’ ಎಂಬ ಪೋಸ್ಟರ್‌ಗಳನ್ನು ಹಿಡಿದಿದ್ದಾರೆ ಮತ್ತು ಇನ್ನೊಂದು ಬದಿಯಲ್ಲಿ, ತೆರೆದ ಜೀಪಿನಲ್ಲಿ ಜನರು ಬಿಜೆಪಿ ಧ್ವಜಗಳನ್ನು ಮತ್ತು ಶಿವಸೇನೆಯ (ಶಿಂಧೆ ಬಣದ) ಚುನಾವಣಾ ಚಿಹ್ನೆಯನ್ನು ಹಿಡಿದಿರುವುದನ್ನು ಕಾಣಬಹುದು.

ಅಲ್ಲದೆ ಖಾಸಗಿ ವೆಬ್​ಸೈಟ್ ಒಂದು ಮಾಡಿರುವ ವರದಿಯ ಪ್ರಕಾರ ಈ ವಿಡಿಯೋ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಡೆದ ಚುನಾವಣಾ ರ್ಯಾಲಿಯದ್ದು ಎಂದು ಹೇಳಿದೆ. ಜೀಪ್‌ನಲ್ಲಿ, ಔರಂಗಾಬಾದ್ ಸೆಂಟ್ರಲ್ ಸೀಟ್‌ನ ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ಪ್ರದೀಪ್ ಶಿವನಾರಾಯಣ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಕ್ಷೇತ್ರದಿಂದ ವಿಬಿಎ ಅಭ್ಯರ್ಥಿ ಮೊಹಮ್ಮದ್ ಜಾವೇದ್ ಖುರೇಷಿ ಕೂಡ ಕಣದಲ್ಲಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ವಂದೇ ಭಾರತ್ ರೈಲು ಮೇಲೆ ಕಲ್ಲು ತೂರಾಟ ನಡೆಸಿದ್ದು ನಿಜಕ್ಕೂ ಮುಸ್ಲಿಮರೇ?

ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರದೀಪ್ ಶಿವನಾರಾಯಣ್ ಅವರು ಒಟ್ಟು 85459 ಮತಗಳನ್ನು ಪಡೆದು ಜಯಗಳಿಸಿರುವುದು ಗಮನಾರ್ಹ. ಆದರೆ ವಂಚಿತ್ ಬಹುಜನ್ ಅಘಾಡಿಯ ಮೊಹಮ್ಮದ್ ಜಾವೇದ್ ಖುರೇಷಿ 12639 ಮತಗಳನ್ನು ಪಡೆದರು.

ಈ ಮೂಲಕ ವೈರಲ್ ಆಗಿರುವ ವಿಡಿಯೋ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯದ್ದು ಎಂಬುದು ಸ್ಪಷ್ಟವಾಗಿದೆ. ಇದನ್ನು ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಗೆ ಲಿಂಕ್ ಮಾಡಿ ದಾರಿತಪ್ಪಿಸುವ ರೀತಿಯಲ್ಲಿ ಶೇರ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ