ಪಂಜಾಬ್​ನಂತೆ ಆಗುವುದಿಲ್ಲ ಎಂದ ಭೂಪೇಶ್ ಬಘೇಲ್; ಛತ್ತೀಸ್​ಗಡ ಕಾಂಗ್ರೆಸ್ ಬೆಳವಣಿಗೆಗಳು ಏನೇನು?

ಛತ್ತೀಸ್​ಗಡ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ರಾಜ್ಯವು ಪಂಜಾಬ್ ನಡೆದ ದಾರಿಯಲ್ಲಿ ಸಾಗುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಛತ್ತೀಸ್​ಗಡ ಮುಖ್ಯಮಂತ್ರಿ ಬಘೇಲ್ ಛತ್ತೀಸ್​ಗಡವು ಪಂಜಾಬ್​ನಂತೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಪಂಜಾಬ್​ನಂತೆ ಆಗುವುದಿಲ್ಲ ಎಂದ ಭೂಪೇಶ್ ಬಘೇಲ್; ಛತ್ತೀಸ್​ಗಡ ಕಾಂಗ್ರೆಸ್ ಬೆಳವಣಿಗೆಗಳು ಏನೇನು?
ಭೂಪೇಶ್ ಬಘೇಲ್, ಟಿ ಎಸ್ ಸಿಂಗ್ ದಿಯೊ
Edited By:

Updated on: Oct 02, 2021 | 5:53 PM

ದೆಹಲಿ: ಪಂಜಾಬ್ ಬಳಿಕ ಛತ್ತೀಸ್​ಗಡ ಕಾಂಗ್ರೆಸ್ ರಾಜಕಾರಣದಲ್ಲಿ ಏರಿಳಿತ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಛತ್ತೀಸ್​ಗಡ ಕಾಂಗ್ರೆಸ್​ನ ಕೆಲವು ಶಾಸಕರು ದೆಹಲಿ ನಾಯಕರ ಭೇಟಿಗೆ ತೆರಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮತ್ತೆ ಮತ್ತೆ ಕೇಳಿಬರುತ್ತಿದೆ. ಈ ಮಧ್ಯೆ, ಛತ್ತೀಸ್​ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಶಾಸಕರು ಅವರ ಇಚ್ಛೆಯಂತೆ ದೆಹಲಿಗೆ ತೆರಳಿದ್ದಾರೆ. ರಾಜಕೀಯ ಚಳುವಳಿ ಏನೂ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.

ಛತ್ತೀಸ್​ಗಡ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ರಾಜ್ಯವು ಪಂಜಾಬ್ ನಡೆದ ದಾರಿಯಲ್ಲಿ ಸಾಗುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಛತ್ತೀಸ್​ಗಡ ಮುಖ್ಯಮಂತ್ರಿ ಬಘೇಲ್ ಛತ್ತೀಸ್​ಗಡವು ಪಂಜಾಬ್​ನಂತೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಛತ್ತೀಸ್​ಗಡ ಕಾಂಗ್ರೆಸ್ ಎರಡು ಭಾಗವಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೋಗೆ ಸೇರಿದ ಎರಡು ಬಣಗಳಾಗಿ ತುಂಡಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹೊರಗೆ ಚಿತ್ರಣ ಆಗಿರುವಷ್ಟು ಕೆಟ್ಟದಾಗಿ ಇಲ್ಲ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಸಿಂಗ್ ದಿಯೋ ಶುಕ್ರವಾರ ತಿಳಿಸಿದ್ದರು.

ಪಂಜಾಬ್​ನಲ್ಲಿ ನವಜೋತ್ ಸಿಂಗ್ ಸಿಧು ಜೊತೆಗಿನ ಭಿನ್ನಾಭಿಪ್ರಾಯ ಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ನಂತರ ಈ ಬೆಳವಣಿಗೆಗಳು ನಡೆದಿವೆ. ಛತ್ತೀಸ್​ಗಡದಲ್ಲಿ ಬಘೇಲ್ ಮುಖ್ಯಮಂತ್ರಿ ಆಗಿ 2.5 ವರ್ಷಗಳನ್ನು ಪೂರೈಸಿದ್ದಾರೆ. ಈಗ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ಕೇಳಿಬರುತ್ತಿದೆ. ಆದರೆ, 2018ರಲ್ಲಿ ಪಕ್ಷ ಅಧಿಕಾರ ವಹಿಸಿದ ವೇಳೆ ಅರ್ಧ ಅವಧಿ ಬಳಿಕ ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪ ಮಾಡಿರಲಿಲ್ಲ.

ಸದ್ಯದ ಮಾಹಿತಿಯಂತೆ ಛತ್ತೀಸ್​ಗಡದ ಸುಮಾರು 30 ಮಂದಿ ಶಾಸಕರು ದೆಹಲಿಯಲ್ಲಿ ಇದ್ದಾರೆ. ಇದು ರಾಜಕೀಯ ವಿಚಾರ ಅಲ್ಲ. ಶಾಸಕರು ಎಲ್ಲಿಗೂ ಹೋಗಬಾರದು ಎಂದು ಇದೆಯೇ? ಎಂದು ಬಘೇಲ್ ಮಾಧ್ಯಮದವರಿಗೆ ಉತ್ತರಿಸಿದ್ದಾರೆ. ಒಂದೆಡೆ ಟಿ.ಎಸ್. ಸಿಂಗ್ ದಿಯೋ ಸಿಎಂ ವಿರುದ್ಧ ಬಂಡಾಯ ಎದ್ದಿದ್ದಾರೆ ಎಂದು ಇದ್ದರೆ ಮತ್ತೊಂದೆಡೆ ಸಿಎಂ ಬದಲಾಯಿಸದಂತೆ 30 ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಂಜಾಬ್​ನಂತೆ ಛತ್ತೀಸ್​ಘಡ್​​ನಲ್ಲೂ ಕಾಂಗ್ರೆಸ್ ನಾಯಕರ ನಡುವೆ ಜಗಳ, ಹೈಕಮಾಂಡ್​​ಗೆ ಮತ್ತೊಂದು ತಲೆನೋವು

ಇದನ್ನೂ ಓದಿ: ಛತ್ತೀಸ್​ಗಡದಲ್ಲಿ ರಾಜಕೀಯ ಬಿಕ್ಕಟ್ಟು: ದೆಹಲಿ ನಾಯಕರನ್ನು ಭೇಟಿಯಾಗಲಿದ್ದಾರೆ ಭೂಪೇಶ್ ಬಘೇಲ್