Chandrayaan 3: ಚಂದ್ರನ ಮೇಲ್ಮೈ ಹೇಗಿದೆ, ಇಸ್ರೋ ಹಂಚಿಕೊಂಡಿರುವ ಈ ವಿಡಿಯೋ ನೋಡಿ

|

Updated on: Aug 07, 2023 | 8:54 AM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 (Chandrayaan 3) ರ ಕ್ಯಾಮೆರಾದಲ್ಲಿ ಸೆರೆಹಿಡಿದ ಚಂದ್ರನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅದರ ಜತೆಗೆ ವಿಡಿಯೋವನ್ನು ಕೂಡ ಹಂಚಿಕೊಂಡಿದೆ. 

Chandrayaan 3: ಚಂದ್ರನ ಮೇಲ್ಮೈ ಹೇಗಿದೆ, ಇಸ್ರೋ ಹಂಚಿಕೊಂಡಿರುವ ಈ ವಿಡಿಯೋ ನೋಡಿ
ಚಂದ್ರಯಾನ 3
Image Credit source: ISRO
Follow us on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 (Chandrayaan 3) ರ ಕ್ಯಾಮೆರಾದಲ್ಲಿ ಸೆರೆಹಿಡಿದ ಚಂದ್ರನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅದರ ಜತೆಗೆ ವಿಡಿಯೋವನ್ನು ಕೂಡ ಹಂಚಿಕೊಂಡಿದೆ.  ಶನಿವಾರ (ಆಗಸ್ಟ್ 5) ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ನಂತರ ಚಂದ್ರಯಾನ-3 ಈ ನೋಟವನ್ನು ತೋರಿಸಿದೆ. ಚಂದ್ರನ ಮೇಲೆ ನೀಲಿ ಹಸಿರು ಬಣ್ಣದ ಹಲವು ಹೊಂಡಗಳಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ಮಿಷನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಸ್ಟ್ 5, 2023 ರಂದು ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-3 ನಿಂದ ಚಂದ್ರನನ್ನು ನೋಡಲಾಗಿದೆ ಎಂದು ಟ್ವೀಟ್ ಮಾಡಿದೆ.

ಇಸ್ರೋ ಚಂದ್ರನ ಮಿಷನ್ ಇಲ್ಲಿಯವರೆಗೆ ಉತ್ತಮವಾಗಿ ಸಾಗುತ್ತಿದೆ ಮತ್ತು ವಿಕ್ರಮ್ ಲ್ಯಾಂಡರ್ ಈ ತಿಂಗಳ ನಂತರ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುತ್ತದೆ ಎಂದು ಇಸ್ರೋ ಭರವಸೆ ನೀಡಿದೆ.

ಮತ್ತಷ್ಟು ಓದಿ: Chandrayaan-3: ಚಂದ್ರನ ಮೊದಲ ಚಿತ್ರಗಳನ್ನು ಸೆರೆಹಿಡಿದ ಚಂದ್ರಯಾನ-3

ಈ ಕುರಿತ ವಿಡಿಯೋವನ್ನು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಜೀತೇಂದ್ರ ಸಿಂಗ್ ಟ್ವೀಟ್ ಮಾಟಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಶನಿವಾರ ಸಂಜೆ ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಸೇತಿದೆ, ಹಾಗೆಯೇ ಚಂದ್ರಯಾನ-3 ಗಗನನೌಕೆಯನ್ನು ಸೇರಿಸುವ ಲೂನಾರ್ ಆರ್ಬಿಟ್ ಇನ್ಸೆರ್ಷನ್ ಪ್ರಕ್ರಿಯೆಯನ್ನು ಕೂಡ ಇಸ್ರೋ ಪೂರ್ಣಗೊಳಿಸಿದೆ. ಲ್ಯಾಂಡರ್ ಸದ್ಯ ಚಂದ್ರನ ಗುರುತ್ವಾಕರ್ಷಣೆ ಅನುಭವಿಸುತ್ತಿರುವುದಾಗಿ ಇಸ್ರೋ ತಿಳಿಸಿತ್ತು.

 

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಚಂದ್ರಯಾನ-3 ಅನ್ನು 22 ದಿನಗಳ ಹಿಂದೆ ಉಡಾವಣೆ ಮಾಡಲಾಗಿದೆ, ಭಾರತದ ಮೂರನೇ ಮಾನವರಹಿತ ಚಂದ್ರಯಾನ ಚಂದ್ರಯಾನ-3 ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.

ಜುಲೈ 14 ರಂದು ಉಡಾವಣೆಯಾದಾಗಿನಿಂದ, ಬಾಹ್ಯಾಕಾಶ ನೌಕೆಯು ಚಂದ್ರನ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ ಮತ್ತು ಮುಂದಿನ 17 ದಿನಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ನಿರ್ಣಾಯಕವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ