ದೆಹಲಿ ಆಗಸ್ಟ್ 23: ಜುಲೈ 14 ರಂದು ಉಡಾವಣೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೂರನೇ ಚಂದ್ರಯಾನ-3 ರ (Chandrayaan-3) ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಇಂದು ಸಂಜೆ (ಆಗಸ್ಟ್ 23) ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಆಗಸ್ಟ್ 18 ರಂದು, ISRO ತನ್ನ ಕಕ್ಷೆಯನ್ನು 113 ಕಿಮೀ x 157 ಕಿಮೀಗೆ ಹತ್ತಿರವಾಗುವ ಮೂಲಕ ಮೊದಲ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ಲ್ಯಾಂಡರ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ಮರುದಿನ ಇದನ್ನು ನಡೆಸಲಾಯಿತು. ಆಗಸ್ಟ್ 20 ರಂದು, ವಿಕ್ರಂ ಲ್ಯಾಂಡರ್ ಮಾಡ್ಯೂಲ್‌ನ ಎರಡನೇ ಮತ್ತು ಅಂತಿಮ ಡೀಬೂಸ್ಟ್ ಪ್ರಕ್ರಿಯೆ ನಡೆದಿದ್ದು ಇದು ಮಾಡ್ಯೂಲ್ ಆರ್ಬಿಟರ್ ನ್ನು 25 ಕಿಮೀ x 134 ಕಿಮೀಗೆ ಇಳಿಸಿತು.
ಲ್ಯಾಂಡರ್ ನಲ್ಲಿರುವ ರೋವರ್, 25 ಕಿಮೀ x 134 ಕಿಮೀ ಕಕ್ಷೆಯಲ್ಲಿದೆ. ಇದು ಆಗಸ್ಟ್ 23 (ಇಂದು) ರಂದು ಸಂಜೆ ಚಂದ್ರನ ಅಂಗಳಕ್ಕೆ ಇಳಿದೆ.
ವಿಕ್ರಮ್ ಲ್ಯಾಂಡರ್ ಆಗಸ್ಟ್ 17 ರಂದು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಮೇಲ್ಮೈಯ ದೂರದ ಭಾಗದ ಚಿತ್ರಗಳನ್ನು ತೆಗೆದೆದಿ.
ಇಡೀ ಜಗತ್ತೇ ಕಾತರಿಂದ ಕಾಯುತ್ತಿದ್ದ ಕ್ಷಣ ಅದು. ಭಾರತೀಯರ ಕನಸು. ಈ ಕನಸು ಇಂದು ನನಸಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಸಾಫ್ಟ್ ಲ್ಯಾಂಡಿಗ್ ಮಾಡುವ ದೃಶ್ಯಗಳನ್ನು ನೀವು ಇಸ್ರೋದ ಫೇಸ್ಬುಕ್ ಪುಟ, ಯುಟ್ಯೂಬ್ ಮತ್ತು ಅಧಿಕೃತ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.
ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ಬೆಂಗಳೂರಿನ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ‘ಭಾರತ ಈಗ ಚಂದ್ರನ ಮೇಲಿದೆ’ ಎಂದು ಹೇಳಿದ್ದಾರೆ. ಈ ಐತಿಹಾಸಿಕ ಸಾಧನೆಯೊಂದಿಗೆ, ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಿದ ವಿಶ್ವದ ನಾಲ್ಕನೇ ದೇಶ ಭಾರತವಾಗಿದೆ. ಭಾರತ ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಮೊದಲ ದೇಶವಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ಹೊಸ ಭಾರತದ ಉದಯ. ಚಂದ್ರಯಾನ-3 ಯಶಸ್ಸು ಭಾರತವನ್ನು ಚಂದ್ರನ ಕ್ಷಿತಿಜದ ಆಚೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
ಚಂದ್ರಯಾನ ಯಶಸ್ವಿ ಆದ ನಂತರ ಟ್ವೀಟ್ ಮಾಡಿದ ಇಸ್ರೋ ಭಾರತ ಮತ್ತು ಚಂದ್ರಯಾನ -3 ಎರಡೂ ಗಮ್ಯ ತಲುಪಿದೆ ಎಂದು ಟ್ವೀಟ್ ಮಾಡಿದೆ.
Chandrayaan-3 Mission:
‘India🇮🇳,
I reached my destination
and you too!’
: Chandrayaan-3Chandrayaan-3 has successfully
soft-landed on the moon 🌖!.Congratulations, India🇮🇳!#Chandrayaan_3#Ch3
— ISRO (@isro) August 23, 2023
ಇದನ್ನೂ ಓದಿ: PM Modi on Chandrayaan 3: ಚಂದ್ರಯಾನ-3ರ ಯಶಸ್ಸಿಗೆ ಮೋದಿ ಹರ್ಷ; ಅಮೃತಕಾಲದಲ್ಲಿ ಸುರಿಯಿತು ಯಶಸ್ಸಿನ ಮಕರಂದ ಎಂದ ಪ್ರಧಾನಿ
ಮಿಷನ್ ಯಶಸ್ವಿಯಾಗುವ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಮೊದಲ ದೇಶವಾಗಿದೆ ಭಾರತ. ಕೆಲವು ದಿನಗಳ ಹಿಂದೆ, ರಷ್ಯಾದ ಲೂನಾ -25 ಅದೇ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವಾಗ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು. ಕೇವಲ ಮೂರು ಇತರ ದೇಶಗಳು (ರಷ್ಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್) ಯಶಸ್ವಿಯಾಗಿ ಚಂದ್ರನ ಮೇಲೆ ರೋವರ್ ಅನ್ನು ಇಳಿಸಿವೆ.
ವಿಕ್ರಮ್ ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಹೆಸರಿಡಲಾಗಿದೆ. ಸುಮಾರು 3,900 ಕೆಜಿ ತೂಕದ ಚಂದ್ರಯಾನ-3 ರಾಕೆಟ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಉಡಾವಣೆ ಮಾಡಲು 615 ಕೋಟಿ ರೂ. ಖರ್ಚಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 23 August 23