AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​; ಶಾಕಿಂಗ್​ ವಿಡಿಯೊ ವೈರಲ್​

ನಿಯಂತ್ರಣ ತಪ್ಪಿದ ಪರಿಣಾಮ ಬೈಕ್​, ಬಟ್ಟೆ ಅಂಗಡಿಯ ಒಳಕ್ಕೆ ನುಗ್ಗಿದೆ. ತೆಲಂಗಾಣದಲ್ಲಿ ನಡೆದ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗಿದೆ.

Shocking Video: ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​; ಶಾಕಿಂಗ್​ ವಿಡಿಯೊ ವೈರಲ್​
ಬಟ್ಟೆ ಅಂಗಡಿಯ ಒಳಗೆ ನುಗ್ಗಿದ ಬೈಕ್​
Follow us
TV9 Web
| Updated By: shruti hegde

Updated on:Nov 11, 2021 | 10:04 AM

ವಾಹನದಲ್ಲಿ ಸಂಚರಿಸುತ್ತಿರುವಾಗ ಎಷ್ಟು ಎಚ್ಚರದಲ್ಲಿದ್ದರೂ ಸಾಲದು. ಕೊಂಚ ನಿಯಂತ್ರಣ ತಪ್ಪಿದರೂ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಬೈಕ್ ಸವಾರ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಪರಿಣಾಮ ಬಟ್ಟೆ ಅಂಗಡಿಯ ಒಳಗೆ ನುಗ್ಗಿದ್ದಾನೆ. ತೆಲಂಗಾಣದಲ್ಲಿ ನಡೆದ ಈ ಘಟನೆಯ ದೃಶ್ಯ ಸಿಸಿಟಿಯಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಆಘಾತಕಾರಿ ವಿಡಿಯೊದಲ್ಲಿ ನೋಡುವಂತೆ ವೇಗವಾಗಿ ಬಂದ ಬೈಕ್ ಅಂಗಡಿಯ ಕೌಂಟರ್​ಗೆ ಹೋಗಿ ಗುದ್ದಿದೆ.

ಬೈಕ್ ವೇಗವಾಗಿದ್ದರಿಂದ ಅಂಗಡಿಯಲ್ಲಿದ್ದ ಗ್ರಾಹಕರೂ ಸಹ ಕಂಗಾಲಾಗಿದ್ದಾರೆ. ಅಂಗಡಿಯೊಳಕ್ಕೆ ಸ್ಟೂಲ್ ಮೇಲೆ ಕುಳಿತಿದ್ದ ಓರ್ವ ಮಹಿಳೆ ಕಂಗಾಲಾಗಿ ಎದ್ದು ನಿಂತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಘಟನೆಯಲ್ಲಿ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದೆ. ಬ್ರೇಕ್ ಫೇಲ್ ಆಗಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಅಂಗಡಿಯ ಒಳಗೆ ನುಗ್ಗಿದೆ ಎಂದು ಬೈಕ್ ಅವಾರ ಹೇಳಿದ್ದಾರೆ.

ಇಂಥದ್ದೇ ಘಟನೆ ಹಿಂದೊಮ್ಮೆ ನಡೆದಿತ್ತು. ಹಳಿಯಲ್ಲಿ ಸಾಗುತ್ತಿದ್ದ ರೈಲು ಬರುತ್ತಿರುವಾಗ ಬೈಕ್ ಸವಾರ ದಾಟಲು ಪ್ರಯತ್ನಿಸಿದ್ದರು. ದಾಟಲು ಕಷ್ಟವಾದ್ದರಿಂದ ಬೈಕ್​ನಿಂದ ಜಿಗಿದು ಸವಾರ ಪ್ರಾಣಾಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದನು. ಶಾಕಿಂಗ್ ವಿಡಿಯೊ ಆಗ ಫುಲ್ ವೈರಲ್ ಆಗಿತ್ತು. ಈ ಘಟನೆ ಈ ವರ್ಷದ ಪ್ರಾರಂಭದಲ್ಲಿ ನಡೆದಿತ್ತು.

ಇದನ್ನೂ ಓದಿ:

Shocking Video: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ಚಿಕನ್​ ತೆಗೆಯುತ್ತಾನೆ ಈ ವ್ಯಕ್ತಿ; ಈತ ಬಳಸೋ ತಂತ್ರವೇನು?

Viral Video: ತಣ್ಣನೇಯ ಐಸ್ ಕ್ರೀಂ ತಿಂದ ಪುಟ್ಟ ಮಗುವಿನ ಕ್ಯೂಟ್​ ರಿಯಾಕ್ಷನ್ ವಿಡಿಯೊ ವೈರಲ್​!

Published On - 9:56 am, Thu, 11 November 21

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ