ಚೆನ್ನೈ:ತಮಿಳುನಾಡಿನಲ್ಲಿ( Tamil Nadu) ಭಾರೀ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 12 ರಷ್ಟಿದೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ (KKSSR Ramachandran)ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಚೆನ್ನೈನಲ್ಲಿರುವ ಐದು ತಂಡಗಳು ಸೇರಿದಂತೆ 13 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ(Puducherry) ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಹೆಚ್ಚುವರಿ ಬೆಂಬಲಕ್ಕಾಗಿ ಮೂರು ತಂಡಗಳನ್ನು ಮೀಸಲು ಸ್ಥಾನದಲ್ಲಿ ಇರಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ(Bay of Bengal) ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶ ಶೀಘ್ರದಲ್ಲೇ ವಾಯುಭಾರ ಕುಸಿತವಾಗಿ ಕೇಂದ್ರೀಕೃತವಾಗಿದ್ದು, ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಚೆನ್ನೈನಲ್ಲಿ ತಿಳಿಸಿದೆ. ಮುಂದಿನ ಎರಡು ಗಂಟೆಗಳಲ್ಲಿ, ಚೆನ್ನೈ, ಕಾಂಚೀಪುರಂನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ವೆಲ್ಲೂರ್, ರಾಣಿಪೇಟ್, ತಿರುವಣ್ಣಾಮಲೈ, ತಿರುಪತ್ತೂರ್, ಕಡಲೂರು, ವಿಲ್ಲುಪುರಂ, ಚೆಂಗಲ್ಪಟ್ಟು, ಕಲ್ಲಕುರುಚಿ, ಮೈಲಾಡುತುರೈ, ನಾಗಪಟ್ಟಿಣಂ, ತನಿಯವೂರ್, ತಿರುವಾರೂರ್, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ಸೇಲಂ, ತಿರುಚಿರಾಪಳ್ಳಿ, ಅರಿಯಲೂರ್, ಪೆರಂಬಲೂರ್, ಮಧುರೈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.
The death toll due to heavy rainfall in the state stands at 12. As of now, 11 teams of NDRF and 7 teams of TN State Disaster Response Force are deployed: KKSSR Ramachandran, Tamil Nadu Revenue and Disaster Management Minister pic.twitter.com/3yp4FsESm4
— ANI (@ANI) November 10, 2021
ಐಎಂಡಿ ಮುನ್ಸೂಚನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಒಂಬತ್ತು ಜಿಲ್ಲೆಗಳಾದ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್‌ಪೇಟ್, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರ್ ಮತ್ತು ಮೈಲಾಡುತುರೈನಲ್ಲಿ ನವೆಂಬರ್ 10 ಮತ್ತು 11 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಚೆನ್ನೈಯಲ್ಲಿ ತರಕಾರಿ ಬೆಲೆಯಲ್ಲಿ ಏರಿಕೆ
ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳು ಮತ್ತು ಮಾರಾಟಗಾರರು ಹೆಚ್ಚಿನ ಬೇಡಿಕೆ ಮತ್ತು ಬೆಳೆಗಳ ಹಾನಿಯಿಂದಾಗಿ ಕಡಿಮೆ ಪೂರೈಕೆ ಮತ್ತು ಸಾಗಣೆಯಲ್ಲಿ ವಿಳಂಬ ಬೆಲೆ ಏರಿಕೆಗೆ ಕಾರಣವೆಂದು ಹೇಳುತ್ತಾರೆ.
ಉದಾಹರಣೆಗೆ, ಟೊಮೆಟೊಗಳು ಬುಧವಾರದಂದು ಕೆಜಿಗೆ 125 ರೂ.ಗೆ ಚಿಲ್ಲರೆಯಾಗಿ ಮಾರಾಟವಾಗುತ್ತಿದ್ದು, ಹಿಂದಿನ ದಿನಕ್ಕೆ ಕೆಜಿಗೆ 100 ರೂ. ಸಗಟು ಮಾರುಕಟ್ಟೆಗಳಲ್ಲಿ, ಟೊಮ್ಯಾಟೊ ಕೆಜಿಗೆ 35-40 ರೂ.ಗೆ ಮಾರಾಟವಾಗುತ್ತಿದ್ದು, ಈಗ ಅದು ಕೆಜಿಗೆ 60-80 ರೂ. ಆಗಿದೆ.
Tamil Nadu: Waterlogging in several parts of Chennai in aftermath of heavy rains. Visuals from Ashok Nagar and KK Nagar pic.twitter.com/anY2eODEkv
— ANI (@ANI) November 10, 2021
ನಾಗಪಟ್ಟಣಂನಲ್ಲಿ 30 ಸೆಂ.ಮೀ ಮಳೆ; ನಾಳೆ ಕಡಲೂರು ಬಳಿ ವಾಯುಭಾರ ಕುಸಿತ ಉಂಟಾಗಲಿದೆ
ಭಾರತೀಯ ಹವಾಮಾನ ಇಲಾಖೆ (IMD) ಬುಧವಾರದಂದು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಮುಂದಿನ 12 ಗಂಟೆಗಳಲ್ಲಿ ವಾಯುಭಾರ ಕುಸಿತವಾಗಿ ಕೇಂದ್ರೀಕೃತವಾಗಲಿದ್ದು, ಗುರುವಾರ ಮುಂಜಾನೆ ಉತ್ತರ ತಮಿಳುನಾಡು ಕರಾವಳಿಯನ್ನು ತಲುಪುವ ಮೊದಲು ಪಶ್ಚಿಮ-ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Tamil Nadu Rains ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ; 9 ಜಿಲ್ಲೆಗಳಲ್ಲಿ ರಜೆ ಘೋಷಣೆ
Published On - 3:40 pm, Wed, 10 November 21