ಚಂದ್ರಯಾನ 3 ರ ಯಶಸ್ಸು ನಾರಿ ಶಕ್ತಿಗೆ ಜೀವಂತ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. 104ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚಂದ್ರಯಾನ 3 ರ ಯಶಸ್ಸಿನ ಹಿಂದೆ ಮಹಿಳೆಯರ ಕೆಲಸ ತುಂಬಾ ಇದೆ, ಅಸಾಧ್ಯವಾದುದ್ದನ್ನು ಸಾಧ್ಯವೆಂದು ತೋರಿಸಿದ್ದಾರೆ. ಚಂದ್ರಯಾನ 3 ರಲ್ಲಿ ಹಲವು ಮಂದಿ ಮಹಿಳಾ ವಿಜ್ಞಾನಿಗಳು ಹಾಗೂ ಎಂಜಿನಿಯರ್ಗಳು ಕೆಲಸ ಮಾಡಿದ್ದಾರೆ ಎಂದರು.
104ನೇ ಮನ್ ಕಿ ಬಾತ್ನಲ್ಲಿ ಮಾತನಾಡಿದ ಮೋದಿ, ಚಂದ್ರಯಾನ ಮಿಷನ್ ನವ ಭಾರತದ ಚೈತನ್ಯದ ಸಂಕೇತವಾಗಿದೆ. ಅದು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಲು ಬಯಸುತ್ತಿದೆ, ಗೆಲ್ಲುವುದು ಹೇಗೆಂಬುದು ಕೂಡ ತಿಳಿದಿದೆ. ಆಗಸ್ಟ್ 23 ರಂದು ಚಂದ್ರಯಾನ ಎಂಬ ಸಂಕಲ್ಪದ ಸೂರ್ಯ ಚಂದ್ರನ ಮೇಲೆ ಉದಯಿಸಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ತಿಂಗಳು ನಡೆಯಲಿರುವ ಜಿ20 ಶೃಂಗಸಭೆಗೆ ಭಾರತ ಸಿದ್ಧವಾಗಿದೆ. ಇದರಲ್ಲಿ ಭಾಗವಹಿಸಲು 40 ದೇಶಗಳ ಮುಖ್ಯಸ್ಥರು ಭಾರತಕ್ಕೆ ಬರುತ್ತಿದ್ದಾರೆ. ಭಾರತದ ಆಹ್ವಾನದ ಮೇರೆಗೆ ಮಾತ್ರ ಆಫ್ರಿಕನ್ ರಾಷ್ಟ್ರಗಳ ಮುಖ್ಯಸ್ಥರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ಗೆದ್ದ ಆಟಗಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕೆಲವು ದಿನಗಳ ಹಿಂದೆ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಪಂದ್ಯಗಳಲ್ಲಿ ಭಾರತದ ಆಟಗಾರರು ಇಲ್ಲಿಯವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 26 ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂದರು.
1959 ರಿಂದ ನಡೆದ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಗೆದ್ದ ಎಲ್ಲಾ ಪದಕಗಳನ್ನು ಸೇರಿಸಿದರೂ, ಈ ಸಂಖ್ಯೆ ಕೇವಲ 18 ಅನ್ನು ತಲುಪುತ್ತದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ ಎಂದರು.
ಬೆಂಗಳೂರಿನ ಧನ್ ಪಾಲ್ ಅವರ ಕುರಿತು ಪ್ರಧಾನಿ ಮೋದಿ ಮಾತು
ಯಾವಾಗ ಸಮಯ ಸಿಕ್ಕರೂ ನಮ್ಮ ದೇಶದ ವಿವಿಧತೆ ಹಾಗೂ ಸಂಪ್ರದಾಯವನ್ನು ನೋಡುವ ಅರಿಯುವ ಪ್ರಯತ್ನ ಮಾಡಿ. ಸಾಕಷ್ಟು ಮಂದಿ ತಮ್ಮ ಊರಿನ ಐತಿಹಾಸಿಕ ಪ್ರದೇಶಗಳ ಬಗ್ಗೆ ಅರಿವೇ ಇರುವುದಿಲ್ಲ.
ಹಾಗೆಯೇ ಬೆಂಗಳೂರಿನ ಧನ್ಪಾಲ್ ಅವರು ಟ್ರಾನ್ಸ್ಪೋರ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ದರ್ಶಿನಿಯಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ಜನರಿಗೆ ಬೆಂಗಳೂರು ದರ್ಶನ ಮಾಡುವ ಅವಕಾಶ ದೊರೆಯಿತು.
ಆಗ ಒಂದು ದಿನ ಪ್ರವಾಸಿಗರೊಬ್ಬರು ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕಿ ಇದೆಯಲ್ಲಾ ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆ ಕೇಳಿದ್ದರು, ಆದರೆ ಧನ್ ಪಾಲ್ ಅವರಿಗೆ ತಮ್ಮ ಬಗ್ಗೆಯೇ ಬೇಸರವೆನಿಸಿತು, ನಂತರ ಕಲಿಕೆ ಶುರು ಮಾಡಿದರು. ಶಿಲಾಲೇಖದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ, ಈಗ ರಿಟೈರ್ ಆಗಿದ್ದರೂ ಕೂಡ ತಮ್ಮ ಅಭಿರುಚಿ ಒಂದು ಚೂರು ಕಡಿಮೆಯಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 am, Sun, 27 August 23