Chhattisgarh: ಛತ್ತೀಸ್​ಗಢದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನಲ್ಲಿ ದೆವ್ವದ ಕಾಟವಂತೆ!

|

Updated on: May 11, 2023 | 9:55 AM

ಇತ್ತೀಚಿನ ದಿನಗಳಲ್ಲಿ ಛತ್ತೀಸ್​ಗಢದ ಮಹಾಸಮುಂಡ್​ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನಲ್ಲಿ ದೆವ್ವದ ಕಾಟವಂತೆ. ಹೌದು ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನ ಕಾರಿಡಾರ್​ನಲ್ಲಿ ಹುಡುಗಿಯ ನಗು ಕೇಳಿಬರುತ್ತಿದೆ.

Chhattisgarh: ಛತ್ತೀಸ್​ಗಢದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನಲ್ಲಿ ದೆವ್ವದ ಕಾಟವಂತೆ!
ದೆವ್ವ
Follow us on

ಇತ್ತೀಚಿನ ದಿನಗಳಲ್ಲಿ ಛತ್ತೀಸ್​ಗಢ(Chhattisgarh)ದ ಮಹಾಸಮುಂಡ್​ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನಲ್ಲಿ ದೆವ್ವದ ಕಾಟವಂತೆ. ಹೌದು ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್​ನ ಕಾರಿಡಾರ್​ನಲ್ಲಿ ಹುಡುಗಿಯ ನಗು ಕೇಳಿಬರುತ್ತಿದೆ. ಆದರೆ ಕೊಠಡಿಯಿಂದ ಹೊರಗೆ ಬಂದರೆ ಯಾರೂ ಕಾಣುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇತ್ತೀಚೆಗಷ್ಟೇ ಪೊಲೀಸ್ ತಂಡವೊಂದು ಕೂಡ ಹಾಸ್ಟೆಲ್‌ಗೆ ತೆರಳಿ ತನಿಖೆ ನಡೆಸಿದ್ದು, ಅವರ ಸಮ್ಮುಖದಲ್ಲಿ ನಗುವಿನ ಸದ್ದುಗಳು ಕೇಳಿಬರುತ್ತಿದ್ದವು, ಆದರೆ ಆ ಶಬ್ದದ ಮೂಲವನ್ನು ಹುಡುಕಲು ಅವರಿಗೂ ಸಾಧ್ಯವಾಗಿಲ್ಲ.

ಈ ಬಾಲಕರ ಹಾಸ್ಟೆಲ್‌ನಲ್ಲಿ 54 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಹುಡುಗರಿಗೆ ಶಬ್ದ ಕೇಳಲು ಪ್ರಾರಂಭಿಸಿದಾಗ ಹಾಸ್ಟೆಲ್‌ನಲ್ಲಿ ಕೇವಲ 5-6 ಹುಡುಗರು ಇದ್ದರು, ಇತರರು ಬೇಸಿಗೆ ರಜೆಗೆ ಮನೆಗೆ ಹೋಗಿದ್ದರು. ಈ ಬಗ್ಗೆ ವೈದ್ಯಕೀಯ ಕಾಲೇಜು ಡೀನ್ ಯಾಸ್ಮಿನ್ ಖಾನ್, ಇದು ಕೇವಲ ವದಂತಿಯಷ್ಟೇ, ಈ ಘಟನೆಯ ಬಗ್ಗೆ ನನಗೆ ತಿಳಿದಾಗ, ನಾನು ಮಹಾಸಮುಂಡ್ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ತೆರಳಿದ್ದಾರೆ. ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ

ಈ ಬಗ್ಗೆ ಮಾಹಿತಿ ಪಡೆದಾಗ ನಮ್ಮ ಪೊಲೀಸ್ ತಂಡ ಹಾಸ್ಟೆಲ್‌ಗೆ ತೆರಳಿದೆ ಎಂದು ಮಹಾಸಮುಂಡ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ರಾವ್ ತಿಳಿಸಿದ್ದಾರೆ.

ಸದ್ದು ಬರುತ್ತಿದ್ದ ಆವರಣದಲ್ಲಿ ಕೇವಲ 5-6 ವಿದ್ಯಾರ್ಥಿಗಳಿದ್ದರು. ಆದಾಗ್ಯೂ, ಆ ಕೋಣೆಯಲ್ಲಿ ಟಿವಿ ಮತ್ತು ಸ್ಪೀಕರ್ ಕೂಡ ಇತ್ತು ಅದನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ