Delhi Chalo ಹಿರಿಯ ಬಿಜೆಪಿ ನಾಯಕನಿಂದ ಬೆಂಬಲ ಘೋಷಣೆ!

|

Updated on: Dec 19, 2020 | 2:47 PM

ಪಂಜಾಬ್ ರೈತರ ಪ್ರತಿಭಟನೆಗೆ ಕೇಂದ್ರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ, ಬಿಜೆಪಿಯ ಹಿರಿಯ ನಾಯಕ ಚೌಧರಿ ಬಿರೇಂದರ್ ಸಿಂಗ್ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ, ಹರ್ಯಾಣದ ಝಾಜ್ಜರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದಾರೆ.

Delhi Chalo ಹಿರಿಯ ಬಿಜೆಪಿ ನಾಯಕನಿಂದ ಬೆಂಬಲ ಘೋಷಣೆ!
ಬಿಜೆಪಿಯ ಹಿರಿಯ ನಾಯಕ ಬಿರೇಂದರ್ ಸಿಂಗ್
Follow us on

ದೆಹಲಿ: ಪಂಜಾಬ್ ರೈತರ ಪ್ರತಿಭಟನೆಗೆ ಕೇಂದ್ರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ,  ಹಿರಿಯ ಬಿಜೆಪಿ ನಾಯಕ ಚೌಧರಿ ಬಿರೇಂದರ್ ಸಿಂಗ್ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ, ಹರ್ಯಾಣದ ಜಜ್ಜರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದಾರೆ.

‘ನೀವು ವಿದ್ಯಾರ್ಥಿ, ಕಾರ್ಮಿಕ ಅಥವಾ ಮಹಿಳೆ ಹೀಗೆ ಸಮಾಜದ ಯಾರನ್ನೇ ಮಾತಾಡಿಸಿ..ಅವರೆಲ್ಲರೂ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಅದರಲ್ಲೂ ಕಳೆದ ಐದಾರು ದಿನಗಳಿಂದ ಕೊರೆಯುವ ತೀವ್ರ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅವರ ಕುರಿತು ಎಲ್ಲರಿಗೂ ಕಾಳಜಿ ಹೆಚ್ಚಿದೆ. ಕೇವಲ ರಾಜಕೀಯ ಮಾಡುವುದಕ್ಕಿಂತ ರೈತರ ತೊಂದರೆಗಳಿಗೆ ಪರಿಹಾರ ಹುಡುಕುವುದೊಳಿತು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಮಗ ರಾಜಕೀಯ ಪ್ರವೇಶದ ನಂತರ ರಾಜಕೀಯ ನಿವೃತ್ತಿ ಘೋಷಿಸಿದ್ದ ಬಿರೇಂದರ್, ‘ರೈತರ ಹಿತಕ್ಕೋಸ್ಕರ ರಾಜಕೀಯ ಮರುಪ್ರವೇಶ ಮಾಡಬಲ್ಲೆ’ ಎಂದು ಸಹ ಘೋಷಿಸಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ ಕಂದಕ ಸೃಷ್ಟಿಯಾಗಿದೆ. ಮೊದಲು ಈ ಅಂತರ ಕಳೆಯಬೇಕು. ರೈತರು ಚಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸುವುದನ್ನು ನೋಡುತ್ತ ಸುಮ್ಮನೆ ಕೂರಲು ಸಾಧ್ಯವಿಲ್ಲ. ಎಂದಿದ್ದಾರೆ. 2018ರಲ್ಲಿ ಬಿರೇಂದರ್ ಅವರ ಅಜ್ಜ ಸರ್ ಛೊಟು ರಾಮ್ ಅವರ 64 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.

ಬಿರೇಂದರ್ ಸಿಂಗ್, ಸ್ವಾತಂತ್ರ್ಯ ಪೂರ್ವದಲ್ಲಿ ಭೂ ಸುಧಾರಣೆ ಕಾನೂನುಗಳನ್ನು ಜಾರಿಗೆ ತರಲು ಶ್ರಮಿಸಿದ ಸರ್ ಛೋಟು ರಾಮ್ ಅವರ ಮೊಮ್ಮಗ. ಜೊತೆಗೆ ಹಿಸಾರ್ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಬಿರೇಂದರ್ ಅವರ ಮಗ. ಹೀಗಾಗಿ, ಬಿರೇಂದರ್ ಸಿಂಗ್ ಬೆಂಬಲ ಪಂಜಾಬ್ ರೈತರಿಗೆ ನೈತಿಕ ಬಲ ಹೆಚ್ಚಿಸಲಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. 74 ವರ್ಷದ  ಚೌಧರಿ ಬಿರೇಂದರ್ ಸಿಂಗ್ ಹೇಳಿಕೆಗೆ ಬಿಜೆಪಿ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

Delhi Chalo | ರೈತರಿಂದ ಕಾನೂನು ತಜ್ಞರ ಜೊತೆ ಸಮಾಲೋಚನೆ

Published On - 2:35 pm, Sat, 19 December 20