ಪ್ರೇಮಿಯ ಕ್ರೂರತೆ; ಪ್ರೀತಿಸಿದಾಕೆ ಮತ್ತೊಬ್ಬನೊಂದಿಗೆ ಕಾಲಕಳೆಯುತ್ತಿದ್ದಾಳೆಂಬ ಸಿಟ್ಟಿನಲ್ಲಿ 18 ಬಾರಿ ಇರಿದ ಯುವಕ

ಘಟನೆ ನಡೆದದ್ದು ಗ್ರೇಟರ್​ ಹೈದರಾಬಾದ್​ ವ್ಯಾಪ್ತಿಯ ಹಸ್ತಿನಾಪುರಂನಲ್ಲಿ. ಎಲ್​ಬಿ ನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಈ ನಗರದಲ್ಲಿ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು. 

ಪ್ರೇಮಿಯ ಕ್ರೂರತೆ; ಪ್ರೀತಿಸಿದಾಕೆ ಮತ್ತೊಬ್ಬನೊಂದಿಗೆ ಕಾಲಕಳೆಯುತ್ತಿದ್ದಾಳೆಂಬ ಸಿಟ್ಟಿನಲ್ಲಿ 18 ಬಾರಿ ಇರಿದ ಯುವಕ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Nov 11, 2021 | 9:33 AM

ಹೈದರಾಬಾದ್​: ಯುವತಿಯೊಬ್ಬಳು ಆಕೆಯ ಪ್ರಿಯಕರನಿಂದ ಬರ್ಬರವಾಗಿ ಹಲ್ಲೆಗೊಳಗಾಗಿದ್ದಾಳೆ. ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದೇ ಈ ಹಲ್ಲೆಗೆ  ಕಾರಣ ಎಂದು ಹೇಳಲಾಗಿದೆ. ಆದರೆ ಆಕೆಯ ಮೇಲೆ ಯುವಕ ಮಾಡಿದ ಹಲ್ಲೆಯ  ಭೀಕರತೆ ನಿಜಕ್ಕೂ ಶಾಕ್​ ತರುವಂತಿದೆ. ಆ ವ್ಯಕ್ತಿ ಯುವತಿಗೆ ಬರೋಬ್ಬರಿ 18 ಬಾರಿ ಇರಿದಿದ್ದಾನೆ.

ಈ ಘಟನೆ ನಡೆದದ್ದು ಗ್ರೇಟರ್​ ಹೈದರಾಬಾದ್​ ವ್ಯಾಪ್ತಿಯ ಹಸ್ತಿನಾಪುರಂನಲ್ಲಿ. ಎಲ್​ಬಿ ನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಈ ನಗರದಲ್ಲಿ ಬಾಡಿಗೆ ರೂಂನಲ್ಲಿ ಆಕೆ ವಾಸವಾಗಿದ್ದಳು.  ಯುವತಿಯ ಹೆಸರು ಶಿರೀಷಾ. ಆರೋಪಿ ಬಸವರಾಜ್​. ಇವರಿಬ್ಬರೂ ವಿಕಾರಾಬಾದ್​ ಜಿಲ್ಲೆಯ ದೌಲತಾಬಾದ್​​ ನಿವಾಸಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದಲೂ ರಿಲೇಶನ್​ಶಿಪ್​​ನಲ್ಲಿ ಇದ್ದರು. ಆದರೆ ಎರಡು ತಿಂಗಳಿಂದ ಶಿರೀಷಾ ಬೇರೊಬ್ಬನ ಸಂಘ ಮಾಡಿದ್ದೇ ಬಸವರಾಜ್​ ಕೋಪಕ್ಕೆ ಕಾರಣ. ಶಿರೀಷಾ ಇತ್ತೀಚೆಗೆ ಶ್ರೀಧರ್​ ಎಂಬುವನೊಂದಿಗೆ ತುಂಬ ಕ್ಲೋಸ್​ ಆಗಿದ್ದಳು. ಹೀಗಾಗಿ ಬಸವರಾಜ್​ನನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು. ಇದೇ ಕಾರಣಕ್ಕೆ ಕೋಪಗೊಂಡ ಬಸವರಾಜ್​ ಶಿರೀಷಾಳಿಗೆ 18 ಬಾರಿ ಚಾಕುವಿನಿಂದ ಇರಿದಿದ್ದಾನೆ. ಆಕೆಯೀಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಇದನ್ನೂ ಓದಿ: ಸಕ್ರೆಬೈಲು ಆನೆ ಮರಿಗೆ ಪುನೀತ್​ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ

Published On - 9:29 am, Thu, 11 November 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ