Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯ್​ಪುರ: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ತನ್ನನ್ನು ತಾನು ದೇವರೆಂದು ಕರೆದುಕೊಂಡ ವೃದ್ಧ

ರಾಜಸ್ಥಾನದ ಉದಯ್​ಪುರದಲ್ಲಿ ಬರ್ಬರ ಹತ್ಯೆಯೊಂದು ನಡೆದಿದೆ 60 ವರ್ಷದ ವೃದ್ಧರೊಬ್ಬರು 82 ವರ್ಷದ ವೃದ್ಧೆಯನ್ನು ಛತ್ರಿಯಲ್ಲಿ ಹೊಡೆದು ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿದೆ

ಉದಯ್​ಪುರ: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ತನ್ನನ್ನು ತಾನು ದೇವರೆಂದು ಕರೆದುಕೊಂಡ ವೃದ್ಧ
ವೃದ್ಧ
Follow us
ನಯನಾ ರಾಜೀವ್
|

Updated on:Aug 07, 2023 | 8:03 AM

ರಾಜಸ್ಥಾನದ ಉದಯ್​ಪುರದಲ್ಲಿ ಬರ್ಬರ ಹತ್ಯೆಯೊಂದು ನಡೆದಿದೆ 60 ವರ್ಷದ ವೃದ್ಧರೊಬ್ಬರು 82 ವರ್ಷದ ವೃದ್ಧೆಯನ್ನು ಛತ್ರಿಯಲ್ಲಿ ಹೊಡೆದು ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಯಾವುದೋ ಹೊಲದಲ್ಲಿ ನಡೆದ ಘಟನೆಯಂತೆ ಕಾಣುತ್ತದೆ, ಇಬ್ಬರು ಅಪ್ರಾಪ್ತ ಬಾಲಕರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮೊದಲು ವೃದ್ಧೆಯ ಎದೆಗೆ ವೃದ್ಧ ಕೈ ಮುಷ್ಟಿ ಕಟ್ಟಿ ಗುದ್ದುತ್ತಾನೆ ಆಗ ಆಕೆ ನೆಲದ ಮೇಲೆ ಬೀಳುತ್ತಾಳೆ, ಬಳಿಕ ಆಕೆಯ ಜುಟ್ಟು ಹಿಡಿದು ಛತ್ರಿಯಿಂದ ಅನೇಕ ಬಾರಿ ಥಳಿಸುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಬಳಿಕ ತಾನು ಶಿವನ ಅವತಾರ ಎಂದು ಹೇಳಿಕೊಂಡಿದ್ದಾರೆ, ಘಟನೆ ಆಗಸ್ಟ್ 5 ರಂದು ನಡೆದಿದೆ. ಆರೋಪಿ ತರ್ಪಾಲ್ ನಿವಾಸಿ ಪ್ರತಾಪ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಭುವನ್ ಭೂಷಣ್ ಯಾದವ್ ತಿಳಿಸಿದ್ದಾರೆ. ಸೈರಾ ನಿವಾಸಿ ಕಲ್ಕಿ ಬಾಯಿ ಅವರು ಆಗಸ್ಟ್ 5 ರಂದು ಬೆಳಿಗ್ಗೆ ಪಿಹಾರ್ (ಜರೋಲಿ) ಗೆ ತೆರಳಿದ್ದರು ಎಂದು ಅವರು ಹೇಳಿದರು.

ಆರೋಪಿಯು ಮಹಿಳೆ ಹಮ್ರಾಯ್ ಬಳಿ ಬರುತ್ತಿರುವುದನ್ನು ನೋಡಿ ಅವಳನ್ನು ಹಿಡಿದುಕೊಂಡು ತನ್ನನ್ನು ಶಿವನ ಅವತಾರ ಎಂದು ಹೇಳಲು ಆರಂಭಿಸಿದ್ದ, ಇದೇ ವೇಳೆ ಇಲ್ಲಿಗೆ ಮೇಕೆ ಮೇಯಿಸಲು ಬಂದಿದ್ದ ನಾಥು ಸಿಂಗ್ ಆರೋಪಿಯನ್ನು ನೋಡಿ ಮಹಿಳೆಯೊಂದಿಗೆ ತಮಾಷೆ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾನೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಕೇಸ್, 11 ಆರೋಪಿಗಳು ಪೊಲೀಸ್ ವಶಕ್ಕೆ

ಆರೋಪಿ ಥಳಿಸಲು ಆರಂಭಿಸಿದಾಗ ನಾಥು ಸಿಂಗ್ ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾರೆ, ವಿಚಾರಣೆ ವೇಳೆ ಆರೋಪಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ಹೇಳಿಕೊಂಡಿದ್ದಾನೆ.

ಆರೋಪಿ ಛತ್ರಿಯಿಂದ ಹಲ್ಲೆ ಮಾಡಿದ್ದು, ರಕ್ತಸ್ರಾವವಾದರೂ ಕೂಡ ಥಳಿಸುವುದನ್ನು ಮುಂದುವರೆಸಿದ್ದ, ಸ್ವಲ್ಪ ಸಮಯದ ನಂತರ ವೃದ್ಧೆ ಪ್ರಜ್ಞಾಹೀನಳಾಗಿದ್ದಳು.

ಎರಡನೇ ವಿಡಿಯೋದಲ್ಲಿ ಆರೋಪಿ ಆಕೆಯ ಮೇಲೆ ಕಾಲಿಟ್ಟು ನಿಂತಿದ್ದಾನೆ, ಛತ್ರಿಯ ಮೊನಚಾದ ಭಾಗದಿಂದ ಮಹಿಳೆಗೆ ಥಳಿಸಿದ್ದಾನೆ. ಮುಖ ಆರೋಪಿ ಪ್ರತಾಪ್ ಸಿಂಹನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೇಳೆ ನಾಥುಸಿಂಗ್ ಹಾಗೂ ಇಬ್ಬರು ಅಪ್ರಾಪ್ತರ ಪಾತ್ರವಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:01 am, Mon, 7 August 23