ತಿರುಮಲ ಘಾಟ್‌ ರಸ್ತೆಯಲ್ಲಿ ಚಿರತೆ ಹಾವಳಿ, 6 ಬೈಕ್ ಸವಾರರ ಮೇಲೆ ದಾಳಿ

| Updated By: ಸಾಧು ಶ್ರೀನಾಥ್​

Updated on: Aug 05, 2020 | 11:13 AM

ತಿರುಪತಿ: ತಿರುಮಲದ ಘಾಟ್‌ ರಸ್ತೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಘಾಟ್ ರಸ್ತೆಯಲ್ಲಿ‌ ಸಂಚರಿಸುವ ಬೈಕ್ ಸವಾರರ ಮೇಲೆ ಅಟ್ಯಾಕ್ ಮಾಡಿವೆ. ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುಮಲದ ಘಾಟ್‌ ರಸ್ತೆಯಲ್ಲಿ ಒಟ್ಟು 6 ಜನರ‌ ಮೇಲೆ ಚಿರತೆ ದಾಳಿ ನಡೆಸಿದೆ. ಅರಣ್ಯಾಧಿಕಾರಿಗಳು ಚಿರತೆಗಾಗಿ‌ ಶೋಧ‌ ಕಾರ್ಯ ನಡೆಸುತ್ತಿದ್ದಾರೆ. ಸೈರನ್‌ ವಾಹನ‌ ಬಳಸಿ ಚಿರತೆ‌ ಓಡಿಸಲು‌ ಅಧಿಕಾರಿಗಳು ಯತ್ನ ಮಾಡ್ತಿದ್ದಾರೆ. ಹೀಗಾಗಿ ಘಾಟ್ ರಸ್ತೆಯಲ್ಲಿ‌ ಓಡಾಡುವ ವಾಹನ‌ ಸವಾರರನ್ನು ಸಿಬ್ಬಂದಿ ತಡೆದಿದ್ದಾರೆ. ಘಾಟ್ ರಸ್ತೆಯಲ್ಲಿ ಒಬಬ್ಬರನ್ನು ಕಳುಹಿಸದೆ 10ಜನರ […]

ತಿರುಮಲ ಘಾಟ್‌ ರಸ್ತೆಯಲ್ಲಿ ಚಿರತೆ ಹಾವಳಿ, 6 ಬೈಕ್ ಸವಾರರ ಮೇಲೆ ದಾಳಿ
Follow us on

ತಿರುಪತಿ: ತಿರುಮಲದ ಘಾಟ್‌ ರಸ್ತೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಘಾಟ್ ರಸ್ತೆಯಲ್ಲಿ‌ ಸಂಚರಿಸುವ ಬೈಕ್ ಸವಾರರ ಮೇಲೆ ಅಟ್ಯಾಕ್ ಮಾಡಿವೆ. ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿರುಮಲದ ಘಾಟ್‌ ರಸ್ತೆಯಲ್ಲಿ ಒಟ್ಟು 6 ಜನರ‌ ಮೇಲೆ ಚಿರತೆ ದಾಳಿ ನಡೆಸಿದೆ. ಅರಣ್ಯಾಧಿಕಾರಿಗಳು ಚಿರತೆಗಾಗಿ‌ ಶೋಧ‌ ಕಾರ್ಯ ನಡೆಸುತ್ತಿದ್ದಾರೆ. ಸೈರನ್‌ ವಾಹನ‌ ಬಳಸಿ ಚಿರತೆ‌ ಓಡಿಸಲು‌ ಅಧಿಕಾರಿಗಳು ಯತ್ನ ಮಾಡ್ತಿದ್ದಾರೆ. ಹೀಗಾಗಿ ಘಾಟ್ ರಸ್ತೆಯಲ್ಲಿ‌ ಓಡಾಡುವ ವಾಹನ‌ ಸವಾರರನ್ನು ಸಿಬ್ಬಂದಿ ತಡೆದಿದ್ದಾರೆ.

ಘಾಟ್ ರಸ್ತೆಯಲ್ಲಿ ಒಬಬ್ಬರನ್ನು ಕಳುಹಿಸದೆ 10ಜನರ ಗುಂಪನ್ನಾಗಿ ಮಾಡಿ ರಸ್ತೆಯಲ್ಲಿ‌ ಹೋಗಲು ಅನುಮತಿ‌ ನೀಡಲಾಗುತ್ತಿದೆ. ಚಿರತೆ ಭೀತಿಯಿಂದಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ.