ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ: ಪ್ರಧಾನಿ ನರೇಂದ್ರ ಮೋದಿ

BRICS Summit 2023: ತಂತ್ರಜ್ಞಾನದ ಬಳಕೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಬ್ರಿಕ್ಸ್ ದೇಶಗಳು ತಮ್ಮ ಸಮಾಜಗಳನ್ನು ಭವಿಷ್ಯಕ್ಕೆ ಸಿದ್ಧವಾಗುವಂತೆ ಮಾಡಬೇಕಾಗಿದೆ. ಈ ಪ್ರಯತ್ನಗಳಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ. ಭಾರತದೊಂದಿಗೆ ಜೋಹಾನ್ಸ್‌ಬರ್ಗ್‌ನ ಗಾಢ ಮತ್ತು ಹಳೆಯ ಸಂಬಂಧಗಳು ಮತ್ತು ದಕ್ಷಿಣ ಆಫ್ರಿಕಾದೊಂದಿಗಿನ ಮಹಾತ್ಮ ಗಾಂಧಿಯವರ ಸಂಪರ್ಕ ಮತ್ತು ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಪರ್ಕಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ: ಪ್ರಧಾನಿ ನರೇಂದ್ರ ಮೋದಿ
ಬ್ರಿಕ್ಸ್ ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Aug 23, 2023 | 5:39 PM

ಜೋಹಾನ್ಸ್‌ಬರ್ಗ್‌ ಆಗಸ್ಟ್ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಬ್ರಿಕ್ಸ್ (BRICS) ವಿಸ್ತರಣೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದು, ಒಮ್ಮತದ ಆಧಾರದ ಮೇಲೆ ಮುಂದುವರಿಯುವ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ (Johannesburg) ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ತನ್ನ ಜಿ 20 ಅಧ್ಯಕ್ಷತೆಯಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಬ್ರಿಕ್ಸ್ ಶೃಂಗಸಭೆಗೆ ಆತಿಥ್ಯ ವಹಿಸಿದ ದಕ್ಷಿಣ ಆಫ್ರಿಕಾವನ್ನು ಅವರು ಶ್ಲಾಘಿಸಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್‌ನಲ್ಲಿ ಜಾಗತಿಕ ದಕ್ಷಿಣದ ದೇಶಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಭಾರತವು ತನ್ನ ಜಿ 20 ಅಧ್ಯಕ್ಷತೆಯಲ್ಲಿ ಈ ವಿಷಯಕ್ಕೆ ಪ್ರಾಮುಖ್ಯತೆ ನೀಡಿದೆ ಎಂದು ಮೋದಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ಬ್ರಿಕ್ಸ್ ಸುದೀರ್ಘ ಮತ್ತು ಅದ್ಭುತವಾದ ಪ್ರಯಾಣವನ್ನು ಆರಂಭಿಸಿದೆ. ಗ್ಲೋಬಲ್ ಸೌತ್‌ನಲ್ಲಿ ಅಭಿವೃದ್ಧಿಶೀಲ ಚಟುವಟಿಕೆಗಳನ್ನು ಮುಂದಕ್ಕೆ ಸಾಗಿಸುವಲ್ಲಿ ಗುಂಪಿನ ಹೊಸ ಅಭಿವೃದ್ಧಿ ಬ್ಯಾಂಕ್ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ರೈಲ್ವೆ ಸಂಶೋಧನಾ ಜಾಲಗಳ ಕ್ಷೇತ್ರಗಳಲ್ಲಿ ಕ್ರಮಗಳನ್ನು ಮತ್ತು ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳ ನಡುವಿನ ಸಹಕಾರವನ್ನು ಭಾರತ ಸೂಚಿಸಿದ್ದು, ಈ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ತಂತ್ರಜ್ಞಾನದ ಬಳಕೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಬ್ರಿಕ್ಸ್ ದೇಶಗಳು ತಮ್ಮ ಸಮಾಜಗಳನ್ನು ಭವಿಷ್ಯಕ್ಕೆ ಸಿದ್ಧವಾಗುವಂತೆ ಮಾಡಬೇಕಾಗಿದೆ. ಈ ಪ್ರಯತ್ನಗಳಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.

ಭಾರತದೊಂದಿಗೆ ಜೋಹಾನ್ಸ್‌ಬರ್ಗ್‌ನ ಗಾಢ ಮತ್ತು ಹಳೆಯ ಸಂಬಂಧಗಳು ಮತ್ತು ದಕ್ಷಿಣ ಆಫ್ರಿಕಾದೊಂದಿಗಿನ ಮಹಾತ್ಮ ಗಾಂಧಿಯವರ ಸಂಪರ್ಕ ಮತ್ತು ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಪರ್ಕಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಜೋಹಾನ್ಸ್‌ಬರ್ಗ್‌ನಂತಹ ಸುಂದರ ನಗರಕ್ಕೆ ಮತ್ತೊಮ್ಮೆ ಬರುವುದು ನನಗೆ ಮತ್ತು ನನ್ನ ನಿಯೋಗಕ್ಕೆ ಸಂತೋಷದ ವಿಷಯವಾಗಿದೆ. ಈ ನಗರವು ಭಾರತೀಯರು ಮತ್ತು ಭಾರತೀಯ ಇತಿಹಾಸದೊಂದಿಗೆ ಗಾಢ ಮತ್ತು ಹಳೆಯ ಸಂಬಂಧವನ್ನು ಹೊಂದಿದೆ. ಇಲ್ಲಿಂದ ದೂರದಲ್ಲಿ ಟಾಲ್ಸ್ಟಾಯ್ ಫಾರ್ಮ್ ಇದೆ. ಇದನ್ನು 110 ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ಮಾಡಿದ್ದಾರೆ. ಭಾರತ, ಯುರೇಷಿಯಾ ಮತ್ತು ಆಫ್ರಿಕಾದ ಶ್ರೇಷ್ಠ ವಿಚಾರಗಳನ್ನು ಸಂಪರ್ಕಿಸುವ ಮೂಲಕ, ಮಹಾತ್ಮ ಗಾಂಧಿಯವರು ನಮ್ಮ ಏಕತೆ ಮತ್ತು ಸಾಮರಸ್ಯದ ಬಲವಾದ ಅಡಿಪಾಯವನ್ನು ಹಾಕಿದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

ಮಂಗಳವಾರ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ವಾಟರ್‌ಕ್ಲೂಫ್ ಏರ್ ಫೋರ್ಸ್ ನಲ್ಲಿ ಅದ್ದೂರಿ ಸ್ವಾಗತ ನೀಡಿದ್ದು, ಭಾರತೀಯ ವಲಸಿಗರು ‘ವಂದೇ ಮಾತರಂ’ ಹಾಡಿ ಸ್ವಾಗತಿಸಿದ್ದಾರೆ.

BRICS ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ವಿಶ್ವ ಆರ್ಥಿಕತೆಯ ಒಂದು ಗುಂಪು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸತತ ಮೂರು ವರ್ಷಗಳ ವರ್ಚುವಲ್ ಸಭೆಗಳ ನಂತರ ಇದು ಮುಖತಃ ಭೇಟಿಯ ಬ್ರಿಕ್ಸ್ ಶೃಂಗಸಭೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ