ತಾಲಿಬಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಡಿಎಸ್​ ಬಿಪಿನ್​ ರಾವತ್

| Updated By: Lakshmi Hegde

Updated on: Aug 25, 2021 | 5:33 PM

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್​-CDS) ಬಿಪಿನ್​ ರಾವತ್  (Bipin Rawat)ತಾಲಿಬಾನಿಗಳಿಗೊಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ (Afghanistan)ವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳಿಂದ ಭಾರತಕ್ಕೆ ಯಾವುದೇ ತೊಂದರೆಯಾದರೂ, ಉಳಿದ ಭಯೋತ್ಪಾದಕ ಸಂಘಟನೆ (Terrorists)ಗಳನ್ನು, ಚಟುವಟಿಕೆಗಳನ್ನು ಎದುರಿಸಿದ ರೀತಿಯಲ್ಲೇ ಅವರೊಂದಿಗೂ ವರ್ತಿಸಲಾಗುವುದು. ನಮ್ಮ ರಕ್ಷಣೆ, ಭದ್ರತೆ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ನಾವು ಸಿದ್ಧ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನಕ್ಕೆ ಸಂಬಂಧಪಟ್ಟಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಆ ದೇಶದಿಂದ ಭಾರತಕ್ಕೆ ಮಾರಕವಾಗುವ ಯಾವುದೇ ಚಟುವಟಿಕೆಗಳ ವಿರುದ್ಧ ನಾವು ಭಯೋತ್ಪಾದನೆ ವಿರುದ್ಧ ಹೋರಾಡಿದ ಮಾದರಿಯಲ್ಲೇ ಹೋರಾಟ […]

ತಾಲಿಬಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಡಿಎಸ್​ ಬಿಪಿನ್​ ರಾವತ್
ಬಿಪಿನ್​ ರಾವತ್​
Follow us on

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್​-CDS) ಬಿಪಿನ್​ ರಾವತ್  (Bipin Rawat)ತಾಲಿಬಾನಿಗಳಿಗೊಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ (Afghanistan)ವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳಿಂದ ಭಾರತಕ್ಕೆ ಯಾವುದೇ ತೊಂದರೆಯಾದರೂ, ಉಳಿದ ಭಯೋತ್ಪಾದಕ ಸಂಘಟನೆ (Terrorists)ಗಳನ್ನು, ಚಟುವಟಿಕೆಗಳನ್ನು ಎದುರಿಸಿದ ರೀತಿಯಲ್ಲೇ ಅವರೊಂದಿಗೂ ವರ್ತಿಸಲಾಗುವುದು. ನಮ್ಮ ರಕ್ಷಣೆ, ಭದ್ರತೆ ವಿಚಾರದಲ್ಲಿ ಯಾವುದೇ ಹೋರಾಟಕ್ಕೂ ನಾವು ಸಿದ್ಧ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನಕ್ಕೆ ಸಂಬಂಧಪಟ್ಟಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಆ ದೇಶದಿಂದ ಭಾರತಕ್ಕೆ ಮಾರಕವಾಗುವ ಯಾವುದೇ ಚಟುವಟಿಕೆಗಳ ವಿರುದ್ಧ ನಾವು ಭಯೋತ್ಪಾದನೆ ವಿರುದ್ಧ ಹೋರಾಡಿದ ಮಾದರಿಯಲ್ಲೇ ಹೋರಾಟ ಮಾಡುತ್ತೇವೆ ಎಂದು ಬಿಪಿನ್​ ರಾವತ್ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.  

‘The India-US Partnership: Securing the 21st Century ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಪಿನ್​ ರಾವತ್, ಅಫ್ಘಾನಿಸ್ತಾನವನ್ನು ತಾಲಿಬಾನ್​ ಇನ್ನೂ ಕೆಲವು ತಿಂಗಳುಗಳ ನಂತರ ವಶಪಡಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟು ಶೀಘ್ರದಲ್ಲೇ ಅದು ನಡೆದಿದ್ದು ನಮಗೂ ಅಚ್ಚರಿ ಮೂಡಿಸಿದೆ. 20 ವರ್ಷಗಳ ಹಿಂದೆ ಇದ್ದ ಅದೇ ತಾಲಿಬಾನ್​ ಇದು. ಇದೀಗ ಅಫ್ಘಾನಿಸ್ತಾನದಿಂದ ಬರುತ್ತಿರುವ ವರದಿಗಳನ್ನು ಅವಲೋಕಿಸಿದರೇ ಗೊತ್ತಾಗುತ್ತದೆ, ತಾಲಿಬಾನಿಗಳು ಬದಲಾಗಿಲ್ಲ ಎಂಬುದು. ಆದರೆ ಈಗ ತಾಲಿಬಾನಿಗಳ ಪಾಲುದಾರರು (Partners) ಬದಲಾಗಿದ್ದಾರಷ್ಟೇ ಎಂದು ಹೇಳಿದ್ದಾರೆ.  ಹಾಗೇ ಉಗ್ರರನ್ನು ಗುರುತಿಸುವುದು, ಅವರ ವಿರುದ್ಧ ಹೋರಾಡುವುದರಲ್ಲಿ ಸಮನ್ವಯತೆ ಇದ್ದರೆ ತುಂಬ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲಿಬಾನಿಗಳ ಕೈಯಲ್ಲಿ ಹೈಟೆಕ್​ ಮಾರಕಾಸ್ತ್ರಗಳು
ಅಫ್ಘಾನಿಸ್ತಾನವನ್ನು ತಾಲಿಬಾನ್​ ಉಗ್ರರು ವಶಪಡಿಸಿಕೊಂಡ ನಂತರ ಅಫ್ಘಾನ್​ ಸೈನ್ಯಕ್ಕೆ ಯುಎಸ್​ ಸರ್ಕಾರ ನೀಡಿದ್ದ ಎಲ್ಲ ಆಧುನಿಕ ಶಸ್ತ್ರಾಸ್ತ್ರಗಳೂ ಕೂಡ ಉಗ್ರರ ಪಾಲಾಗಿವೆ. ಯುಎಸ್​ ಮಿಲಿಟರಿ ಉಪಕರಣಗಳನ್ನು ಕದ್ದು ತಾವೂ ಕೂಡ ಪ್ರಬಲರಾಗಿದ್ದಾರೆ. ಅಷ್ಟೇ ಅಲ್ಲ, ಮುಂದುವರಿದ ಯುದ್ಧ ವಿಮಾನಗಳನ್ನೂ ಹೊಂದಿದ್ದಾರೆ. ಹಾಗೇ, ಕ್ಷಿಪಣಿ ಸೌಲಭ್ಯಗಳು ಅವರ ಬಳಿ ಇವೆ. ಆದರೆ ಭಾರತ ಸೇರಿ ಅನೇಕ ರಾಷ್ಟ್ರಗಳು ತಾಲಿಬಾನಿಗಳನ್ನು ಉಗ್ರರೆಂದೇ ಹೇಳಿದ್ದು, ಪಾಕಿಸ್ತಾನ, ಚೀನಾ ಸೇರಿ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಅವರನ್ನು ಒಪ್ಪಿಕೊಂಡಿವೆ.

ಇದನ್ನೂ ಓದಿ: ಕೊರೋನಾ ಹೆಸರಲ್ಲಿ 13 ಕೋಟಿ ರೂ. ವಂಚಿಸಿ ಜೈಲು ಪಾಲಾದ ಭಾರತೀಯ ಟೆಕ್ಕಿ..!

ಕೊರೊನಾ ಲಸಿಕೆಯಲ್ಲಿ ಭಾರತ ಹೊಸ ದಾಖಲೆ; ದೇಶದಲ್ಲಿ 59 ಕೋಟಿ ಡೋಸ್ ಲಸಿಕೆ ವಿತರಣೆ

Published On - 4:43 pm, Wed, 25 August 21