Mann Ki Baat: ನಾಳೆ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್
ಮನ್ ಕಿ ಬಾತ್, ಆಗಸ್ಟ್ 2023: ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 104 ನೇ ಸಂಚಿಕೆಯಾಗಿದೆ. ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನೆಟ್‌ವರ್ಕ್ , ಆಕಾಶವಾಣಿ ವೆಬ್‌ಸೈಟ್ ಮತ್ತು ನ್ಯೂಸ್ ಆನ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಆಕಾಶವಾಣಿ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಆಕಾಶವಾಣಿ ಹಿಂದಿ ಪ್ರಸಾರವಾದ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ.
ದೆಹಲಿ ಆಗಸ್ಟ್ 26:ನಾಳೆ (ಭಾನುವಾರ) ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ (Mann Ki Baat) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 104 ನೇ ಸಂಚಿಕೆಯಾಗಿದೆ. ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನೆಟ್‌ವರ್ಕ್, ಆಕಾಶವಾಣಿ ವೆಬ್‌ಸೈಟ್ ಮತ್ತು ನ್ಯೂಸ್ ಆನ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಆಕಾಶವಾಣಿ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಆಕಾಶವಾಣಿ ಹಿಂದಿ ಪ್ರಸಾರವಾದ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ.
ಈ ಬಾರಿ ಮೋದಿ ಅವರು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಿಂದ 20 ಕಿ.ಮೀ ದೂರದಲ್ಲಿರುವ ಕೊಟೆಂಗ್‌ಸೆರಾ ಗ್ರಾಮದ ರೈತರ ಬಗ್ಗೆ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಪ್ರಭಾತ್ ಖಬರ್ ಡಾಟ್ ಕಾಂ ವರದಿ ಮಾಡಿದೆ. ಈ ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಕೋಟೆಂಗಸೆರಾ ಮುರ್ಕುಂದ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಸಂಸದ ಸುದರ್ಶನ ಭಗತ್ ಇದನ್ನು ಅಗ್ರಿ ಸ್ಮಾರ್ಟ್ ವಿಲೇಜ್ ಆಗಿ ಆಯ್ಕೆ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ಈ ಪ್ರದೇಶ ನಕ್ಸಲ್ ಬಾಧಿತವಾಗಿತ್ತು. ಮಾವೋವಾದಿಗಳು, ಪಿಎಲ್‌ಎಫ್‌ಐ ಮತ್ತು ಪಹಾಡಿ ಚೀತಾ ಗ್ಯಾಂಗ್‌ನ ಉಗ್ರರು ಮತ್ತು ಕ್ರಿಮಿನಲ್‌ಗಳು ಜನರನ್ನು ಕೊಲ್ಲುವುದು ಮತ್ತು ಲೂಟಿ ಮಾಡುವಂತಹ ಘಟನೆಗಳನ್ನು ನಡೆಸುತ್ತಿದ್ದರು. ನಕ್ಸಲಿಸಂ ನಿಗ್ರಹದ ನಂತರ ಗ್ರಾಮಸ್ಥರು ಕೃಷಿಯತ್ತ ಗಮನ ಹರಿಸಿದರು. ಇದೀಗ ಈ ಗ್ರಾಮ ಸಾವಯವ ಕೃಷಿಯಿಂದ ತಲೆ ಎತ್ತಿದೆ. ಸಂಸದ ಸುದರ್ಶನ ಭಗತ್ ಅವರ ಪ್ರೇರಣೆಯಿಂದ PMO ಈ ಗ್ರಾಮವನ್ನು ಮನ್ ಕಿ ಬಾತ್ ಗೆ ಆಯ್ಕೆ ಮಾಡಿದೆ. ಕೋಟೆಂಗಸೆರಾ ಸೇರಿದಂತೆ ರಘುನಾಥಪುರ, ಕೊಳಂಬಿ, ಕುತ್ವಾ ಗ್ರಾಮಗಳ 200ಕ್ಕೂ ಹೆಚ್ಚು ರೈತರು ಸಾವಯವ ಕೃಷಿ ಮಾಡಿ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ.
ಕಳೆದ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಪರಸ್ಪರ ಸಹಾಯ ಮಾಡುವ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು ಎಂದು ಹೇಳಿದ್ದಾರೆ. ಯಮುನಾ ನದಿ ಸೇರಿದಂತೆ ದೇಶದ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ, ಎನ್ಡಿಆರ್ಆರ್ಎಫ್ ಸಿಬ್ಬಂದಿ ಜತೆಗೆ ಸ್ಥಳೀಯರು ತುಂಬಾ ಸಹಾಯ ಮಾಡುತ್ತಿದ್ದಾರೆ, ಇದೇ ಮನೋಭಾವ ದೇಶದ ತಾಕತ್ತು ಎಂದಿದ್ದಾರೆ ಅವರು.
ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಮನ್ ಕಿ ಬಾತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳು ಬಂದಿವೆ ಎಂದ ಮೋದಿ, ಅದು ಮನಸ್ಸಿಗೆ ಸಾಕಷ್ಟು ತೃಪ್ತಿಯನ್ನು ನೀಡುತ್ತದೆ . ಇತ್ತೀಚೆಗೆ ಹಜ್ ಯಾತ್ರೆ ಮುಗಿಸಿ ಬಂದ ಮುಸ್ಲಿಂ ಮಹಿಳೆಯರು ಈ ಪತ್ರಗಳನ್ನು ಬರೆದಿದ್ದಾರೆ. ಅವರ ಈ ಪಯಣ ಹಲವು ರೀತಿಯಲ್ಲಿ ವಿಶೇಷವಾಗಿದೆ. ಹಿಂದಿನ ಮುಸ್ಲಿಂ ಮಹಿಳೆಯರಿಗೆ ಮೆಹ್ರಮ್ ಇಲ್ಲದೆ ಹಜ್ ಮಾಡಲು ಅವಕಾಶವಿರಲಿಲ್ಲ. ನಾನು ಸೌದಿ ಅರೇಬಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಹ ವ್ಯಕ್ತಪಡಿಸುತ್ತೇನೆ. ಮೆಹ್ರಮ್ ಇಲ್ಲದೆ ಹಜ್‌ಗೆ ಹೋಗುವ ಮಹಿಳೆಯರಿಗೆ ವಿಶೇಷವಾಗಿ ಮಹಿಳಾ ಸಂಯೋಜಕರನ್ನು ನೇಮಿಸಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಹಜ್ ನೀತಿಯಲ್ಲಿ ಮಾಡಲಾದ ಬದಲಾವಣೆಗಳನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಈ ಬಗ್ಗೆ ನನಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದಾರೆ. ಈಗ ಹೆಚ್ಚು ಹೆಚ್ಚು ಜನರಿಗೆ ಹಜ್‌ಗೆ ಹೋಗಲು ಅವಕಾಶ ಸಿಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Sat, 26 August 23