ಚೆನ್ನೈ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೂರ ದೃಷ್ಟಿಯಿಂದ ಚೆನ್ನೈನ ಗಿಂಡಿಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಏಜಿಂಗ್ ಕೇಂದ್ರವನ್ನು ಕೋವಿಡ್ ಕೇರ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.
ಮುಂದೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತೆ. ಆಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ಗಳ ಅವಶ್ಯಕತೆ ಬೀಳುತ್ತೆ. ರೋಗಿಗಳು ಬೆಡ್ಗಳಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಮುಂಜಾಗ್ರತೆಗಾಗಿ ಆಸ್ಪತ್ರೆಯನ್ನು ಚೆನ್ನೈನಲ್ಲಿ ಸಿದ್ಧಪಡಿಸಲಾಗಿದೆ.
ಈ ಆಸ್ಪತ್ರೆಯಲ್ಲಿ 750 ಹಾಸಿಗೆಗಳ ವ್ಯವಸ್ಥೆ ಇದ್ದು, ಅದರಲ್ಲಿ 300 ಆಕ್ಸಿಜನ್ ಬೆಡ್, 200 ವೆಂಟಿಲೇಟರ್ ಬೆಡ್ ಮತ್ತು 250 ಸಾಮಾನ್ಯ ಬೆಡ್ಗಗಳಿವೆ ಎಂದು ಉಸ್ತುವಾರಿ ನಿರ್ದೇಶಕರು ತಿಳಿಸಿದ್ದಾರೆ.