ನ್ಯಾಯಾಂಗದ ಸ್ವಾತಂತ್ರ್ಯ ಎಂದರೆ ಯಾವಾಗಲೂ ಸರ್ಕಾರದ ವಿರುದ್ಧ ತೀರ್ಪು ನೀಡುವುದು ಎಂದಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಕೆಲವು ಗುಂಪುಗಳು ತಮ್ಮ ಪರವಾಗಿ ತೀರ್ಪು ನೀಡುವಂತೆ ನ್ಯಾಯಾಲಯಗಳ ಮೇಲೆ ಒತ್ತಡ ಹೇರಲು ಮಾಧ್ಯಮವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದರು.
ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ, ಪ್ರಕರಣಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನ್ಯಾಯಮೂರ್ತಿಗಳನ್ನು ನಂಬುವಂತೆ ಜನರಲ್ಲಿ ಕೇಳಿಕೊಂಡರು. ನ್ಯಾಯಮೂರ್ತಿಗಳು ತಮ್ಮ ಆತ್ಮಸಾಕ್ಷಿಯು ಅವರಿಗೆ ಏನು ಹೇಳುತ್ತದೆ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು.
ತೀರ್ಪು ಯಾರ ಪರವಾಗಿ ಬಂದರೂ ನ್ಯಾಯದ ಕಡೆಯೇ ಇರುತ್ತದೆ ಎಂಬುದನ್ನು ನಂಬಬೇಕಿದೆ. ಸರ್ಕಾರ ವಿರುದ್ಧ ತೀರ್ಪು ನೀಡಿದಾಗ ಅದು ಸರಿ ಸರ್ಕಾರದ ಪರ ತೀರ್ಪು ನೀಡಿದಾಗ ಅದು ತಪ್ಪು ಎನ್ನುವಂತಿಲ್ಲ ಏಕೆಂದರೆ ಸರ್ಕಾರದ ವಿರುದ್ಧ ಹೋಗಬೇಕಾದ ಪ್ರಕರಣಗಳಲ್ಲಿ ಅವರ ವಿರುದ್ಧವೂ ತೀರ್ಪು ನೀಡಿದ್ದೇವೆ. ಏನೇ ನಿರ್ಣಯಿಸಬೇಕಿದ್ದರೂ ಕಾನೂನಿನ ಪ್ರಕಾರವೇ ಹೋಗಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಗಣೇಶ ಪೂಜೆಯಂದು ನನ್ನ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಅದು ಸಾರ್ವಜನಿಕ ಭೇಟಿಯೇ ಹೊರತು ಖಾಸಗಿ ಭೇಟಿಯಾಗಿರಲಿಲ್ಲ. ನ್ಯಾಯಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಗಳ ಭೇಟಿಯಲ್ಲಿ ತಪ್ಪೇನಿಲ್ಲ ಎಂದು ಚಂದ್ರಚೂಡ್ ಹೇಳಿದ್ದಾರೆ. ಚಂದ್ರಚೂಡ್ ಅವರು ಈ ನವೆಂಬರ್ 10 ರಂದು ನಿವೃತ್ತರಾಗುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ