New CBI Chief: ಅಂತಿಮ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಮೂವರ ಹೆಸರು

|

Updated on: May 25, 2021 | 11:33 AM

ಚರ್ಚೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರು "ಆರು ತಿಂಗಳ ನಿಯಮ" ವನ್ನು ಎತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಈ ನಿಯಮ  ಹಿಂದೆಂದೂ ಈ ರೀತಿ ಉಲ್ಲೇಖವಾಗಿರಲಿಲ್ಲ.

New CBI Chief: ಅಂತಿಮ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಮೂವರ ಹೆಸರು
ಸಿಬಿಐ ಕಚೇರಿ
Follow us on

ದೆಹಲಿ: ಕೇಂದ್ರ ತನಿಖಾ ದಳದ (ಸಿಬಿಐ) ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲು ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವರು ಅಧಿಕಾರಿಗಳ ಹೆಸರನ್ನು ಶಾರ್ಟ್‌ಲಿಸ್ಟ್  ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮೂವರು ಅಧಿಕಾರಿಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಮಹಾರಾಷ್ಟ್ರದ ಡಿಜಿಪಿ ಸುಭೋದ್‌ ಕುಮಾರ್‌ ಜೈಸ್ವಾಲ್, ಸಶಸ್ತ್ರ ಸೀಮಾ ದಳದ ಡಿಜಿ ಕೆ.ಆರ್‌.ಚಂದ್ರ ಹಾಗೂ ಗೃಹ ಸಚಿವಾಲಯ ವಿಶೇಷ ಕಾರ‍್ಯದರ್ಶಿ (ಆಂತರಿಕ ಭದ್ರತೆ) ವಿಎಸ್‌ಕೆ ಕೌಮುದಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಹಿರಿಯರಾಗಿರುವ ಸುಭೋದ್ ಕುಮಾರ್ ಜೈಸ್ವಾಲ್ ಮುಂಚೂಣಿಯಲ್ಲಿದ್ದಾರೆ.

ಚರ್ಚೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರು “ಆರು ತಿಂಗಳ ನಿಯಮ” ವನ್ನು ಎತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಈ ನಿಯಮ  ಹಿಂದೆಂದೂ ಈ ರೀತಿ ಉಲ್ಲೇಖವಾಗಿರಲಿಲ್ಲ.

ಆರು ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಹೊಂದಿರುವ ಅಧಿಕಾರಿಗಳನ್ನು ಪೊಲೀಸ್ ಮುಖ್ಯ ಹುದ್ದೆಗಳಿಗೆ ಪರಿಗಣಿಸಬಾರದು ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯಮೂರ್ತಿ ರಮಣ ಉಲ್ಲೇಖಿಸಿದ್ದಾರೆ. ಆಯ್ಕೆ ಸಮಿತಿ ಈ ಕಾನೂನನ್ನು ಪಾಲಿಸಬೇಕು ಎಂದು ಅವರು ಹೇಳಿದರು.

ಅತಿದೊಡ್ಡ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರಾಗಿ ಸಮಿತಿಯಲ್ಲಿರುವ ಅಧೀರ್ ರಂಜನ್ ಚೌಧರಿ ಅವರು ಈ ನಿಯಮವನ್ನು ಬೆಂಬಲಿಸಿದ್ದು, ಮೂರು ಸದಸ್ಯರ ಸಮಿತಿಯಲ್ಲಿ ಬಹುಮತದ ಬೆಂಬಲ ಸಿಕ್ಕಿದೆ. ಹಾಗಾಗಿ ಸರ್ಕಾರದ ಶಾರ್ಟ್ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಆಗಸ್ಟ್ 31 ರಂದು ನಿವೃತ್ತಿಯಾಗುತ್ತಿರುವ ಗಡಿ ಭದ್ರತಾ ಪಡೆ ಮುಖ್ಯಸ್ಥ ರಾಕೇಶ್ ಅಸ್ತಾನಾ ಮತ್ತು ಮೇ 31 ರಂದು ನಿವೃತ್ತರಾದ ರಾಷ್ಟ್ರೀಯ ತನಿಖಾ ಸಂಸ್ಥೆ ಮುಖ್ಯಸ್ಥ ವೈ.ಸಿ.ಮೋದಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಪಿಎಂ ಮೋದಿಯವರ ನಿವಾಸದಲ್ಲಿ ಸಮಿತಿಯ ಸಭೆ ಸುಮಾರು ನಾಲ್ಕು ತಿಂಗಳು ತಡವಾಗಿ ನಡೆದಿದೆ.

ಹೆಸರುಗಳ ಬಗ್ಗೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸರ್ಕಾರ ” casual approach ” ಅನುಸರಿಸಿದೆ ಎಂದು ಆರೋಪಿಸಿ ಚೌಧರಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನಗೆ 109 ಹೆಸರುಗಳು ಲಭಿಸಿವೆ. ಈ ಪೈಕಿ ಸಮಿತಿ ಸಭೆಗೆ ಮುನ್ನ ನಿನ್ನೆ 16 ಹೆಸರುಗಳನ್ನು ಪಟ್ಟಿಯಲ್ಲಿರಿಸಲಾಗಿದೆ ಎಂದಿದ್ದಾರೆ.

ಕಾರ್ಯವಿಧಾನವನ್ನು ಅನುಸರಿಸಿದ ರೀತಿ, ಸಮಿತಿಯ ಆದೇಶಕ್ಕೆ ವಿರುದ್ಧವಾಗಿತ್ತು. ಮೇ 11 ರಂದು ನನಗೆ 109 ಹೆಸರುಗಳನ್ನು ನೀಡಲಾಯಿತು … ಮತ್ತು ಇಂದು ಮಧ್ಯಾಹ್ನ 1 ರ ಹೊತ್ತಿಗೆ 10 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಸಂಜೆ 4 ರ ಹೊತ್ತಿಗೆ ಆರು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಈ ಪ್ರಾಸಂಗಿಕ ವಿಧಾನವು ಹೆಚ್ಚು ಆಕ್ಷೇಪಾರ್ಹವಾಗಿದೆ ಎಂದಿದ್ದಾರೆ ಚೌಧರಿ.

ಫೆಬ್ರವರಿಯಿಂದ ಖಾಲಿ ಇರುವ ಈ ಹುದ್ದೆಗೆ ನಾಲ್ಕು ಹಿರಿಯ-ಹೆಚ್ಚಿನ ಬ್ಯಾಚ್‌ಗಳ (1984-87) ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ಪರಿಗಣಿಸಲಾಗಿದೆ. ಸಮಿತಿಯು ಸಿಬಿಐ ನಿರ್ದೇಶಕರನ್ನು ಹಿರಿತನ , ಸಮಗ್ರತೆ ಮತ್ತು ಭ್ರಷ್ಟಾಚಾರ-ವಿರೋಧಿ ಪ್ರಕರಣಗಳ ತನಿಖೆಯಲ್ಲಿನ ಅನುಭವದ ಆಧಾರದ ಮೇಲೆ ನಾಲ್ಕು ಹಿರಿಯ-ಹೆಚ್ಚಿನ ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳ ಪಟ್ಟಿಯಿಂದ ಆಯ್ಕೆ ಮಾಡುತ್ತದೆ ಎಂದು ಕಾನೂನು ಹೇಳುತ್ತದೆ.

ಇದನ್ನೂ ಓದಿ:Cyclone Yaas: ಯಾಸ್ ಚಂಡಮಾರುತ ಎದುರಿಸಲು ಕೈಗೊಂಡ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ

Narada Bribery Case ಸುವೇಂದು ಅಧಿಕಾರಿ ವಿರುದ್ಧ ತನಿಖೆ ನಡೆಸಲು ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದ್ದೇವೆ: ಸಿಬಿಐ

(Chief Justice of India NV Ramana emphasised a rule That Eliminated Government Choices For CBI Chief says Sources)

Published On - 11:29 am, Tue, 25 May 21