ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಗುರುವಾರ (ನ.11) ವ್ಯಾಪಕ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಮಧ್ಯಾಹ್ನದಿಂದೀಚೆಗೆ ಚಂಡಮಾರುತ ರೂಪುಗೊಂಡಿದ್ದು, ಗುರುವಾರ ಸಂಜೆ ತಮಿಳುನಾಡು ಅಥವಾ ಆಂಧ್ರ ಪ್ರದೇಶದ ತೀರದಲ್ಲಿ ಇದು ಭೂಪ್ರದೇಶ ಮಾಡುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ.
ತಮಿಳುನಾಡಿನ ತಿರುವಳ್ಳೂರ್, ಕಲ್ಲಕುರಿಚಿ, ಸೇಲಂ, ವೆಲ್ಲೂರು, ತಿರುವಣ್ಣಾಮಲೈ, ರಾಣಿಪೆಟ್ ಮತ್ತು ತಿರುಪತ್ತೂರು ಜಿಲ್ಲೆಗಳಲ್ಲಿ ಗುರುವಾರ ಸಿಡುಲು-ಗುಡುಗಿನಿಂದ ಕೂಡಿದ ಮಳೆ ಸುರಿಯಲಿದೆ. ನೀಲಗಿರಿ, ಕೊಯಮತ್ತೂರು, ಚೆಂಗಲಪಟ್ಟು, ನಾಮಕಲ್, ತಿರುಚಿರಾಮಳ್ಳಿ, ಚೆನ್ನೈ ಮತ್ತು ಪುದುಚೇರಿಗಳಲ್ಲಿ ಭಾರಿ ಮಳೆಯಾಗಲಿದೆ. ಇದೇ ಪರಿಸ್ಥಿತಿ ಮುಂದಿನ ಎರಡೂ ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ
ಚೆನ್ನೈ ನಗರಕ್ಕೆ ಪ್ರಸ್ತುತ ರೆಡ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಸೂಚನೆಯ ಮೆರೆಗೆ ತಮಿಳುನಾಡು ಸರ್ಕಾರವು ನ.10-11ರಂದು ಚೆನ್ನೈ, ಕಾಂಚೀಪುರಂ, ತಿರುವಲ್ಲೂರು, ಚೆಂಗಲಪಟ್ಟು, ಕಡಲೂರು, ನಾಗಪಟ್ಟಿನಮ್, ತಂಜಾವೂರ್, ತಿರುವರೂರ್ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ವಿಮಾನ ನಿಲ್ದಾಣಕ್ಕೆ ಬರುವ-ಹೋಗುವ ಹಲವು ವಿಮಾನಗಳು ರದ್ದುಗೊಂಡಿವೆ, ಹಲವು ವಿಮಾನಗಳ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡಲಾಗಿದೆ.
Brace yourself #Chennai. It is going to be a bumpy ride for the next 24 hours or so from now. Last hour or so has already shown what is ahead of us in a few areas as heavy spell of #Rains have started to push in. Going to only get heavier from now on #COMK #ChennaiRains #NEM21 pic.twitter.com/UwHLHG8D9S
— Chennai Rains (COMK) (@ChennaiRains) November 10, 2021
ಇದನ್ನೂ ಓದಿ: Chennai Floods ತಮಿಳುನಾಡಿನಲ್ಲಿ ಎಡೆಬಿಡದೆ ಸುರಿದ ಮಳೆಗೆ ಚೆನ್ನೈ ನಗರ ಜಲಾವೃತ; ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯ ಎಚ್ಚರಿಕೆ
ಇದನ್ನೂ ಓದಿ: Chennai Rain: ಕುಂಭದ್ರೋಣ ಮಳೆಗೆ ತತ್ತರಿಸಿದ ಚೆನ್ನೈ; ಇಡೀ ನಗರ ಜಲಾವೃತ, ಐಎಂಡಿಯಿಂದ ರೆಡ್ ಅಲರ್ಟ್ ಘೋಷಣೆ
Published On - 10:17 pm, Wed, 10 November 21